Advertisement

ಆ.7ರಿಂದ ಮಹಾರಾಷ್ಟ್ರ-ಬಿಹಾರ ನಡುವೆ “ಕಿಸಾನ್ ಸ್ಪೆಷಲ್ ಪಾರ್ಸೆಲ್” ರೈಲು ಸಂಚಾರ; ಏನಿದು?

05:28 PM Aug 06, 2020 | Nagendra Trasi |

ನವದೆಹಲಿ: ಭಾರತೀಯ ರೈಲ್ವೆ ದೇಶದ ಮೊದಲ “ಕಿಸಾನ್ ಸ್ಪೆಷಲ್ ಪಾರ್ಸೆಲ್” ರೈಲ್ ಅನ್ನು ಮಹಾರಾಷ್ಟ್ರದ ದೇವ್ ಲಾಲಿ ಮತ್ತು ಬಿಹಾರದ ದಾನಾಪುರ್ ನಡುವೆ ಆಗಸ್ಟ್ 7ರಿಂದ ಸಂಚಾರ ಆರಂಭಿಸಲಿದೆ ಎಂದು ವರದಿ ತಿಳಿಸಿದೆ.

Advertisement

ಕಿಸಾನ್ ಸ್ಪೆಷಲ್ ಪಾರ್ಸೆಲ್ ರೈಲು ಮಹಾರಾಷ್ಟ್ರದ ದೇವ್ ಲಾಲಿಯಿಂದ ಆಗಸ್ಟ್ 7ರಿಂದ ಬೆಳಗ್ಗೆ 11ಗಂಟೆಗೆ ಹೊರಡಲಿದೆ, ಈ ರೈಲು ಮರುದಿನ ಸಂಜೆ 6.45ಕ್ಕೆ ದಾನಾಪುರ್ ತಲುಪಲಿದೆ. ಸುಮಾರು 32 ಗಂಟೆಗಳ ಸಂಚಾರದಲ್ಲಿ 1,529 ಕಿಲೋ ಮೀಟರ್ ದೂರವನ್ನು ಈ ರೈಲು ಕ್ರಮಿಸಲಿದೆ ಎಂದು ವರದಿ ವಿವರಿಸಿದೆ.

ಕಿಸಾನ್ ಸ್ಪೆಷಲ್ ರೈಲು ತರಕಾರಿ, ಹಣ್ಣು ಹಂಪಲುಗಳ ಮೂಟೆ ತುಂಬಿಸಿಕೊಳ್ಳಲು ವಿವಿಧ ಸ್ಟೇಷನ್ ಗಳಲ್ಲಿ ನಿಲುಗಡೆಯಾಗಲಿದೆ. ಅಂದರೆ ಈ ರೈಲು ದಿನಂಪ್ರತಿ ಓಡಾಡುವ ಪ್ರಯಾಣಿಕರಿಗೆ ಅಲ್ಲ. ಪಾರ್ಸೆಲ್ ರೈಲಿನಲ್ಲಿ 10+01 ಬೋಗಿ ಇರಲಿದೆ ಎಂದು ವರದಿ ಹೇಳಿದೆ.

ಕಿಸಾನ್ ಸ್ಪೆಷಲ್ ರೈಲು ದೇವ್ ಲಾಲಿಯಿಂದ ಹೊರಟು ನಾಸಿಕ್ ರಸ್ತೆ, ಮನ್ಮಾಡ್, ಜಲ್ಗಾಂವ್, ಭುಸಾವಲ್, ಬುಹ್ರಾನ್ಪುರ್, ಖಾಂಡ್ವಾ, ಇಟ್ರಾಸಿ, ಜಬಲ್ಪುರ್, ಸಾತ್ನಾ, ಕಾಂತಿ, ಮಾಣಿಕ್ ಪುರ್, ಪ್ರಯಾಗ್ ರಾಜ್,ದೀನ್ ದಯಾಳ್ ಉಪಾಧ್ಯಾಯ್ ನಗರ್, ಬಕ್ಸರ್ ಮಾರ್ಗವನ್ನು ಹಾದು ಹೋಗಲಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next