Advertisement

ಭಾರತೀಯ ಮೂಲದ ಸಲಿಂಗಿ ವಾರಡ್ಕರ್‌ ಐರ್ಲೆಂಡ್‌ ಪ್ರಧಾನಿ ಪಟ್ಟಕ್ಕೆ!

09:52 AM Jun 03, 2017 | |

ನವದೆಹಲಿ: ಭಾರತೀಯ ಮೂಲದ ಸಲಿಂಗಿ ಸಚಿವ ಲಿಯೋ ವಾರಡ್ಕರ್‌ ಐರ್ಲೆಂಡ್‌ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕ್ಯಾಥೊಲಿಕ್‌ ದೇಶದ ಮೊದಲ ಏಷ್ಯಾ ಮೂಲದ ಪ್ರಧಾನಿ ಎಂಬ ಖ್ಯಾತಿ ಗಳಿಸಿದ್ದಾರೆ. 

Advertisement

ಸಾಮಾಜಿಕ ಭದ್ರತೆ ಖಾತೆ ನಿರ್ವಹಿಸುತ್ತಿದ್ದ  38 ಹರೆಯದ ವಾರಡ್ಕರ್‌ ಅವರು ಗೃಹ ಖಾತೆ ಸಚಿವ ಸಿಮನ್‌ ಕೊವೆನೇ ಅವರನ್ನು ಭಾರೀ ಅಂತರದಿಂದ ಸೋಲುವ ಮೂಲಕ ನೂತನ ಪ್ರಧಾನಿಯಾಗಿ ದಾಖಲೆ ಬರೆದಿದ್ದಾರೆ. 

ವಾರಡ್ಕರ್‌ ಆಯ್ಕೆ ಐರ್ಲೆಂಡ್‌ನ‌ಲ್ಲಿ ಆದ ಸಾಮಾಜಿಕ ಬದಲಾವಣೆಯನ್ನು ಗುರುತಿಸುತ್ತದೆ. 2015 ರಲ್ಲಿ ಸಲಿಂಗಿಗಳ ವಿವಾಹ ಕಾಯಿದೆ ತರಲು ಮತ ಚಲಾಯಿಸಿದ್ದ ಅವರು ಸಲಿಂಗಕಾಮಿ ಚಟುವಟಿಕೆಯನ್ನು ಕಾನೂನು ಬದ್ಧ ಗೊಳಿಸುವಲ್ಲಿ  ಧ್ವನಿಯೆತ್ತಿದ ಯುರೋಪಿಯನ್ ಒಕ್ಕೂಟದ ಸದಸ್ಯರಲ್ಲಿ ಒಬ್ಬರು.

ಹಾಲಿ ಪ್ರಧಾನಿ ಎಂಡಾ ಕೆನ್ನಿ ಅವರ 6ವರ್ಷಗಳ  ಅಧಿಕಾರವಧಿ ಮುಕ್ತಾಯವಾದ ಹಿನ್ನಲೆಯಲ್ಲಿ  ಚುನಾವಣೆ ನಡೆದಿದ್ದು, ಪಕ್ಷದ 65% ಪ್ರತಿನಿಧಿಗಳು ವಾರಡ್ಕರ್‌ ಬೆಂಬಲಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next