Advertisement

ರೈಲಿಗೂ ಅಳವಡಿಕೆಯಾಗಲಿದೆ ಬ್ಲ್ಯಾಕ್ ಬಾಕ್ಸ್ ಮಾದರಿ ಉಪಕರಣ..ಏನಿದು?

02:58 PM Dec 13, 2018 | Sharanya Alva |

ನವದೆಹಲಿ:ವಿಮಾನ ಅಪಘಾತಕ್ಕೊಳಗಾದ ಸಂದರ್ಭದಲ್ಲಿ ಅದಕ್ಕೆ ಕಾರಣವಾದ ಅಂಶವನ್ನು ಪತ್ತೆ ಮಾಡಲು ಉಪಯೋಗಿಸುವ ಬ್ಲ್ಯಾಕ್ ಬಾಕ್ಸ್(ಕಪ್ಪು ಪೆಟ್ಟಿಗೆ) ರೈಲುಗಳಿಗೂ ಕೂಡಾ ಅಳವಡಿಸುವ ಸಿದ್ಧತೆ ನಡೆದಿದೆ.

Advertisement

ಗುರುವಾರ ರೈಲ್ವೆ ಖಾತೆಯ ರಾಜ್ಯ ಸಚಿವ ರಾಜೆನ್ ಗೋಹೈನ್ ಅವರು ಲೋಕಸಭೆಗೆ ಲಿಖಿತ ರೂಪದಲ್ಲಿ ಉತ್ತರ ನೀಡುವ ಮೂಲಕ ಮಾಹಿತಿ ನೀಡಿದ್ದಾರೆ.

ವಿಮಾನದಲ್ಲಿ ಬಳಕೆ ಮಾಡುವ ಬ್ಲ್ಯಾಕ್ ಬಾಕ್ಸ್ ಮಾದರಿಯಲ್ಲಿಯೇ ಭಾರತೀಯ ರೈಲ್ವೆ ಇದೀಗ ಎಲ್ ಸಿಎವಿಆರ್ (Loco cab audio video recording system) ಮತ್ತು ಸಿವಿವಿಆರ್ ಎಸ್(crew voice/video recording system) ಅನ್ನು ಅಳವಡಿಸಲು ಆರಂಭಿಸಿದೆ ಎಂದು ತಿಳಿಸಿದ್ದಾರೆ.

ಈ ವ್ಯವಸ್ಥೆಯಿಂದ ಅಪಘಾತದ ನಿಖರ ಕಾರಣ ಪತ್ತೆ ಹಚ್ಚಲು ಸಹಾಯಕವಾಗುತ್ತದೆ. ಅಷ್ಟೇ ಅಲ್ಲ ರೈಲ್ವೆ ಸಿಬ್ಬಂದಿಯ ಹಾಗೂ ಕಾರ್ಯಕ್ಷಮತೆಯನ್ನೂ ಗುರುತಿಸಲು ಸಾಧ್ಯವಾಗುತ್ತದೆ ಎಂದು ಲಿಖಿತ ಉತ್ತರದಲ್ಲಿ ವಿವರಿಸಲಾಗಿದೆ.

Advertisement

26 ಎಲ್ ಸಿಎವಿಆರ್/ಸಿವಿವಿಆರ್ ಎಸ್ ಅನ್ನು (23 ಡೀಸೆಲ್ ಮತ್ತು 3 ಇಲೆಕ್ಟ್ರಿಕ್ ರೈಲುಗಳಿಗೆ) ಈಗಾಗಲೇ ಅಳವಡಿಸಲಾಗಿದೆ. 2018-19ನೇ ಸಾಲಿನ ಬಜೆಟ್ ನಲ್ಲಿ 3,500 ಎಲ್ ಸಿವಿಆರ್ ಎಸ್/ಸಿವಿವಿಆರ್ ಎಸ್ ಅನ್ನು ತಯಾರಿಸಲು 100.40 ಕೋಟಿ ರೂಪಾಯಿ ಹಣ ಮಂಜೂರಾಗಿತ್ತು.

ಹಳಿ, ಬೇರಿಂಗ್ ಮತ್ತು ಗಾಲಿಗಳಲ್ಲಿ ಇರುವ ಸಮಸ್ಯೆಯನ್ನು ಮೊದಲೇ ಪತ್ತೆ ಹಚ್ಚಿ ಅವಘಡ ತಪ್ಪಿಸಲು ನೆರವಾಗುವ ನಿಟ್ಟಿನಲ್ಲಿ ಜೂನ್ ತಿಂಗಳಿನಲ್ಲಿ ರಾಯ್ ಬರೇಲಿಯಲ್ಲಿ ಸ್ಮಾರ್ಟ್ ಬೋಗಿಯನ್ನು ರೈಲ್ವೆ ಇಲಾಖೆ ಪರಿಚಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next