Advertisement

Chikkamagaluru: ರಾಹುಲ್ ಗಾಂಧಿ ಭಾರತ ವಿರೋಧಿ ನಾಯಕರೆಂಬ ಅನುಮಾನ ಕಾಡುತ್ತಿದೆ: ಸಿ.ಟಿ ರವಿ

04:01 PM Sep 14, 2024 | Team Udayavani |

ಚಿಕ್ಕಮಗಳೂರು: ರಾಹುಲ್ ಗಾಂಧಿ (Rahul Gandhi) ಲೋಕಸಭೆ ವಿರೋಧ ಪಕ್ಷದ ನಾಯಕರೋ, ಭಾರತ ವಿರೋಧಿ ನಾಯಕರೋ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C.T Ravi) ಪ್ರಶ್ನಿಸಿದರು.

Advertisement

ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಹುಲ್ ಗಾಂಧಿ ಭಾರತ ವಿರೋಧಿ ನಾಯಕರು ಎಂಬ ಅನುಮಾನ ಕಾಡುತ್ತಿದೆ. ಭಾರತಕ್ಕೆ ಚೀನಾ, ಪಾಕಿಸ್ತಾನ ವಿರೋಧಿ ಆದರೆ, ರಾಹುಲ್ ಹೇಳಿಕೆ, ಚಟುವಟಿಕೆ ಭಾರತಕ್ಕೆ ವಿರೋಧಿಯಂತಿದೆ ಎಂದರು.

ಅಮೆರಿಕಾದಲ್ಲಿ ರಾಹುಲ್ ಗಾಂಧಿಯವರು ಇಲಿಯಾಸ್ ಓಮರ್ ಎಂಬ ಭಾರತ ವಿರೋಧಿ ಸಂಸದರನ್ನು ಭೇಟಿಯಾಗಿದ್ದಾರೆ. ಇಂಗ್ಲೆಂಡಿಗೆ ಭೇಟಿ ನೀಡಿದಾಗ ಭಾರತ ವಿರೋಧಿಗಳನ್ನು ಭೇಟಿ ಮಾಡುತ್ತಾರೆ. ಅಮೆರಿಕಾದಲ್ಲಿ ಭಾರತ ವಿರೋಧಿಗಳ ಜತೆ ಮಾತುಕತೆ ಮಾಡುತ್ತಾರೆ. ಚೀನಾವನ್ನು ಹೊಗಳುತ್ತಾರೆ. ಹೊರದೇಶದಲ್ಲಿ ಭಾರತವನ್ನು ತೆಗಳುತ್ತಾರೆ ಎಂದು ರಾಹುಲ್ ಗಾಂಧಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ನಾಗಮಂಗಲ ಗಲಭೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಗಣಪತಿ ಮೆರವಣಿಗೆಯಲ್ಲಿದ್ದವರು ಯಾವ ಮುಸ್ಲಿಂ ಮೇಲು ತಲ್ವಾರ್ ಝಳಪಿಸಿಲ್ಲ, ಮಸೀದಿ ಮೇಲೆ ಕಲ್ಲು ತೂರಿಲ್ಲ. ತಲ್ವಾರ್ ಝಳಪಿಸಿದ್ದು ಕಲ್ಲು ತೂರಿದ್ದು ಮುಸ್ಲಿಂ ಮತಾಂಧರು ಎಂದರು.

ಮತಾಂಧರ ಮೇಲೆ ಕ್ರಮ ಆಗಬೇಕಿತ್ತು. ಈ ಹೇಡಿ ಸರ್ಕಾರ ಗಣಪತಿ ಕೂರಿಸಿದವರನ್ನೇ ಎ1 ಮಾಡಿದೆ. 1 ರಿಂದ 18 ಆರೋಪಿಗಳು ಶಾಂತಿಯುತ ಮೆರವಣಿಗೆ ಮಾಡಿದವರು. ಓಲೈಕೆ ರಾಜನೀತಿ ಪರಿಣಾಮ ಮತಾಂಧತೆಗೆ ಕೊನೆ ಇಲ್ಲದಂತಾಗಿದೆ ಎಂದು ದೂರಿದರು.

Advertisement

ಗಣಪತಿ ಮೆರವಣಿಗೆ ಬರಬಾರದು ಎನ್ನಲು ಅವರು ಯಾರು? ಮೊದಲು ಅವರನ್ನು ಒದ್ದು ಒಳಗೆ ಹಾಕಬೇಕಿತ್ತು. ಸರ್ಕಾರ ಗಣಪತಿ ಕೂರಿಸಿದವರನ್ನು ಎ1 ಮಾಡಿದ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ನಾಗಮಂಗಲ ಶಾಂತಿ ಸಭೆಗೆ ಮಾಧ್ಯಮ ನಿರ್ಬಂಧ ಮತ್ತು ಮುತಾಲಿಕ್ ಆಗಮನಕ್ಕೆ ನಿರ್ಬಂಧ ಸಂಬಂಧ ಮಾತನಾಡಿದ ಅವರು, ಲಾಡೆನ್ ಬಂದರೆ ಹಮಾರ ಆದ್ಮಿ ಎಂದು ಬಿಟ್ಟುಕೊಳ್ಳುತ್ತಾರೆ. ಮುತಾಲಿಕ್ ಹೋದರೆ ಇವರಿಗೆ ಸಂಕಟ. ಬಾಂಬ್ ಹಾಕುವವನು, ತಾಲಿಬಾನಿಗಳು ಬಂದರೇ, ನಮ್ದುಕೆ ಜನ ನಮ್ಗೆ ಓಟ್ ಹಾಕ್ತಾರೆ ಅಂತ ಕಾಂಗ್ರೆಸ್ ನವರು ತಲೆ ಮೇಲೆ ತೋಪಿ ಹಾಕ್ಕೊಂಡು ಕರೆದುಕೊಳ್ಳುತ್ತಾರೆ. ತಾಲಿಬಾನಿಗಳು ಇವರೋ ಅವರೋ ಯಾರು ಎಂಬ ವ್ಯತ್ಯಾಸನೇ ಗೊತ್ತಾಗದಂಗೆ ನಾಟಕ ಮಾಡುತ್ತಾರೆ. ಮಾಧ್ಯಮಗಳನ್ನು ಹೊರಗಿಟ್ಟು ಶಾಂತಿಸಭೆ ಮಾಡುವುದು ತಮ್ಮ ಹುಳುಕು ಮುಚ್ಚಿಕೊಳ್ಳಲಿಕ್ಕಾ ಎಂದು ಪ್ರಶ್ನಿಸಿದ ಅವರು ಇಂಟಾಲರೆನ್ಸ್ ಮೈಂಡ್ ಸೆಟ್ ಸರಿಪಡಿಸಲಿ ಆಗ ಶಾಂತಿ ನೆಲೆಸುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.