Advertisement
ಭಾರತೀಯ ವಾಯು ಸೇನೆ (ಐಎಎಫ್)ಯ 12 ಪೈಲಟ್‌ಗಳಿಗೆ ಫ್ರೆಂಚ್ ವಾಯುನೆಲೆಯಲ್ಲಿ ರಫೇಲ್ ಹಾರಾಟಕ್ಕಾಗಿ ಹಲವು ತಿಂಗಳು ತರಬೇತಿ ನೀಡ ಲಾಗಿತ್ತು. ಈ ಚಾಣಾಕ್ಷ ಪೈಲಟ್‌ಗಳು ಅತ್ಯಂತ ಸರಾಗ ವಾಗಿ ನೂತನ ರಫೇಲ್‌ಗಳೊಂದಿಗೆ ರಾತ್ರಿ ಹಾರಾಟದ ತಾಲೀಮು ನಡೆಸುತ್ತಿದ್ದಾರೆ. ವಿಶೇಷವಾಗಿ ಲಡಾಖ್ ಗಿರಿಶಿಖರಗಳ ಹವಾಗುಣಕ್ಕೆ ತಕ್ಕಂತೆ ರಫೇಲ್‌ಗಳನ್ನು ನಿಯಂತ್ರಿಸುತ್ತಿದ್ದಾರೆ.
ಸರಕಾರದ ಉನ್ನತ ಮೂಲ ಗಳು ಹೇಳುವಂತೆ, ಅಕ್ಸಾಯ್‌ಚಿನ್ ಭಾಗದಲ್ಲಿ ಚೀನದ ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ರಾಡಾರ್‌ಗಳು ಎಷ್ಟೇ ಸಕ್ರಿಯ ಆಗಿದ್ದರೂ ರಫೇಲ್‌ಗಳು ಶತ್ರುಪಡೆಯ ಸಿಗ್ನಲ್‌ಗಳನ್ನು ಯಶಸ್ವಿಯಾಗಿ ಜ್ಯಾಮ್ ಮಾಡಬಲ್ಲವು. ಪಿಎಲ್‌ಎ ತನ್ನ ವಿಮಾನಪತ್ತೆ ರಾಡಾರ್‌ಗಳನ್ನು ಕೇವಲ ಅಮೆರಿಕದ ವಾಯುಸೇನೆಯನ್ನು ಗುರಿ ಯಾಗಿಸಿಕೊಂಡು ನಿರ್ಮಿಸಿದೆ. ಫ್ರೆಂಚ್ ತಂತ್ರಜ್ಞಾನದ ಆಳ-ಅಗಲ ಅಳೆಯಲು ಚೀನಕ್ಕೆ ಅಸಾಧ್ಯ ಎಂದು ರಕ್ಷಣ ತಜ್ಞರೊಬ್ಬರು ವಿಶ್ಲೇಷಿಸಿದ್ದಾರೆ. ಇಸ್ರೇಲ್ ಜತೆಗೆ ಚೀತಾ ಪ್ರಾಜೆಕ್ಟ್
ಜಗತ್ತಿನ ಪ್ರಬಲ ಡ್ರೋನ್ ಎಂದೇ ಹೆಸರಾದ ಇಸ್ರೇಲ್‌ನ “ಹೆರಾನ್’ಗಳ ಖರೀದಿ ಪ್ರಕ್ರಿಯೆಯನ್ನು ಭಾರತೀಯ ಸೇನೆ ಚುರುಕು ಗೊಳಿಸಿದೆ. “ಪ್ರಾಜೆಕ್ಟ್ ಚೀತಾ’ ಹೆಸರಿನಲ್ಲಿ ಹೆರಾನ್‌ಗಳ ಖರೀದಿಗೆ 3,500 ಕೋ.ರೂ. ಬಜೆಟ್ ಪ್ರಸ್ತಾವವನ್ನು ಸೇನೆ ಸಿದ್ಧಪಡಿಸಿದೆ. ಪ್ರಾಜೆಕ್ಟ್ ಚೀತಾದಡಿಯಲ್ಲಿ 90 ಹೆರಾನ್ ಡ್ರೋನ್‌ಗಳನ್ನು ಖರೀದಿಸಲಾಗುತ್ತಿದೆ. ಲೇಸರ್ ನಿರ್ದೇಶಿತ ಬಾಂಬ್‌ಗಳು, ಆಕಾಶದಿಂದ ನೆಲಕ್ಕೆ ಮತ್ತು ಆಕಾಶದಿಂದ ಆಕಾಶಕ್ಕೆ ಗುರಿಯಿಡುವ ಆ್ಯಂಟಿ ಟ್ಯಾಂಕ್ ಕ್ಷಿಪಣಿಗಳು- ಈ 3 ಸುಧಾರಣೆ ಗಳೊಂದಿಗೆ ಹೆರಾನ್ ಖರೀದಿ ನಡೆಯಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.