Advertisement

ದ. ಆಫ್ರಿಕಾ ತಂಡ “ಬುಚ್ಚಿಬಾಬು’ಸರಣಿಯಲ್ಲಿ ಆಡಲಿ: ಗಾವಸ್ಕರ್‌

06:30 AM Feb 09, 2018 | Team Udayavani |

ಹೊಸದಿಲ್ಲಿ: ಭಾರತದ ಸ್ಪಿನ್‌ ದಾಳಿಗೆ ತತ್ತರಿಸಿ ಏಕದಿನ ಸರಣಿಯಲ್ಲಿ ಸತತ 3 ಪಂದ್ಯ ಸೋತಿರುವ ದಕ್ಷಿಣ ಆಫ್ರಿಕಾ ತಂಡ ಸ್ಪಿನ್‌ ಪಾಠವನ್ನು ಕಲಿಯಲು ಚೆನ್ನೈನಲ್ಲಿ ನಡೆಯುವ “ಬುಚಿ ಬಾಬು’ ಕ್ರಿಕೆಟ್‌ ಸರಣಿಯಲ್ಲಿ ಆಡಲಿ ಎಂದು ಕ್ರಿಕೆಟ್‌ ದಂತಕತೆ ಸುನಿಲ್‌ ಗಾವಸ್ಕರ್‌ ಸಲಹೆ ನೀಡಿದ್ದಾರೆ.

Advertisement

ಸ್ಪಿನ್‌ ಪಾಠ ಕಲಿಯಲು ದಕ್ಷಿಣ ಆಫ್ರಿಕಾ ತಂಡಕ್ಕೆ ಬುಚ್ಚಿಬಾಬು ಸರಣಿ ಸಹಾಯವಾಗುತ್ತದೆ ಎಂದಿರುವ ಗಾವಸ್ಕರ್‌, ಕ್ರಿಕೆಟ್‌ ಸ್ನೇಹಿ ಮೈದಾನದಲ್ಲಿನ ಸ್ಪಿನ್‌ ಪಾಠ ಕಲಿಕೆ ಆಫ್ರಿಕನ್ನರಿಗೆ ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದಿದ್ದಾರೆ. ಜತೆಗೆ ಈ ಹಿಂದೆ ಇದೇ ಸರಣಿಯಲ್ಲಿ ಪಾಲ್ಗೊಂಡಿದ್ದ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌ ತಂಡದ ಆಟಗಾರರು ಪರಿಣಾಮಕಾರಿ ಸುಧಾರಣೆ ಕಂಡಿದ್ದನ್ನು ನೆನಪಿಸಿಕೊಂಡಿದ್ದಾರೆ.

“ಆಫ್ರಿಕಾ ತಂಡ ಚೆನ್ನೈನ ಸ್ಪಿನ್‌ ಅಕಾಡೆಮಿಯಲ್ಲಿ ತಂಗುವ, ಪಾಲ್ಗೊಳ್ಳುವ ಅವಶ್ಯಕತೆಯಿದೆ. ಆಗ ಸ್ಪಿನ್‌ ದಾಳಿಯನ್ನು ಹೇಗೆ ಎದುರಿಸಬೇಕು ಎನ್ನುವುದು ಅರಿವಾಗುತ್ತದೆ. ಈ ಸರಣಿಯಲ್ಲಿ ಭಾರತದ “ಎ’ ತಂಡದ ಹಾಗೂ ಅದಕ್ಕೂ ಕಿರಿಯ ಆಟಗಾರರು ಆಡುತ್ತಿದ್ದಾರೆ. ಹೀಗಾಗಿ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌ನ‌ಂತೆ ಆಫ್ರಿಕನ್ನರಿಗೂ ಸ್ಪಿನ್‌ ಪಾಠ ಕಲಿಯಲು ಇಲ್ಲಿ ಅವಕಾಶವಿದೆ’ ಎಂದು ಗಾವಸ್ಕರ್‌ ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next