Advertisement

ಐಫೋನ್‌ ಫೋಟೋ ಸ್ಪರ್ಧೆ ಗೆದ್ದ ಚೌಗುಲೆ

12:26 AM Apr 15, 2022 | Team Udayavani |

ಮುಂಬಯಿ: ವಿಶ್ವವಿಖ್ಯಾತ ತಾಂತ್ರಿಕ ದೈತ್ಯ ಆ್ಯಪಲ್‌ ಕಂಪೆನಿ ಏರ್ಪಡಿಸಿದ್ದ ಶಾಟ್‌ ಆನ್‌ ಐಫೋನ್‌ ಜಾಗತಿಕ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾರತೀಯರೊಬ್ಬರು ಜಯಗಳಿಸಿದ್ದಾರೆ.

Advertisement

ಮಹಾರಾಷ್ಟ್ರದ ಕೊಲ್ಹಾಪುರದ ಪ್ರಜ್ವಲ್‌ ಚೌಗುಲೆ ಅವರು ಜಗತ್ತಿನಲ್ಲಿ ಜಯಗಳಿಸಿದ ಹತ್ತುಮಂದಿಯಲ್ಲಿ ಒಬ್ಬರು. ಅವರು ಐಫೋನ್‌ನಲ್ಲಿ ತೆಗೆದ ಚಿತ್ರ ಆ್ಯಪಲ್‌.ಕಾಮ್‌, ಆ್ಯಪಲ್‌ನ ಇನ್‌ಸ್ಟಾಗ್ರಾಮ್‌ ಖಾತೆ ಮತ್ತಿತರ ಕಡೆ ವಿಶ್ವದ ಆಯ್ದ ನಗರಗಳಲ್ಲಿ ಪ್ರದರ್ಶನಗೊಳ್ಳಲಿದೆ.

ಚೌಗುಲೆ ಅವರು ಜೇಡರಬಲೆಯ ಚಿತ್ರ ತೆಗೆದಿದ್ದರು. ಮುಂಜಾನೆಯ ಇಬ್ಬನಿಯಿಂದ ಆ ಬಲೆ ತೋಯ್ದಿತ್ತು. ಅದರಲ್ಲಿನ ಹನಿಗಳು ಮುತ್ತಿನಂತೆ ಹೊಳೆಯುತ್ತಿವೆ. ಈ ಕಾರಣದಿಂದ ಬಹುಮಾನ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next