Advertisement
ಏನಿದು “ಒನ್ ಫಾರ್ ಯು’?ಇದೊಂದು ಇಲೆಕ್ಟ್ರಿಕ್ ವೋಚರ್ (ಇ-ವೋಚರ್) ಆಗಿದ್ದು, ಕಾರ್ಡ್ ರೂಪದಲ್ಲಿ ಇರುತ್ತದೆ. ಇದನ್ನು ಆನ್‌ಲೈನ್ ಮೂಲಕ ಖರೀದಿಸಬಹುದು. ಇದರ ಮುಖಬೆಲೆ ಕನಿಷ್ಠ 500 ರೂ.ಗಳಿಂದ ಗರಿಷ್ಠ 10,000 ರೂ.ವರೆಗೆ ಇರುತ್ತದೆ.
ಐಒಸಿಯಿಂದ ಟ್ವಿಟರ್‌ನಲ್ಲಿ ಇ-ವೋಚರ್ ಬಗ್ಗೆ ಪ್ರಕಟಣೆ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬರಲಾರಂಭಿಸಿದೆ. ಅಲೀಮ್ ಎಂಬುವರು, ಇಲ್ಲಿ ಜನಸಾಮಾನ್ಯರು ತೈಲ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವಾಗ ನೀವು (ಐಒಸಿ) ಇ-ವೋಚರ್ ಹೆಸರಿನಲ್ಲಿ ಮಜಾ ಮಾಡುತ್ತಿದ್ದೀರಿ ಅಲ್ಲವೇ ಎಂದು ಕೇಳಿದ್ದಾರೆ. ಕಾರ್ತಿಕೇಯನ್ ಎಂಬವರು, ತೈಲಗಳ ಮೇಲೆ ಸಿಕ್ಕಾಪಟ್ಟೆ ತೆರಿಗೆ ಹೇರಿರುವಂಥ ಇಂಥ ಸಂದರ್ಭದಲ್ಲಿ ಈ ವೋಚರ್ ಅವಶ್ಯಕತೆಯಿತ್ತಾ ಎಂದಿದ್ದಾರೆ. ವನಿಕಾ ಅರೋರಾ ಎಂಬುವರು ಟ್ವೀಟ್ ಮಾಡಿ, ಚಿನ್ನದ ದರ ಕೊಟ್ಟು ಪೆಟ್ರೋಲ್, ಡೀಸೆಲ್ ಇ-ವೋಚರ್ ಕೊಳ್ಳುವಂತಾಗಿದೆ ಎಂದು ಲೇವಡಿ ಮಾಡಿದ್ದಾರೆ. ಹೀಗೆ, ಹಲವಾರು ಮಂದಿ ಟೀಕೆ ವ್ಯಕ್ತಪಡಿಸಿದ್ದಾರೆ.