Advertisement

ಇತಿಹಾಸದಲ್ಲೇ ಮೊದಲ ಬಾರಿ ಅಮೆರಿಕ ನಗರಕ್ಕೆ ಭಾರತ ಮೂಲದ ಸಿಖ್‌ ವ್ಯಕ್ತಿ ಮೇಯರ್‌

08:23 PM Dec 25, 2022 | Team Udayavani |

ಉತ್ತರ ಕ್ಯಾಲಿಫೋರ್ನಿಯದ ಲೋದಿ ನಗರದ ಮೇಯರ್‌ ಆಗಿ ಮಿಕೆ ಹೋಥಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಆ ನಗರದ ಇತಿಹಾಸದಲ್ಲೇ ಮೇಯರ್‌ ಆದ ಮೊದಲ ಸಿಖ್‌ ವ್ಯಕ್ತಿ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ.

Advertisement

ಮಿಕೆ ಅವರ ತಂದೆತಾಯಿ ಪಂಜಾಬ್‌ನವರು, ಅವರು ಲೋದಿಯಲ್ಲಿ ನೆಲೆಸಿ ಯಶಸ್ವಿ ಜೀವನ ನಡೆಸಿದ್ದಾರೆ. ಇವರ ಕುಟುಂಬಸ್ಥರು ಉದ್ಯಮಿಗಳಾಗಿ ಹೆಸರು ಮಾಡಿದ್ದಾರೆ.

ಇಲ್ಲಿಯವರೆಗೆ ಲೋದಿ ನಗರದ ಉಪ ಮೇಯರ್‌ ಆಗಿದ್ದ ಮಿಕೆ ಹೋಥಿ ಈಗ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಇವರ ಹೆಸರನ್ನು ಸದಸ್ಯೆ ಲಿಸಾ ಕ್ರೆಗ್‌ ಶಿಫಾರಸು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next