Advertisement

ತ‌ರ‌ತರದ‌ ತೋಳ್ಬಂದಿಗಳು

06:40 AM Oct 13, 2017 | |

ಭಾರತೀಯ ಸಾಂಪ್ರದಾಯಿಕ ಆಭರಣಗಳ ಧರಿಸುವಿಕೆಗೆ  ತಮ್ಮದೇ ಆದ ಮಹತ್ವ ಮತ್ತು ಪ್ರಯೋಜನಗಳಿವೆ. ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಯಾದ ಸೀರೆಗಳಿಗೆ ಧರಿಸಲ್ಪಡುತ್ತಿದ್ದ ಆಭರಣಗಳಾದ ಬಳೆಗಳು, ಡಾಬುಗಳು, ಕೈಕಡಗಗಳು, ಕಾಲ್ಕಡಗಗಳು, ಗೆಜ್ಜೆಗಳು, ಹಾರಗಳು, ಕಾಲುಂಗುರಗಳು, ತೋಳ್ಬಂದಿಗಳು ತಮ್ಮದೇ ಆದ ವಿಶೇಷ ಪ್ರಯೋಜನಗಳನ್ನು ನೀಡುತ್ತವೆ. ಕೇವಲ ಸೌಂದರ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಅವುಗಳು ನಮ್ಮ ಆರೋಗ್ಯದ ಮೇಲೆಯೂ ಉತ್ತಮ ಪರಿಣಾಮವನ್ನು ಬೀರುವಂಥವುಗಳಾಗಿರುತ್ತವೆ. ಅಂತಹ ಆಭರಣಗಳಲ್ಲಿ ತೋಳ್ಬಂದಿಗಳು ಅಥವ ಬಾಜುಬಂದ್‌ ಗಳು ಅಥವಾ ಆಮ್ಲೆìಟ್ಸ… ಎಂದು ಕರೆಯಲ್ಪಡುವ ಈ ಆಭರಣಗಳನ್ನು ತೋಳುಗಳಲ್ಲಿ ಧರಿಸುವುದರಿಂದ ಕೈಗಳಲ್ಲಿ ಉತ್ತಮ ರಕ್ತಸಂಚಲನವನ್ನು ಉಂಟುಮಾಡುತ್ತದೆ ಮತ್ತು ಮಹಿಳೆಯ ಕೈಗಳಿಗೆ ಉತ್ತಮ ಬಲವನ್ನು ನೀಡುವಲ್ಲಿ ಸಹಾಯಕವಾಗುತ್ತವೆ ಎನ್ನಲಾಗುತ್ತದೆ. ಈ ಹಿಂದೆ  ತೋಳ್ಬಂದಿಗಳು ವಧುವಿನ ಅಲಂಕಾರದಲ್ಲಿ ಅಥವಾ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ತೋಳ್ಬಂದಿಗಳು ಫ್ಯಾಷನ್‌ ಆಕ್ಸೆಸ್ಸರಿಗಳಲ್ಲಿ ಒಂದಾಗಿದೆ. ಕೇವಲ ಸಾಂಪ್ರದಾಯಿಕ ಉಡುಗೆಗಳಿಗಷ್ಟೇ ತೊಡುವ ಮಾದರಿಗಳಲ್ಲದೆ ಮಾಡರ್ನ್ ಉಡುಪುಗಳಿಗೆ ಒಪ್ಪುವಂತಹ ಫ್ಯೂಷನ್‌ ಮಾದರಿಗಳು, ಸ್ಟೈಲಿಶ್‌ ಮಾಡರ್ನ್ ಮಾದರಿಗಳಲ್ಲಿಯೂ ದೊರೆಯುತ್ತಿದೆ. ತೋಳ್ಬಂದಿಗಳ ಲೋಕದಲ್ಲಿ ಒಮ್ಮೆ ವಿಹರಿಸಿ ಬರೋಣ.

