ಕೀವ್: ಯುದ್ಧಗ್ರಸ್ತ ಉಕ್ರೇನ್ ನ ಸುಮಿಯಲ್ಲಿ ಸಿಲುಕಿದ್ದ 600ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳನ್ನು ಬಸ್ ಮೂಲಕ ಸುರಕ್ಷಿತವಾಗಿ ಪೋಲ್ಟಾವಾ ಪ್ರದೇಶಕ್ಕೆ ಮಂಗಳವಾರ (ಮಾರ್ಚ್ 08) ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:22ನೇ ಹರೆಯದಲ್ಲಿ ಇಹಲೋಕ ತ್ಯಜಿಸಿದ ರಾಪರ್-ಯೂಟ್ಯೂಬರ್ ಲಿಲ್ ಬೋ ವೀಪ್
ಸುಮಿ ಪ್ರದೇಶದಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ರಷ್ಯಾ ಸೇನಾ ಪಡೆ ಕದನ ವಿರಾಮ ಘೋಷಿಸಿತ್ತು. ಸುಮಿ ನಗರದಲ್ಲಿ ಸಿಲುಕಿಕೊಂಡಿದ್ದ 694 ಭಾರತೀಯ ವಿದ್ಯಾರ್ಥಿಗಳು ಬಸ್ ಗಳ ಮೂಲಕ ಪೋಲ್ಟಾವಾಕ್ಕೆ ತೆರಳಿರುವುದಾಗಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಕಳೆದ ರಾತ್ರಿ ನಾನು ನಿಯಂತ್ರಣ ಕೊಠಡಿ(ಕಂಟ್ರೋಲ್ ರೂಂ)ಯ ಬಗ್ಗೆ ವಿಚಾರಿಸಿದಾಗ, ಸುಮಿಯಲ್ಲಿ 694 ಭಾರತೀಯ ವಿದ್ಯಾರ್ಥಿಗಳು ಇದ್ದಿರುವುದಾಗಿ ಮಾಹಿತಿ ದೊರಕಿತ್ತು. ಇಂದು ಅವರೆಲ್ಲರೂ ಬಸ್ ಗಳ ಮೂಲಕ ಸುಮಿಯಿಂದ ಪೋಲ್ಟಾವಾ ಪ್ರದೇಶಕ್ಕೆ ತೆರಳಿರುವುದಾಗಿ ಪುರಿ ಮಾಹಿತಿ ನೀಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧವನ್ನು ಮುಂದುವರಿಸಿದ್ದು, ಈಗಾಗಲೇ ಲಕ್ಷಾಂತರ ಮಂದಿ ಉಕ್ರೇನ್ ನಿವಾಸಿಗಳು ದೇಶ ತೊರೆದು ನೆರೆಯ ದೇಶಗಳಿಗೆ ಪಲಾಯನಗೈದಿರುವುದಾಗಿ ವರದಿ ತಿಳಿಸಿದೆ.