Advertisement

ಕೋರ್ಟ್‌ ನಿಂದನೆ: ಭಾರತೀಯ ಡಿಜೆಗೆ ಜೈಲು ಶಿಕ್ಷೆ ಸಂಭವ

04:18 PM Apr 28, 2018 | Team Udayavani |

ಲಂಡನ್‌ : ಸರಕಾರಿ ಆರೋಗ್ಯ ಸೇವಾ ಕೇಂದ್ರದಲ್ಲಿನ ಅಲಕ್ಷ್ಯದ ಚಿಕಿತ್ಸೆಯ ಪರಿಣಾಮವಾಗಿ ತಾನು ನಿರುದ್ಯೋಗಿಯಾಗಿ ಬೇರೆಯವರ ಮೇಲೆ ಅವಲಂಬಿತನಾದೆ ಎಂದು ಸುಳ್ಳು ಹೇಳಿ 8,37,000 ಪೌಂಡ್‌ ಪರಿಹಾರ ಆಗ್ರಹಿಸಿದ ಕೋರ್ಟ್‌ ನಿಂದನೆಗಾಗಿ ಭಾರತೀಯ ಮೂಲದ ಡಿಸ್ಕ್ ಜಾಕಿ (ಡಿಜೆ) ಸಂದೀಪ್‌ ಸಿಂಗ್‌ ಅತ್ವಾಲ್‌ ಅಲಿಯಾಸ್‌ ಸನ್ನಿಗೆ ಜೈಲು ಶಿಕ್ಷೆಯಾಗುವ ಸಂಭವವಿದೆ ಎಂದು ವರದಿಯಾಗಿದೆ. 

Advertisement

ಲಂಡನ್‌ನಲ್ಲಿ ನ್ಯಾಶನಲ್‌ ಹೆಲ್ತ್‌ ಸರ್ವಿಸ್‌ (ಎನ್‌ಎಚ್‌ಎಸ್‌) ಟ್ರಸ್ಟ್‌ ದಾಖಲಿಸಿರುವ ಮೊದಲ ಕೋರ್ಟ್‌ ನಿಂದನೆಯ ಕೇಸ್‌ ಇದಾಗಿದೆ. 

33ರ ಹರೆಯದ ಸಂದೀಪ್‌ ಸಿಂಗ್‌ ಅತ್ವಾಲ್‌ 14 ಅಂಶಗಳ ಕೋರ್ಟ್‌ ನಿಂದನೆ ಎಸಗಿರುವುದು ಕಂಡುಬಂದಿದೆ. ಜೂನ್‌ 1ರಂದು ಆತನಿಗೆ ಕೋರ್ಟ್‌ ಶಿಕ್ಷೆ ಪ್ರಕಟಿಸಲಿದೆ. ಕೋರ್ಟ್‌ ನಿಂದನೆಗೆ ಗರಿಷ್ಠ 2 ವರ್ಷಗಳ ಜೈಲು ಶಿಕ್ಷೆ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next