Advertisement

ಭಾರತದ ಪ್ರತೀಕಾರಾದ ದಾಳಿ: 7 ಪಾಕ್‌ ಸೈನಿಕರು ಬಲಿ; ನಾಲ್ವರು ಜಖಂ

03:44 PM Jan 15, 2018 | Team Udayavani |

ಜಮ್ಮು : ಪ್ರತೀಕಾರದ ಕ್ರಮವಾಗಿ ಭಾರತೀಯ ಸೈನಿಕರು ಜಮ್ಮು ಕಾಶ್ಮೀರದ ಪೂಂಚ್‌ ಜಿಲ್ಲೆಯ ಎಲ್‌ಓಸಿಯಲ್ಲಿ ಇಂದು ಸೋಮವಾರ  ಪ್ರಬಲ ಗುಂಡಿನ ದಾಳಿ ಸಂಘಟಿಸಿ  7 ಪಾಕ್‌ ಸೈನಿಕರನ್ನು ಬಲಿ ಪಡೆದಿದ್ದಾರೆ ಮತ್ತು ಈ ದಾಳಿಯಲ್ಲಿ ನಾಲ್ವರು ಪಾಕ್‌ ಸೈನಿಕರು ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

Advertisement

ಕಳೆದ ಶನಿವಾರ ಕಾಶ್ಮೀರದ ರಾಜೋರಿ ಜಿಲ್ಲೆಯ ಎಲ್‌ಓಸಿಯಲ್ಲಿ ಪಾಕ್‌ ಸೈನಿಕರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಭಾರತೀಯ ಸೈನಿಕನೋರ್ವ ಹುತಾತ್ಮನಾಗಿದ್ದ.

ಪೂಂಚ್‌ ಜಿಲ್ಲೆಯ ಮೇಂದರ್‌ ಸೆಕ್ಟರ್‌ನ ಎಲ್‌ಓಸಿಯಲ್ಲಿನ ಜಗಲೋತೆ ಪ್ರದೇಶದಲ್ಲಿ  ಭಾರತೀಯ ಸೈನಿಕರು ನಡೆಸಿದ ಪ್ರತೀಕಾರದ ದಾಳಿಗೆ ಪಾಕ್‌ ಸೇನೆ ಭಾರೀ ನಾಶ, ನಷ್ಟ, ಜೀವಹಾನಿಯನ್ನು ಅನುಭವಿಸಿತು ಎಂದು ಸೇನೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಭಾರತ ವಿರೋಧಿ ಚಟುವಟಿಕೆಗಳು ಯಶಸ್ವಿಯಾಗಲು ಎಷ್ಟು ಮಾತ್ರಕ್ಕೂ ಬಿಡಲಾಗದು ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ನಿನ್ನೆಯಷ್ಟೇ ಹೇಳಿದ್ದರಲ್ಲದೆ ಪಾಕ್‌ ಬೆಂಬಲಿತ ಭಯೋತ್ಪಾದನೆಗೆ ಅತ್ಯಂತ ಪ್ರಬಲ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next