Advertisement
ನೂರಾರು ಕ್ರೀಡಾಭಿಮಾನಿಗಳು, ನಿಲ್ದಾಣದ ಅಧಿಕಾರಿಗಳು, ಸಾಧಕರ ಕುಟುಂಬದ ಸದಸ್ಯರೆಲ್ಲ ಸೇರಿಕೊಂಡು ಕ್ರೀಡಾಪಟುಗಳನ್ನು ಹೃತೂ³ರ್ವಕವಾಗಿ ಬರಮಾಡಿಕೊಂಡರು. ಹೂವಿನ ಹಾರ ಹಾಕಿ, ಸಿಹಿ ತಿಂಡಿ ಹಂಚಿ ಸಂಭ್ರಮಿ ಸಿದರು. ಧೋಲ್ ಹಾಗೂ ವಾದ್ಯ ಕೂಡ ಈ ಸ್ವಾಗತದ ಸಂಭ್ರಮವನ್ನು ಹೆಚ್ಚಿಸಿತು.
Related Articles
Advertisement
ಪ್ಯಾರಾ ಕ್ರೀಡಾಳುಗಳೇ ಸ್ಫೂರ್ತಿ
ಪ್ಯಾರಾಲಿಂಪಿಕ್ಸ್ ಆರ್ಚರಿಯಲ್ಲಿ ಭಾರತಕ್ಕೆ ಮೊಟ್ಟಮೊದಲ ಚಿನ್ನದ ಪದಕ ತಂದಿತ್ತ ಹರ್ವಿಂದರ್ ಸಿಂಗ್ ಕೂಡ ಈ ಸ್ವಾಗತ ಕಂಡು ಬೆರಗಾಗಿದ್ದರು. “ನಾನು ಯಾವಾಗಲೂ ಬ್ಯುಸಿ ಆಗಿರಲು ಬಯಸುತ್ತೇನೆ. ಸಂಕಷ್ಟದಲ್ಲಿರುವವರು ಅಥವಾ ಬದುಕಿನಲ್ಲಿ ಸೋಲುಂಡವರು, ಯಾರೇ ಆಗಿರಲಿ, ನಮ್ಮಂಥ ಪ್ಯಾರಾ ಆ್ಯತ್ಲೀಟ್‌ಗಳಿಂದ ಸ್ಫೂರ್ತಿ ಪಡೆಯ ಬಹುದು’ ಎಂದರು. ಆರ್ಮ್ಲೆಸ್ ವಂಡರ್ ಖ್ಯಾತಿಯ ಶೀತಲ್‌ದೇವಿ ಕೂಡ ಜತೆಯಲ್ಲಿದ್ದರು. ಅಭಿಮಾನಿಗಳು ಇವರ ಮೇಲೆ ಹೂವು ಸುರಿಸಿ ಹರ್ಷ ವ್ಯಕ್ತಪಡಿಸಿದರು.
“ನನ್ನ ಪಾಲಿಗೆ ಇದೊಂದು ಶ್ರೇಷ್ಠ ಅನುಭವ. ಆರ್ಚರಿಯಲ್ಲಿ ಭಾರತಕ್ಕೆ 2 ಪದಕ ಬಂದುದಕ್ಕೆ ಬಹಳ ಖುಷಿಯಾಗಿದೆ. ನಮಗೆ ಅತ್ಯುತ್ತಮ ಬೆಂಬಲ ಲಭಿಸಿದ್ದರಿಂದಲೇ ಇಷ್ಟೊಂದು ಪದಕಗಳು ಒಲಿದವು’ ಎಂದು ಶೀತಲ್‌ದೇವಿ ಅಭಿಪ್ರಾಯಪಟ್ಟರು.
ಜಾವೆಲಿನ್ ಎಫ್41 ವಿಭಾಗದಲ್ಲಿ ಚಿನ್ನ ಜಯಿಸಿದ ಕುಬj ಸಾಹಸಿ ನವದೀಪ್ ಸಿಂಗ್ ಅವರನ್ನು ಅಭಿಮಾನಿಗಳು ಎತ್ತಿ ಹಿಡಿದು ಸಂಭ್ರಮಿಸಿದರು.
ಚಿನ್ನ ಗೆದ್ದವರಿಗೆ 75 ಲಕ್ಷ ರೂ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಿಗೆ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಮಂಗಳವಾರ ಬಹುಮಾನದ ಚೆಕ್ ವಿತರಿಸಿದರು. ಇದರಂತೆ ಚಿನ್ನ ಗೆದ್ದವರಿಗೆ 75 ಲಕ್ಷ ರೂ., ಬೆಳ್ಳಿ ವಿಜೇತರಿಗೆ 50 ಲಕ್ಷ ರೂ. ಹಾಗೂ ಕಂಚು ಜಯಿಸಿದವರಿಗೆ 30 ಲಕ್ಷ ರೂ. ಬಹುಮಾನ ನೀಡಲಾಯಿತು. ಶೀತಲ್‌ದೇವಿ ಅವರಂತೆ ಮಿಶ್ರ ತಂಡ ವಿಭಾಗದಲ್ಲಿ ಪದಕ ಗೆದ್ದವರು 22.5 ಲಕ್ಷ ರೂ. ಪಡೆದರು.
ಪ್ಯಾರಾ ಕ್ರೀಡಾಪಟುಗಳನ್ನು ಸಮ್ಮಾನಿಸಿ ಮಾತನಾಡಿದ ಕ್ರೀಡಾ ಸಚಿವರು, “ಭಾರತ ಪ್ಯಾರಾಲಿಂಪಿಕ್ಸ್ ಹಾಗೂ ಪ್ಯಾರಾ ಕೂಟಗಳಲ್ಲಿ ಪ್ರಗತಿ ಕಾಣುತ್ತ ಇದೆ. 2016ರಲ್ಲಿ 4 ಪದಕವಿದ್ದದ್ದು, ಟೋಕಿಯೊದಲ್ಲಿ 19ಕ್ಕೆ, ಈಗ 29ಕ್ಕೆ ಏರಿದೆ. 18ನೇ ಸ್ಥಾನ ಪಡೆದಿದ್ದೇವೆ. ಮುಂದಿನ ಲಾಸ್ ಏಂಜಲೀಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಇನ್ನೂ ಹೆಚ್ಚಿನ ಪದಕ ಜಯಿಸಬೇಕು. ಇದಕ್ಕಾಗಿ ಸರಕಾರ ಎಲ್ಲ ರೀತಿಯ ಸೌಕರ್ಯ, ಬೆಂಬಲ, ಆರ್ಥಿಕ ನೆರವು ನೀಡಲು ಸಿದ್ಧವಿದೆ’ ಎಂದರು.