Advertisement

1 ಥೆÅಡ್‌ ಆಮ್ಲೆìಟ್‌…
ಇವು ಬಹಳ ಹಿಂದಿನಿಂದಲೂ ಬಳಸಲ್ಪಡುತ್ತಿದ್ದ ತೋಳ್ಬಂದಿಗಳಾಗಿವೆ. ಮಧ್ಯದಲ್ಲಿ ವಿಧ ವಿಧದ ಪೆಂಡೆಂಟ್‌ ಇದ್ದು ಅದರ ಇಕ್ಕೆಲಗಳಲ್ಲಿ ಥೆÅಡ್‌ನ್ನು ಹೊಂದಿರುವ ಬಗೆಗಳಾಗಿವೆ. ಈ ಥೆÅಡ್‌ಗಳು ತೋಳುಗಳ ಸುತ್ತ ಸುತ್ತಲು ಬಳಸಲ್ಪಡುವಂಥವುಗಳಾಗಿವೆ. ಗೋಲ್ಡ… ಮತ್ತು ಸಿಲ್ವರ್‌ ಮತ್ತು ಇಮಿಟೇಶನ್‌ ಮೆಟಲ್‌ ಬಾಜುಬಂದುಗಳು ದೊರೆಯುತ್ತವೆ. ಸರಳವಾದ ಬಗೆಯಾಗಿದ್ದು ಸುಂದರವಾಗಿ ಕಾಣುತ್ತವೆ. ಧರಿಸಲು ಕೂಡ ಬಹಳ ಆರಾಮದಾಯಕ ವಾಗಿರುತ್ತವೆ.

2 ಚೈನ್‌ ಮಾದರಿಯ ಆಮ್ಲೆìಟ್‌…
ಹೆಸರಿಗೆ ತಕ್ಕಂತೆ ಇವು ಚೈನ್‌ ಮಾದರಿಯ ತೋಳ್ಬಂದಿಗಳು. ಇವುಗಳಲ್ಲಿ ಥೆÅಡ್‌ ನ ಬದಲು ಸುಂದರವಾಗಿ ಅಂಲಂಕೃತಗೊಂಡ ಚೈನನ್ನು ಬಳಸಲಾಗುತ್ತದೆ. ನಾನಾ ಬಗೆಯ ಡಿಸೈನುಗಳ ಚೈನುಗಳಿಗೆ ಸುಂದರವಾದ ಪೆಂಡೆಂಟುಗಳನ್ನು ಸೇರಿಸಿ ಈ ಬಗೆಯ ತೋಳ್ಬಂದಿಗಳನ್ನು ತಯಾರಿಸಲಾಗುತ್ತದೆ. ಮದುವೆ ಮತ್ತಿತರ ಸಮಾರಂಭಗಳಲ್ಲಿ ಧರಿಸಲು ಸೂಕ್ತವಾದುದು.
 
3 ಬ್ರೈಡಲ್‌ ಆಮ್ಲೆìಟ್‌
ವಧುವಿನ ಅಲಂಕಾರಕ್ಕಾಗಿಯೇ ಮಾದರಿಗೊಳಿಸಿದ ಬಗೆಗಳು ಇವಾಗಿವೆ. ಬಹಳ ಗ್ರ್ಯಾಂಡ್‌ ಲುಕ್ಕನ್ನು ನೀಡುವ ಈ ಬಗೆಯ ಆಭರಣಗಳು ಕುಂದನ್ನುಗಳು, ಸ್ಟೋನುಗಳು, ಮುತ್ತುಗಳು, ಹರಳುಗಳು ಇನ್ನಿತರ ವಸ್ತುಗಳನ್ನು ಬಳಸಿ ತಯಾರಿಸಲಾಗಿರುತ್ತದೆ. ಬಟ್ಟೆಗೆ ಬೇಕಾದ ಬಣ್ಣಗಳ ಕುಂದನ್ನುಗಳನ್ನೊಳಗೊಂಡ ತೋಳ್ಬಂದಿಗಳು ದೊರೆಯುತ್ತವೆ. ಹೆವಿ-ಡಿಸೈನುಗಳಿರುವ ಇವುಗಳು ಕಂಪ್ಲೀಟ್‌ ಬ್ರೈಡಲ್‌ ಲುಕ್ಕನ್ನು ನೀಡುತ್ತವೆ. ಇವುಗಳು ಸೀರೆಗಳು, ಡಿಸೈನರ್‌ ಲೆಹೆಂಗಾಗಳಿಗೆ ಸುಂದರವಾಗಿ ಒಪ್ಪುತ್ತವೆ. 

