Advertisement

ಅಕ್ಸ್‌ಫ‌ರ್ಡ್‌ ಯುನಿವರ್ಸಿಟಿ ಆಸ್ಪತ್ರೆಗೆ ಮೇಘನಾ ಸಿಇಒ

10:20 PM Feb 18, 2023 | Team Udayavani |

ಲಂಡನ್‌: ಇಂಗ್ಲೆಂಡ್‌ನ‌ ಪ್ರಖ್ಯಾತ ಅಕ್ಸ್‌ಫ‌ರ್ಡ್‌ ಯುನಿವರ್ಸಿಟಿ ಆಸ್ಪತ್ರೆಯ ರಾಷ್ಟ್ರೀಯ ಆರೋಗ್ಯ ಸೇವೆ(ಎನ್‌ಎಚ್‌ಎಸ್‌) ಫೌಂಡೇಶನ್‌ ಟ್ರಸ್ಟ್‌ನ ಸಿಇಒ ಆಗಿ ಭಾರತ ಮೂಲದ ಪ್ರೊ. ಮೇಘನ ಪಂಡಿತ್‌ ನೇಮಕವಾಗಿದ್ದಾರೆ.

Advertisement

ಈ ಮೂಲಕ ಮೇಘನ ಪಂಡಿತ್‌ ಅವರು ಟ್ರಸ್ಟ್‌ನ ಮೊದಲ ಮಹಿಳಾ ಮುಖ್ಯಸ್ಥರಾಗಿದ್ದಾರೆ. ಅಲ್ಲದೇ ಶೆಫೋರ್ಡ್‌ ಗ್ರೂಪ್‌ನ ಎನ್‌ಎಚ್‌ಎಸ್‌ ಫೌಂಡೇಶನ್‌ ಟ್ರಸ್ಟ್‌ನ ಮೊದಲ ಭಾರತ ಮೂಲದ ಸಿಇಒ ಆಗಿದ್ದಾರೆ.

2022ರ ಜುಲೈನಿಂದ ಅಕ್ಸ್‌ಫ‌ರ್ಡ್‌ ಯುನಿವರ್ಸಿಟಿ ಆಸ್ಪತ್ರೆಯ ಪ್ರಭಾರಿ ಸಿಇಒ ಆಗಿ ಪ್ರೊ. ಮೇಘನ ಕಾರ್ಯ ನಿರ್ವಹಿಸುತ್ತಿದ್ದರು. ನಂತರ ಸ್ಪರ್ಧಾತ್ಮಕ ಪ್ರಕ್ರಿಯೆ ಮೂಲಕ ಅವರನ್ನು ಆ ಹುದ್ದೆಗೆ ಶಾಶ್ವತವಾಗಿ ನೇಮಿಸಲಾಗಿದೆ.

ಈ ಹಿಂದೆ ಅವರು ಅಮೆರಿಕದ ಮಿಂಚಿಗನ್‌ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕಿ ಆಗಿದ್ದರು. ನಂತರ ಎನ್‌ಎಚ್‌ಎಸ್‌ ಟ್ರಸ್ಟ್‌ನ ಮುಖ್ಯ ವೈದ್ಯಕೀಯ ಅಧಿಕಾರಿ(ಸಿಎಂಒ) ಆಗಿ ಕಾರ್ಯ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next