ಗ್ಲಾಸ್ಗೋ: ಗ್ಲಾಸ್ಗೋದಲ್ಲಿ ನಡೆದ ಕಾಪ್26 ಶೃಂಗದಲ್ಲಿ ವಿಶ್ವ ನಾಯಕರನ್ನೇ ಬೆಚ್ಚಿ ಬೀಳಿಸುವಂತೆ ಭಾರತೀಯ ಬಾಲಕಿ, 15 ವರ್ಷದ ವಿನಿಶಾ ಉಮಾಶಂಕರ್ ಮಾಡಿರುವ ಖಡಕ್ ಭಾಷಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಯುಕೆಯ ಪ್ರಿನ್ಸ್ ವಿಲಿಯಮ್ಸ್ ಅವರು ಆಯೋಜಿಸಿದ್ದ “ಅರ್ಥ್ಶಾಟ್ ಪ್ರಶಸ್ತಿ’ಯ ಫೈನಲಿಸ್ಟ್ ಆಗಿದ್ದ ತಮಿಳುನಾಡಿನವರಾದ ವಿನಿಶಾರನ್ನು ಸ್ವತಃ ವಿಲಿಯಮ್ಸ್ ಅವರೇ ಶೃಂಗಕ್ಕೆ ಆಹ್ವಾನಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ವಿಶ್ವ ನಾಯಕರ ಸಮ್ಮುಖದಲ್ಲೇ ವಿನಿಶಾ ದಿಟ್ಟ ಮಾತುಗಳನ್ನಾಡಿದ್ದಾಳೆ.
ನಮ್ಮ ಗ್ರಹವನ್ನು ಸಂರಕ್ಷಿಸಲು ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿರುವ ವಿನಿಶಾ, “ಸುಳ್ಳುಗಳನ್ನೇ ಹೇಳುತ್ತಾ ಬಂದಿರುವ ವಿಶ್ವನಾಗ್ ಬಗ್ಗೆ ನಮ್ಮ ತಲೆಮಾರು ಹತಾಶೆಗೊಂಡಿದೆ ಮತ್ತು ಆಕ್ರೋಶಗೊಂಡಿದೆ.
ಇದನ್ನೂ ಓದಿ:ಕ್ಲಬ್‌ಹೌಸ್: ಕನ್ನಡ ಸೇರಿದಂತೆ 13 ಸ್ಥಳೀಯ ಭಾಷೆಗಳಿಗೆ ಆದ್ಯತೆ
ಅದೇ ಹಳೆಯ ಕಥೆಗಳನ್ನು ಹೇಳುವ ಬದಲು, ನಾವು ಹೊಸ ಭವಿಷ್ಯಕ್ಕಾಗಿ ಹೊಸ ಚಿಂತನೆ ಮಾಡಬೇಕಿದೆ. ನಮ್ಮ ಭವಿಷ್ಯವನ್ನು ರೂಪಿಸಲು ನೀವೆಲ್ಲರೂ ನಿಮ್ಮ ಸಮಯ, ಹಣ ಮತ್ತು ಪ್ರಯತ್ನವನ್ನು ಹೂಡಿಕೆ ಮಾಡಬೇಕು’ ಎಂದು ಒತ್ತಾಯಿಸಿದ್ದಾಳೆ.