4 ಡೈಮಂಡ್‌ ಆಮ್ಲೆìಟ್‌
ಇವುಗಳು ಡೈಮಂಡ್‌ ಹರಳುಗಳನ್ನು ಬಳಸಿ ತಯಾರಿಸಲಾದ ತೋಳ್ಬಂದಿಗಳು. ಬಹಳ ದುಬಾರಿಯಾಗಿದ್ದು ಬಹಳ ಎಲಿಗ್ಯಾಂಟ್‌ ಲುಕ್ಕನ್ನು ನೀಡುತ್ತವೆ.  ಇವುಗಳು ಇಂಡೋವೆಸ್ಟರ್ನ್ ಫ್ಯೂಷನ್‌ ದಿರಿಸುಗಳಿಗೆ ಬಹಳ ಸುಂದರವಾಗಿ ಒಪ್ಪುತ್ತವೆ. 

5 ಡಬಲ್‌ ವಿ ಶೇಪ್‌ ಆಮ್ಲೆìಟ್‌ (ವಂಕಿಗಳು)
ಈ ಮಾದರಿಯು ಬಹಳ ಪುರಾತನವಾದ ಡಿಸೈನಾಗಿದ್ದು ತೋಳುಗಳಿಗೆ ಒಪ್ಪವಾಗಿ ಕಾಣುತ್ತವೆ. ಇವುಗಳು ಪ್ರಸ್‌ ಮಾಡುವಂತಹ ಬಗೆಗಳಾದ್ದರಿಂದ ಬೇಕಾದಂತೆ ಅಡ್ಜÓr… ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಗೋಲ್ಡ… ಅಥವಾ ಇಮಿಟೇಶನ್‌ ಗೋಲ್ಡ… ಆಭರಣದಲ್ಲಿ ದೊರೆಯುತ್ತವೆ.

Advertisement

6 ಬಳೆಯಾಕಾರದ ಆಮ್ಲೆìಟ್‌ 
ಹೆಸರಿಗೆ ತಕ್ಕಂತೆ ಬಳೆಯ ಮಾದರಿಯಲ್ಲಿರುವ ಆಮ್ಲೆìಟ್ಟುಗಳಿವಾಗಿದ್ದು, ಸುಲಭವಾಗಿ ಧರಿಸಲು ಮತ್ತು ಬಳಸಲು ಅನುಕೂಲಕರವಾಗಿರುತ್ತವೆ. ಮಧ್ಯದಲ್ಲಿ ದೊಡ್ಡ ಗಾತ್ರದ ಪದಕವಿದ್ದು ಪದಕಗಳು ವಿಭಿನ್ನ ಮಾದರಿಯಲ್ಲಿ ದೊರೆಯುತ್ತವೆ. ಇವುಗಳು ಸಾಂಪ್ರದಾಯಿಕ, ಫ್ಯೂಷನ್‌ ಎರಡು ಬಗೆಯ ದಿರಿಸುಗಳಿಗೂ ಹೊಂದುವಂಥವುಗಳಾಗಿರುತ್ತವೆ. 

7 ಸಿಲ್ವರ್‌ ತೋಳ್ಬಂದಿಗಳು
ಕೇವಲ ಬಂಗಾರದ ತೋಳ್ಬಂದಿಗಳನ್ನಷ್ಟೇ ಧರಿಸಬೇಕೆಂದೇನಿಲ್ಲ ಬೆಳ್ಳಿಯಿಂದ ತಯಾರಾದ ತೋಳ್ಬಂದಿಗಳು ಸಹ ದೊರೆಯುತ್ತವೆ. ಬಂಗಾರದ ಆಭರಣಗಳನ್ನು ಧರಿಸಿ ಬೇಸರ ಬಂದಾಗ ಈ ಬೆಳ್ಳಿಯ ತೋಳ್ಬಂದಿಗಳನ್ನು ಧರಿಸಬಹುದು. ಸ್ವಲ್ಪ ತೆಳುಬಣ್ಣದ ಉಡುಪುಗಳನ್ನು ಧರಸಿದಾಗ ಬಂಗಾರದ ತೋಳ್ಬಂದಿಗಳಿಗಿಂತ ಇವು ಚೆನ್ನಾಗಿ ಒಪ್ಪುತ್ತವೆ.

– ಪ್ರಭಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next