Advertisement

ಇಂಡಿಯನ್‌ ಪ್ರೀಮಿಯರ್‌ ಲೀಗ್‌-2022: ಮೆಗಾ ಹರಾಜಿನ ಮಹಾ ಕೌತುಕ

11:22 PM Feb 11, 2022 | Team Udayavani |

ಬೆಂಗಳೂರು:ಸಂಪೂರ್ಣ ಹೊಸ ರೂಪ ಪಡೆದುಕೊಳ್ಳಲಿರುವ ಐಪಿಎಲ್‌ ಪಂದ್ಯಾವಳಿಯ ಮೆಗಾ ಹರಾಜು ಪ್ರಕ್ರಿಯೆಗೆ ಬೆಂಗಳೂರು ಸಜ್ಜಾಗಿದೆ.

Advertisement

ಕ್ರಿಕೆಟ್‌ ಪ್ರೇಮಿಗಳು ಈ ಮಹಾ ಕೌತುಕವನ್ನು ಕಾಣಲು ತುದಿಗಾಲಲ್ಲಿ ನಿಂತಿದ್ದಾರೆ. ಶನಿವಾರ ಮತ್ತು ರವಿವಾರ, ಎರಡು ದಿನಗಳ ಕಾಲ ಹರಾಜು ಪ್ರಕ್ರಿಯೆಯ ಜೋಶ್‌ ಇರಲಿದೆ.

ಹಿಂದಿನ ಫ್ರಾಂಚೈಸಿಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಉಳಿದುಕೊಂಡಿದ್ದ ಆಟಗಾರರೆಲ್ಲ ಚದುರಿ ಹೋಗಿ ಬೇರೆ ಬೇರೆ ತಂಡಗಳ ಪಾಲಾಗುವುದು ಈ ಐಪಿಎಲ್‌ನ ವಿಶೇಷ. ಹೀಗಾಗಿ ಯಾರಿಗೆ ಎಷ್ಟು ಮೊತ್ತ ಸಿಕ್ಕೀತು ಎನ್ನುವುದಕ್ಕಿಂತ ಯಾವ ಕ್ರಿಕೆಟಿಗರು ಯಾವ ತಂಡಗಳನ್ನು ಸೇರಿಕೊಂಡಾರು ಎಂಬ ಕುತೂಹಲ ಮೇರೆ ಮೀರಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್‌ ಹರಾಜಿನ ಕೆಲವು ವಿಶೇಷಗಳನ್ನು ಇಲ್ಲಿ ತೆರೆದಿಡಲಾಗಿದೆ.

ಆರ್‌ಟಿಎಂಗೆ ಕೊಕ್‌
ಹಿಂದಿನ ಮೆಗಾ ಹರಾಜಿನಲ್ಲಿದ್ದ ರೈಟ್‌ ಟೂ ಮ್ಯಾಚ್‌ (ಆರ್‌ಟಿಎಂ) ಪ್ರಕ್ರಿಯೆಯನ್ನು ಈ ಬಾರಿ ಕೈ ಬಿಡಲಾಗಿದೆ. ಈ ಪ್ರಕ್ರಿಯೆಯಲ್ಲಿ, ಹಿಂದೆ ತಂಡದಲ್ಲಿದ್ದ ಆಟಗಾರ ಬೇರೆ ತಂಡಕ್ಕೆ ಗರಿಷ್ಠ ಮೊತ್ತಕ್ಕೆ ಮಾರಾಟವಾದರೂ ಮೂಲ ತಂಡಕ್ಕೆ ಅದೇ ಮೊತ್ತಕ್ಕೆ ಆತನನ್ನು ರೀಟೈನ್‌ ಮಾಡಿಕೊಳ್ಳುವ ಅಧಿಕಾರವಿತ್ತು. ಆದರೆ ಈ ಬಾರಿ 2 ನೂತನ ತಂಡಗಳ ಸೇರ್ಪಡೆಯಿಂದ ಈ ನಿಯಮವನ್ನು ಕೈಬಿಡಲಾಗಿದೆ. ಹೀಗಾಗಿ ಗರಿಷ್ಠ ಬಿಡ್‌ ಸಲ್ಲಿಸಿದರಷ್ಟೇ ಆಟಗಾರರು ದೊರೆಯಲಿದ್ದಾರೆ.

