ವಾಷಿಂಗ್ಟನ್: ಅಮೆರಿಕದ ಪ್ರತಿಷ್ಠಿತ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ಯಾಲೆಸ್ತೇನ್ ಪರ(ಇಸ್ರೇಲ್ ವಿರೋಧಿ) ಪ್ರತಿಭಟನೆಯಲ್ಲಿ ತೊಡಗಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿದಂತೆ ಇಬ್ಬರನ್ನು ಬಂಧಿಸಿರುವ ಘಟನೆ ಅಮೆರಿಕದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
ಪ್ರಿನ್ಸ್ ಟನ್ ಅಲುಮ್ನಿ ವೀಕ್ಲಿ(ಪಿಎಡಬ್ಲ್ಯು) ಪ್ರಕಾರ, ಗುರುವಾರ ಬೆಳಗ್ಗೆ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನಾಕಾರರು ಟೆಂಟ್ ಹಾಕುತ್ತಿದ್ದ ಸಂದರ್ಭದಲ್ಲಿ ತಮಿಳುನಾಡು ಮೂಲದ ಅಚಿಂತ್ಯ ಶಿವಲಿಂಗನ್ ಹಾಗೂ ಹಸನ್ ಸೈಯದ್ ನನ್ನು ಬಂಧಿಸಲಾಗಿದೆ ಎಂದು ವರದಿ ವಿವರಿಸಿದೆ.
ಇಬ್ಬರು ಪದವೀಧರ ವಿದ್ಯಾರ್ಥಿಗಳನ್ನು ಅತಿಕ್ರಮ ಪ್ರವೇಶಕ್ಕಾಗಿ ಬಂಧಿಸಲಾಗಿದ್ದು, ಇಬ್ಬರನ್ನೂ ಕ್ಯಾಂಪಸ್ ನಿಂದ ನಿರ್ಬಂಧಿಸಲಾಗಿದೆ ಎಂದು ವಿವಿಯ ವಕ್ತಾರೆ ಜೆನ್ನಿಫರ್ ಮೊರಿಲ್ ತಿಳಿಸಿದ್ದು, ಕ್ಯಾಂಪಸ್ ನಲ್ಲಿ ಟೆಂಟ್ ಹಾಕುವುದು ವಿವಿ ನೀತಿಯನ್ನು ಉಲ್ಲಂಘಿಸಿದಂತೆ ಎಂದು ಹೇಳಿದ್ದಾರೆ.
ಇಬ್ಬರೂ ವಿದ್ಯಾರ್ಥಿಗಳನ್ನು ವಿವಿಯಿಂದ ಹೊರಹಾಕಿಲ್ಲ ಎಂದು ಮತ್ತೊಬ್ಬ ವಕ್ತಾರ ಹಾಚ್ಕಿಸ್ ದೃಢಪಡಿಸಿದ್ದಾರೆ. ಅಚಿಂತ್ಯ ಶಿವಲಿಂಗಂ ಪ್ರಿನ್ಸಟನ್ ವಿವಿಯಲ್ಲಿ ಇಂಟರ್ ನ್ಯಾಶನಲ್ ಡೆವಲಪ್ ಮೆಂಟ್ ನಲ್ಲಿ ಸಾರ್ವಜನಿಕ ವ್ಯವಹಾರಗಳ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದು, ಸೈಯದ್ ಪಿಎಚ್ ಡಿ ವಿದ್ಯಾರ್ಥಿಯಾಗಿರುವುದಾಗಿ ವರದಿ ತಿಳಿಸಿದೆ.