ಹೊಸದಿಲ್ಲಿ: ಕಳೆದ 3 ವರ್ಷಗಳಿಂದ ಭಾರತದ ಸೂಪರ್‌ಸ್ಟಾರ್ ಕ್ರಿಕೆಟಿಗರ ನಿರಂತರ ಒತ್ತಡವನ್ನು ಎದುರಿಸಿ ನಿಂತಿದ್ದರಿಂದ ತನಗೆ ಐಸಿಸಿ ಎಲೈಟ್ ಪ್ಯಾನಲ್‌ನಲ್ಲಿ ಸ್ಥಾನ ಸಿಕ್ಕಿತು ಎಂಬುದಾಗಿ ಅಂಪಾಯರ್ ನಿತಿನ್ ಮೆನನ್ ಹೇಳಿದ್ದಾರೆ. ಸದ್ಯದಲ್ಲೇ ಅವರು ಪ್ರತಿಷ್ಠಿತ ಆ್ಯಶಸ್ ಸರಣಿಯಲ್ಲಿ ಅಂಪಾಯರಿಂಗ್ ನಡೆಸುವ ಅವ ಕಾಶವನ್ನು ಪಡೆಯಲಿದ್ದು, ಈ ಹಿನ್ನೆ ಲೆಯಲ್ಲಿ ಪಿಟಿಐಗೆ ನೀಡಿದ ಸಂದ ರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
2020ರಲ್ಲಿ ಐಸಿಸಿ ಎಲೈಟ್ ಪ್ಯಾನಲ್‌ಗೆ ಸೇರ್ಪಡೆಗೊಂಡ ನಿತಿನ್ ಮೆನನ್, ಕೋವಿಡ್-19 ಕಾರಣದಿಂದಾಗಿ ತವರಿನಲ್ಲೇ ಕರ್ತವ್ಯ ನಿಭಾಯಿಸುತ್ತ ಬಂದಿದ್ದರು. ಟಿ20 ವಿಶ್ವಕಪ್ ವೇಳೆ ಆಸ್ಟ್ರೇಲಿಯ-ಯುಎಇ ಪಂದ್ಯದಲ್ಲಿ, ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ಏರ್ಪಟ್ಟ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮೆನನ್ ಅಂಪಾಯರಿಂಗ್ ನಡೆ ಸಿದ್ದರು. ಈವರೆಗೆ 15 ಟೆಸ್ಟ್, 24 ಏಕದಿನ ಹಾಗೂ 20 ಟಿ20 ಅಂತಾ ರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ.
“ಮೊದಲ 2 ವರ್ಷ ಭಾರತೀಯ ಉಪಖಂಡದಲ್ಲಿ ಕರ್ತವ್ಯ ನಿಭಾಯಿಸಿ ದ್ದೊಂದು ಅದ್ಭುತ ಅನುಭವ. ಅನೇಕ ವಿಶ್ವ ದರ್ಜೆಯ ಆಟಗಾರರ ಸಮ್ಮುಖದಲ್ಲಿ ನಿಂತೆ. ಒತ್ತಡಗಳನ್ನು ನಿಭಾಯಿಸುವ ಕಲೆಗಾರಿಕೆ, ಧನಾತ್ಮಕ ಅಂಶಗಳನ್ನೆಲ್ಲ ಒಲಿಸಿಕೊಂಡೆ. ಇದು ಮುಂದಿನ ಆ್ಯಶಸ್ ಸರಣಿಯಲ್ಲಿ ನೆರವಿಗೆ ಬರಲಿದೆ’ ಎಂಬುದಾಗಿ ಮೆನನ್ ಹೇಳಿದರು.
ಶುಕ್ರವಾರ ಆ್ಯಶಸ್ ಸರಣಿ ಆರಂಭ ಗೊಂಡಿದ್ದು, ಅಂತಿಮ 2 ಟೆಸ್ಟ್‌ಗಳಲ್ಲಿ ನಿತಿನ್ ಮೆನನ್ ಕಣಕ್ಕಿಳಿಯುವ ಸಾಧ್ಯತೆ ಇದೆ.