ಒಂದು ವೇಳೆ ಒಬ್ಬ ಆಟಗಾರನ ಖರೀದಿ ಸಲುವಾಗಿ ತಂಡಗಳು ತಮ್ಮಲ್ಲಿನ ಎಲ್ಲ ಹಣವನ್ನು ಖರ್ಚು ಮಾಡಿದರೆ ಏನಾಗುತ್ತದೆ? ಇಂಥದ್ದೊಂದು ಸನ್ನಿವೇಶ ಐಪಿಎಲ್‌ಲ್ಲಿ ಈವರೆಗೆ ಬಂದಿಲ್ಲ. ಇದನ್ನು ಸೈಲೆಂಟ್‌ ಬ್ರೇಕರ್‌ ಮೂಲಕ ಇತ್ಯರ್ಥಗೊಳಿಸಲಾಗುವುದು.

Advertisement

ಸೈಲೆಂಟ್‌ ಟೈ ಬ್ರೇಕರ್‌
ಐಪಿಎಲ್‌ನಲ್ಲಿ ಪೊಲಾರ್ಡ್‌ ಮತ್ತು ರವೀಂದ್ರ ಜಡೇಜ, ಶೇನ್‌ ಬಾಂಡ್‌ ಅವರನ್ನು ಖರೀದಿಸುವ ಸಲುವಾಗಿ ಈ ಮೊದಲು “ಸೈಲೆಂಟ್‌ ಟೈ ಬ್ರೇಕರ್‌’ ನಿಯಮದ ಬಳಕೆ ಆಗಿದೆ. ಈ ಬಾರಿ ಆರ್ಚರ್‌ ಅವರನ್ನು ಇದೇ ನಿಯಮದ ಮೂಲಕ ಪ್ರಾಂಚೈಸಿಗಳು ಸೆಳೆಯುವ ಸಾಧ್ಯತೆ ಇದೆ. ಈ ನಿಯಮ 2010 ರಿಂದ ಜಾರಿಯಲ್ಲಿದ್ದರೂ ಈವರೆಗೆ ಬಳಕೆಯಾಗಿಲ್ಲ.

ಒಬ್ಬ ಆಟಗಾರನ ಖರೀದಿ ಸಲುವಾಗಿ ತಂಡಗಳು ತಮ್ಮಲ್ಲಿನ ಎಲ್ಲ ಹಣವನ್ನು ಖರ್ಚು ಮಾಡಿ ಟೈ ಕಂಡಾಗ “ಸೈಲೆಂಟ್‌ ಟೈ ಬ್ರೇಕರ್‌’ ನಿಯಮ ಜಾರಿಗೆ ಬರುತ್ತದೆ. ಉದಾಹರಣೆಗೆ, 2 ತಂಡಗಳು ತಮ್ಮಲ್ಲಿ ಬಾಕಿ ಉಳಿದಿರುವ 6 ಕೋಟಿ ರೂ. ಮೊತ್ತವನ್ನು ಸಂಪೂರ್ಣವಾಗಿ ಬಿಡ್‌ ಮಾಡಿ ಟೈ ಸಾಧಿಸಿದವು ಎಂದಿಟ್ಟುಕೊಳ್ಳೋಣ, ಆಗ ಆ ಆಟಗಾರನ ಖರೀದಿಗೆ ಈ ನಿಯಮ ಅಳವಡಿಸಲಾಗುತ್ತದೆ.

ತಮ್ಮ ಬಳಿ ಯಾವುದೇ ಹಣ ಬಾಕಿ ಇರದಿದ್ದರೂ ಈ ಆಟಗಾರನ ಖರೀದಿ ಸಲುವಾಗಿ ಗರಿಷ್ಠ ಎಷ್ಟೂ ಬಿಡ್‌ ಮಾಡಲು ಸಿದ್ಧ ಎಂದು ಫ್ರಾಂಚೈಸಿಗಳು ಮುಚ್ಚಿದ ಲಕೋಟೆಯಲ್ಲಿ ಬರೆದು ಕೊಡಬೇಕು. ಯಾವ ತಂಡ ಗರಿಷ್ಠ ಬಿಡ್‌ ಮಾಡಿರುತ್ತದೋ ಆ ತಂಡಕ್ಕೆ ಆಟಗಾರನ ಸೇವೆ ಸಿಗಲಿದೆ. ಈ ಗರಿಷ್ಠ ಬಿಡ್ಡಿಂಗ್‌ನಲ್ಲಿ ಟೈ ವರೆಗಿನ ಮೊತ್ತ ಆಟಗಾರನಿಗೆ ಸೇರಿದರೆ ಉಳಿದ ಮೊತ್ತ ಬಿಸಿಸಿಐ ಪಾಲಾಗುತ್ತದೆ.

