Advertisement

ಇಂಡಿಯನ್‌ ವೆಲ್ಸ್‌ ಟೆನಿಸ್‌: ಪ್ರಜ್ಞೆಶ್‌ ಗುಣೇಶ್ವರನ್‌ ಸವಾಲು ಅಂತ್ಯ

12:30 AM Mar 13, 2019 | Team Udayavani |

ಇಂಡಿಯನ್‌ ವೆಲ್ಸ್‌: “ಇಂಡಿಯನ್‌ ವೆಲ್ಸ್‌’ ಟೆನಿಸ್‌ ಕೂಟದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ ಭಾರತೀಯ ಟೆನಿಸಿಗ ಪ್ರಜ್ಞೆಶ್‌ ಗುಣೇಶ್ವರನ್‌ ಅವರ ಆಟ ಕೊನೆಗೊಂಡಿದೆ. ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ತೃತೀಯ ಸುತ್ತಿನ ಪಂದ್ಯದಲ್ಲಿ ಅವರು ಕ್ರೊವೇಶಿಯಾದ ಇವೊ ಕಾರ್ಲೋವಿಕ್‌ ವಿರುದ್ಧ 3-6, 6-7 (3-7) ಸೆಟ್‌ಗಳಿಂದ ಸೋತು ಕೂಟದಿಂದ ನಿರ್ಗಮಿಸಿದ್ದಾರೆ. ಪ್ರಜ್ಞೆàಶ್‌ ವೃತ್ತಿ ಜೀವನದಲ್ಲಿ ಈ ಕೂಟದ ಮೂರನೇ ಸುತ್ತಿನವರೆಗೆ ಬಂದಿರುವುದೇ ವಿಶೇಷವಾಗಿದೆ. ಮೂರನೇ ಸುತ್ತಿನಲ್ಲಿ ಹೊರಬಿದ್ದರೂ ಅವರು 61 ರ್‍ಯಾಂಕಿಂಗ್‌ ಅಂಕ ಪಡೆದುಕೊಳ್ಳಲಿದ್ದು, ರ್‍ಯಾಂಕಿಂಗ್‌ನಲ್ಲಿ ಜೀವಮಾನ ಶ್ರೇಷ್ಠ 82ನೇ ರ್‍ಯಾಂಕ್‌ಗೆ ಏರಲಿದ್ದಾರೆ. “ಕಾರ್ಲೋವಿಕ್‌ ಅವರ ಸರ್ವ್‌ಗೆ ಪ್ರತಿಕ್ರಿಯೆ ನೀಡಲು ನನಗೆ ಕಷ್ಟವಾಗುತ್ತಿತ್ತು. ಮುನ್ನಡೆ ಸಾಧಿಸಲು ಕೆಲವೊಂದು ಅವಕಾಶಗಳಿದ್ದವು. ಒಟ್ಟಾರೆಯಾಗಿ ಇಲ್ಲಿನ ಪ್ರದರ್ಶನದಿಂದ ಖುಷಿ ಇದೆ. ಈ ಕೂಟದಲ್ಲಿ ಇಲ್ಲಿಯವರೆಗೆ ಬಂದಿರುವುದು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ’ ಎಂದು ಪ್ರಜ್ಞೆಶ್‌ ಹೇಳಿದ್ದಾರೆ. 

Advertisement

ಜೊಕೋ ಆಟ ಮುಂದೂಡಿಕೆ
ಜರ್ಮನಿಯ ಫಿಲಿಪ್‌ ಕೋಹ್ಲಶ್ರೀಬರ್‌ ವಿರುದ್ಧ ವಿಶ್ವದ ನಂಬರ್‌ ವನ್‌ ಆಟಗಾರ ಜೊಕೋವಿಕ್‌ ಅವರ ತೃತೀಯ ಸುತ್ತಿನ ಆಟ ಮಳೆಯಿಂದಾಗಿ ರದ್ದಾಗಿದೆ. ಜೊಕೋವಿಕ್‌ 1-0 ಅಂಕಗಳ ಮುನ್ನಡೆಯಲ್ಲಿದ್ದಾಗ ಮಳೆ ಆರಂಭವಾದ ಕಾರಣ ಪಂದ್ಯವನ್ನು ಮುಂದೂಡಲಾಗಿದೆ. ಈ ಪಂದ್ಯದ ವಿಜೇತರು ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಗಾಲ್‌ ಮೊನ್‌ಫಿಲ್ಸ್‌ ಅವರನ್ನು ಎದುರಿಸಲಿದ್ದಾರೆ. ಮೊನ್‌ಫಿಲ್ಸ್‌ ಅವರು ಆಲ್ಬರ್ಟ್‌ ರೊಮೊಸ್‌ ವಿನೊಲಸ್‌ ವಿರುದ್ಧ 6-0, 6-3 ನೇರ ಸೆಟ್‌ಗಳಿಂದ ಗೆದ್ದರು. 

