Advertisement

ಇಂಡಿಯನ್‌ ವೆಲ್ಸ್‌ ಟೆನಿಸ್‌ : ನೂರಿ-ಬಾಸಿಲಶ್ವಿ‌ಲಿ ಫೈನಲ್‌

10:11 PM Oct 17, 2021 | Team Udayavani |

ಇಂಡಿಯನ್‌ ವೆಲ್ಸ್‌ (ಕ್ಯಾಲಿಫೋರ್ನಿಯಾ): ಬ್ರಿಟನ್ನಿನ ಕ್ಯಾಮರಾನ್‌ ನೂರಿ ಇಂಡಿಯನ್‌ ವೆಲ್ಸ್‌ ಟೆನಿಸ್‌ ಪಂದ್ಯಾವಳಿಯ ಫೈನಲ್‌ಗೆ ಮುನ್ನುಗ್ಗಿದ್ದಾರೆ. ಇದು ಅವರ ಮೊದಲ ಮಾಸ್ಟರ್ 1000 ಫೈನಲ್‌ ಆಗಿದೆ.

Advertisement

ವಿಶ್ವ ರ್‍ಯಾಂಕಿಂಗ್‌ನಲ್ಲಿ 26ನೇ ಸ್ಥಾನದಲ್ಲಿರುವ, 26 ವರ್ಷದ ಕ್ಯಾಮರಾನ್‌ ನೂರಿ ಸೆಮಿಫೈನಲ್‌ನಲ್ಲಿ ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೋವ್‌ ಅವರನ್ನು 6-2, 6-4 ಅಂತರದಿಂದ ಮಣಿಸಿದರು.

ನೂರಿ ಅವರ ಫೈನಲ್‌ ಎದುರಾಳಿ ಜಾರ್ಜಿಯಾದ ನಿಕೋಲಸ್‌ ಬಾಸಿಲಶ್ವಿ‌ಲಿ. ಇನ್ನೊಂದು ಸೆಮಿಫೈನಲ್‌ನಲ್ಲಿ ಅವರು ಅಮೆರಿಕದ ಟೇಲರ್‌ ಫ್ರಿಟ್ಸ್‌ ವಿರುದ್ಧ 7-6 (7-5), 6-3 ಅಂತರದ ಗೆಲುವು ಸಾಧಿಸಿದರು.

ವನಿತೆಯರ ಫೈನಲ್‌ ಮುಖಾಮುಖಿ ಸ್ಪೇನಿನ ಪೌಲಾ ಬಡೋಸಾ ಹಾಗೂ ಬೆಲರೂಸ್‌ನ ವಿಕ್ಟೋರಿಯಾ ಅಜರೆಂಕಾ ನಡುವೆ ಸಾಗಲಿದೆ.

ಇದನ್ನೂ ಓದಿ:ಚೆನ್ನೈಯಲ್ಲೇ ಉಳಿಯಲಿದ್ದಾರೆ ಮಹೇಂದ್ರ ಸಿಂಗ್‌ ಧೋನಿ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next