ಸಂಭಾವ್ಯ ದುಬಾರಿ ಆಟಗಾರರು
ಶ್ರೇಯಸ್‌ ಅಯ್ಯರ್‌, ಡೇವಿಡ್‌ ವಾರ್ನರ್‌, ಇಶಾನ್‌ ಕಿಶನ್‌, ಕ್ವಿಂಟನ್‌ ಡಿ ಕಾಕ್‌, ಕಾಗಿಸೊ ರಬಾಡ, ಪ್ಯಾಟ್‌ ಕಮಿನ್ಸ್‌, ಜೇಸನ್‌ ಹೋಲ್ಡರ್‌, ಆರ್‌. ಅಶ್ವಿ‌ನ್‌, ದೇವದತ್ತ ಪಡಿಕ್ಕಲ್‌, ಶಾದೂìಲ್‌ ಠಾಕೂರ್‌, ಮೊಹಮ್ಮದ್‌ ಶಮಿ, ದೀಪಕ್‌ ಚಹರ್‌, ಪ್ರಸಿದ್ಧ್ ಕೃಷ್ಣ, ಯಜುವೇಂದ್ರ ಚಹಲ್‌, ಶಾರೂಖ್‌ ಖಾನ್‌.

ತಂಡಗಳು ಹೊಂದಿರುವ ಮೊತ್ತ

1. ಚೆನ್ನೈ ಸೂಪರ್‌ ಕಿಂಗ್ಸ್‌: 48 ಕೋಟಿ ರೂ.
ಉಳಿದಿರುವ ಆಟಗಾರರು: ಜಡೇಜ-16 ಕೋ.ರೂ., ಧೋನಿ-12 ಕೋ.ರೂ., ಮೊಯಿನ್‌ -8 ಕೋ.ರೂ., ಗಾಯಕ್ವಾಡ್‌-6 ಕೋ.ರೂ.
ಬೇಕಾಗಿರುವ ಆಟಗಾರರ ಸಂಖ್ಯೆ: 21 (7 ವಿದೇಶಿ)

2. ಡೆಲ್ಲಿ ಕ್ಯಾಪಿಟಲ್ಸ್‌: 47.5 ಕೋಟಿ ರೂ.
ಉಳಿದಿರುವ ಆಟಗಾರರು: ರಿಷಬ್‌ ಪಂತ್‌- 16 ಕೋ.ರೂ., ಅಕ್ಷರ್‌- 9 ಕೋ.ರೂ., ಪೃಥ್ವಿ ಶಾ-7.5 ಕೋ.ರೂ., ಅನ್ರಿಚ್‌ ನೋರ್ಜೆ-6.5 ಕೋ.ರೂ.
ಬೇಕಾಗಿರುವ ಆಟಗಾರರ ಸಂಖ್ಯೆ: 21 (7 ವಿದೇಶಿ)

3. ಕೋಲ್ಕತಾ ನೈಟ್‌ ರೈಡರ್: 48 ಕೋಟಿ ರೂ.
ಉಳಿದಿರುವ ಆಟಗಾರರು: ರಸೆಲ್‌-12 ಕೋ.ರೂ., ಚಕ್ರವರ್ತಿ-8 ಕೋ.ರೂ., ವೆಂಕಟೇಶ್‌ ಅಯ್ಯರ್‌-8 ಕೋ.ರೂ.,ನಾರಾಯಣ್‌-6 ಕೋ.ರೂ.
ಬೇಕಾಗಿರುವ ಆಟಗಾರರ ಸಂಖ್ಯೆ: 21 (6 ವಿದೇಶಿ)

4. ಲಕ್ನೋ ಸೂಪರ್‌ ಜೈಂಟ್ಸ್‌: 59 ಕೋಟಿ ರೂ.
ಡ್ರಾಫ್ಟ್ ಆಟಗಾರರು: ಕೆ.ಎಲ್‌. ರಾಹುಲ್‌-17 ಕೋ.ರೂ., ಮಾರ್ಕಸ್‌ ಸ್ಟೋಯಿನಿಸ್‌-9.2 ಕೋ.ರೂ., ರವಿ ಬಿಷ್ಣೋಯಿ- 4 ಕೋ.ರೂ.
ಬೇಕಾಗಿರುವ ಆಟಗಾರರ ಸಂಖ್ಯೆ: 22 (7 ವಿದೇಶಿ)