3ನೇ ರ್‍ಯಾಂಕಿನ ಜರ್ಮನಿಯ ಅಲೆಕ್ಸಾಂಡರ್‌ ಜ್ವರೇವ್‌ ತನ್ನದೇ ದೇಶದ ಜಾನ್‌ ಲೆನಾರ್ಡ್‌ ಸ್ಟ್ರಾಫ್ ವಿರುದ್ಧ 3-6, 1-6 ನೇರ ಸೆಟ್‌ಗಳಿಂದ ಸೋತರು. ಸ್ಟ್ರಾಫ್ಗೆ ಮುಂದಿನ ಎದುರಾಳಿ ಕೆನಡದ ಮಿಲೋಸ್‌ ರೋನಿಕ್‌. ಅವರು ಮಾರ್ಕಸ್‌ ಗಿರೋನ್‌ ಅವರನ್ನು 4-6, 6-4, 6-4 ಸೆಟ್‌ಗಳಿಂದ ಸೋಲಿಸಿ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ.  

ಬೋಪಣ್ಣ-ಶಪವಲೋವ್‌ಗೆ ಸೋಲು
ಡಬಲ್ಸ್‌ ವಿಭಾಗದಲ್ಲಿ ಭಾರತದ ರೋಹನ್‌ ಬೋಪಣ್ಣ ಮತ್ತು ಡೆನ್ನಿಸ್‌ ಶಪವಲೋವ್‌ ಅವರು ನೋವಾಕ್‌ ಜೊಕೋವಿಕ್‌-ಫ್ಯಾಬಿಯೊ ಫಾಗ್ನಿನಿ ವಿರುದ್ಧ 6-4, 1-8, 8-10 ಸೆಟ್‌ಗಳಿಂದ ಸೋತು ಕೂಟದಿಂದ ನಿರ್ಗಮಿಸಿದ್ದಾರೆ.

ಒಸಾಕಾ, ವೀನಸ್‌ಗೆ ಮುನ್ನಡೆ
ವನಿತಾ ವಿಭಾಗದಲ್ಲಿ ವಿಶ್ವದ ನಂಬರ್‌ ವನ್‌ ಮತ್ತು ಹಾಲಿ ಚಾಂಪಿಯನ್‌ ನವೋಮಿ ಒಸಾಕಾ, ವೀನಸ್‌ ವಿಲಿಯಮ್ಸ್‌ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಜಪಾನಿನ  ಒಸಾಕಾ  ಅಮೆರಿಕದ ಡೇನಿಯಲ್‌ ಕೊಲಿನ್ಸ್‌ ಅವರ ವಿರುದ್ಧ ಒಂದು ಗಂಟೆ 22 ನಿಮಿಷಗಳ ಹೋರಾಟದ ಆನಂತರ 6-4, 6-2 ನೇರ ಸೆಟ್‌ಗಳಿಂದ ಜಯಿಸಿದರು. ಮುಂದಿನ ಸುತ್ತಿನಲ್ಲಿ ಅವರು ಸ್ವಿಟ್ಸರ್‌ಲ್ಯಾಂಡ್‌ನ‌ ಬಿಲಿಂಡಾ ಬೆನ್ಸಿಕ್‌ ಅವರನ್ನು ಎದುರಿಸಲಿದ್ದಾರೆ. ವೀನಸ್‌ ವಿಲಿಯಮ್ಸ್‌ ಅರ್ಹತಾ ಆಟಗಾರ್ತಿ ಕ್ರಿಸ್ಟಿನಾ ಮೆಕ್‌ಹೆಲ್‌ ಅವರನ್ನು 6-2, 7-5 ನೇರ ಸೆಟ್‌ಗಳಿಂದ ಸೋಲಿಸಿದರು. ಅವರಿಗೆ ಮುಂದಿನ ಎದುರಾಳಿ ಜರ್ಮನಿಯ ಮೊನಾ ಬಾರ್ತೆಲ್‌. 

Advertisement
Advertisement

Udayavani is now on Telegram. Click here to join our channel and stay updated with the latest news.

Next