ರಾಜ್‌ಕೋಟ್: ಭಾರತದ ಕ್ರಿಕೆಟ್ ಅಂಪಾಯರ್ ನಿತಿನ್ ಮೆನನ್ ಐಸಿಸಿ ಎಲೈಟ್ ಪ್ಯಾನೆಲ್‌ನಲ್ಲಿ ಮುಂದು ವರಿಯಲಿದ್ದಾರೆ. ಶ್ರೀಲಂಕಾ ಪ್ರವಾಸದ ವೇಳೆ ತಟಸ್ಥ ಅಂಪಾಯರ್ ಆಗಿ ಕಾರ್ಯ ನಿಭಾಯಿಸಲಿದ್ದಾರೆ. ನಿತಿನ್ ಮೆನನ್ ಅವರಿಗೆ ಐಸಿಸಿ ಒಂದು ವರ್ಷದ ವಿಸ್ತರಣೆ ನೀಡಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
38 ವರ್ಷದ, ಇಂದೋರ್‌ನವರಾದ ನಿತಿನ್ ಮೆನನ್ 11 ಸದಸ್ಯರ ಎಲೈಟ್ ಪ್ಯಾನೆಲ್‌ನಲ್ಲಿರುವ ಭಾರತದ ಏಕೈಕ ಅಂಪಾಯರ್ ಆಗಿದ್ದಾರೆ.
2020ರಲ್ಲಿ ನಿತಿನ್ ಮೆನನ್ ಅವರಿಗೆ ಎಲೈಟ್ ಪ್ಯಾನಲ್‌ಗೆ ಭಡ್ತಿ ನೀಡಲಾಗಿತ್ತು. ಅವರು ಇಲ್ಲಿ ಕಾಣಿಸಿಕೊಂಡ ಭಾರತದ 3ನೇ ಅಂಪಾಯರ್ ಎನಿಸಿದರು. ಉಳಿದಿಬ್ಬರೆಂದರೆ ಎಸ್. ವೆಂಕಟ ರಾಘವನ್ ಮತ್ತು ಎಸ್. ರವಿ.
ಪ್ರಸ್ತುತ ನಿತಿನ್ ಮೆನನ್ ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿಯಲ್ಲಿ ಕರ್ತವ್ಯ ನಿಭಾಯಿಸುತ್ತಿ ದ್ದಾರೆ. ಇದು ಮುಗಿದ ಬಳಿಕ ಶ್ರೀಲಂಕಾ-ಆಸ್ಟ್ರೇಲಿಯ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಐಸಿಸಿ ಎಲೈಟ್ ಪ್ಯಾನೆಲ್: ನಿತಿನ್ ಮೆನನ್ (ಭಾರತ), ಅಲೀಂ ದಾರ್ (ಪಾಕಿಸ್ಥಾನ), ಕ್ರಿಸ್ ಗಫಾನಿ (ನ್ಯೂಜಿಲ್ಯಾಂಡ್), ಕುಮಾರ ಧರ್ಮ ಸೇನ (ಶ್ರೀಲಂಕಾ), ಮರಾçಸ್ ಎರಾಸ್ಮಸ್ (ದಕ್ಷಿಣ ಆಫ್ರಿಕಾ), ಮೈಕಲ್ ಗಾಫ್, ರಿಚರ್ಡ್ ಇಲ್ಲಿಂಗ್‌ವರ್ತ್, ರಿಚರ್ಡ್ ಕೆಟಲ್‌ಬರೋ (ಇಂಗ್ಲೆಂಡ್), ಪಾಲ್ ರೀಫೆಲ್, ರಾಡ್ ಟ್ಯುಕರ್ (ಆಸ್ಟ್ರೇಲಿಯ) ಮತ್ತು ಜೋಯೆಲ್ ವಿಲ್ಸನ್ (ವೆಸ್ಟ್ ಇಂಡೀಸ್).