5. ಮುಂಬೈ ಇಂಡಿಯನ್ಸ್‌: 48 ಕೋಟಿ ರೂ.
ಉಳಿದಿರುವ ಆಟಗಾರರು: ರೋಹಿತ್‌ -16 ಕೋ.ರೂ., ಬುಮ್ರಾ-12 ಕೋ.ರೂ., ಸೂರ್ಯಕುಮಾರ್‌ -8 ಕೋ.ರೂ.,ಪೊಲಾರ್ಡ್‌-6 ಕೋ.ರೂ.
ಬೇಕಾಗಿರುವ ಆಟಗಾರರ ಸಂಖ್ಯೆ: 21 (7 ವಿದೇಶಿ)

6. ಪಂಜಾಬ್‌ ಕಿಂಗ್ಸ್‌: 72 ಕೋಟಿ ರೂ.
ಉಳಿದಿರುವ ಆಟಗಾರರು: ಅಗರ್ವಾಲ್‌-12 ಕೋ.ರೂ., ಆರ್ಷದೀಪ್‌ ಸಿಂಗ್‌-4 ಕೋ.ರೂ.
ಬೇಕಾಗಿರುವ ಆಟಗಾರರ ಸಂಖ್ಯೆ: 23 (8 ವಿದೇಶಿ)

7. ರಾಜಸ್ಥಾನ್‌ ರಾಯಲ್ಸ್‌: 62 ಕೋ. ರೂ.
ಉಳಿದಿರುವ ಆಟಗಾರರು: ಸಂಜು-14 ಕೋ.ರೂ., ಬಟ್ಲರ್‌-10 ಕೋ.ರೂ, ಜೈಸ್ವಾಲ್‌-4 ಕೋ.ರೂ..
ಬೇಕಾಗಿರುವ ಆಟಗಾರರ ಸಂಖ್ಯೆ: 22 (7 ವಿದೇಶಿ)

8. ಆರ್‌ಸಿಬಿ: 57 ಕೋಟಿ ರೂ.
ಉಳಿದಿರುವ ಆಟಗಾರರು: ವಿರಾಟ್‌ ಕೊಹ್ಲಿ-15 ಕೋ.ರೂ., ಗ್ಲೆನ್‌ ಮ್ಯಾಕ್ಸ್‌ವೆಲ್‌-11 ಕೋ.ರೂ., ಮೊಹಮ್ಮದ್‌ ಸಿರಾಜ್‌-7 ಕೋ.ರೂ.
ಬೇಕಾಗಿರುವ ಆಟಗಾರರ ಸಂಖ್ಯೆ: 22 (7 ವಿದೇಶಿ)

9. ಸನ್‌ರೈಸರ್ ಹೈದರಾಬಾದ್‌: 68 ಕೋ.ರೂ.
ಉಳಿದಿರುವ ಆಟಗಾರರು: ಕೇನ್‌ ವಿಲಿಯಮ್ಸನ್‌ – 14 ಕೋ.ರೂ., ಅಬ್ದುಲ್‌ ಸಮದ್‌-4 ಕೋ.ರೂ., ಉಮ್ರಾನ್‌ ಮಲಿಕ್‌-4 ಕೋ.ರೂ.
ಬೇಕಾಗಿರುವ ಆಟಗಾರರ ಸಂಖ್ಯೆ: 22 (7 ವಿದೇಶಿ)

10. ಗುಜರಾತ್‌ ಟೈಟಾನ್ಸ್‌: 52 ಕೋಟಿ ರೂ.
ಡ್ರಾಫ್ಟ್ ಆಟಗಾರರು: ಹಾರ್ದಿಕ್‌ ಪಾಂಡ್ಯ -15 ಕೋ.ರೂ., ರಶೀದ್‌ ಖಾನ್‌-15 ಕೋ.ರೂ., ಶುಭಮನ್‌ ಗಿಲ್‌-8 ಕೋ.ರೂ.
ಬೇಕಾಗಿರುವ ಆಟಗಾರರ ಸಂಖ್ಯೆ: 22 (7 ವಿದೇಶಿ)

Advertisement

Udayavani is now on Telegram. Click here to join our channel and stay updated with the latest news.

Next