Advertisement

ಪಾಸ್‌ಪೋರ್ಟ್‌ ಶ್ರೇಯಾಂಕ: ದೇಶಕ್ಕೆ 83ನೇ ರ್‍ಯಾಂಕ್‌ ಪ್ರಾಪ್ತಿ

07:44 PM Jan 12, 2022 | Team Udayavani |

ನವದೆಹಲಿ: ಜಗತ್ತಿನ ಪಾಸ್‌ಪೋರ್ಟ್‌ ರ್‍ಯಾಂಕಿಂಗ್‌ ನಲ್ಲಿ ದೇಶದ ಶ್ರೇಯಾಂಕ ಕಳೆದ ವರ್ಷಕ್ಕಿಂತ ಉತ್ತಮವಾಗಿದೆ.

Advertisement

90ನೇ ಸ್ಥಾನದಲ್ಲಿದ್ದ ದೇಶದ ರ್‍ಯಾಂಕಿಂಗ್‌ ಪ್ರಸಕ್ತ ವರ್ಷ 83ಕ್ಕೆ ನೆಗೆದಿದೆ. ಹೆನ್ಲಿ ಪಾಸ್‌ಪೋರ್ಟ್‌ ಇಂಡೆಕ್ಸ್‌ನಲ್ಲಿ ಈ ಅಂಶ ಪ್ರಸ್ತಾಪವಾಗಿದೆ.

2020ರಲ್ಲಿ ದೇಶಕ್ಕೆ 84 ಸ್ಥಾನ ಲಭಿಸಿತ್ತು. 2016ರಲ್ಲಿ ಮಾಲಿ ಮತ್ತು ಉಜ್ಬೇಕಿಸ್ತಾನ್‌ ಜತೆಗೆ 85ನೇ ಸ್ಥಾನವನ್ನು ಹಂಚಿಕೊಂಡಿತ್ತು.

ಪ್ರಸಕ್ತ ಸಾಲಿನ ರ್‍ಯಾಂಕಿಂಗ್‌ನಲ್ಲಿ ಜಪಾನ್‌ ಮತ್ತು ಸಿಂಗಾಪುರ ಮೊದಲ ಎರಡು ಸ್ಥಾನಗಳಲ್ಲಿವೆ. ಜರ್ಮನಿ ಮತ್ತು ದಕ್ಷಿಣ ಕೊರಿಯಾ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿವೆ.

ಇದನ್ನೂ ಓದಿ:ಒಣ ಬೇಸಾಯ ಪದ್ದತಿಯಲ್ಲಿ ರೈತರ ಜೀವನ ಮಟ್ಟ ಸುಧಾರಿಸುತ್ತದೆ : ಡಾ.ಜಿ.ಪರಮೇಶ್ವರ್

Advertisement

ಅಮೆರಿಕ ಮತ್ತು ಯುನೈಟೆಡ್‌ ಕಿಂಗ್‌ಡಮ್‌ ಆರನೇ ಸ್ಥಾನದಲ್ಲಿವೆ. ಪಟ್ಟಿಯಲ್ಲಿ ಅಫ್ಘಾನಿಸ್ತಾನ ಕೊನೆಯ ಸ್ಥಾನದಲ್ಲಿದ್ದು 111ನೇ ಶ್ರೇಯಾಂಕ ಪಡೆದುಕೊಂಡಿದೆ.

2005ರಿಂದ ಪಾಸ್‌ಪೋರ್ಟ್‌ ಇಂಡೆಕ್ಸ್‌ ಅನ್ನು ಪ್ರಕಟಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next