ಬೆಂಗಳೂರಿನ ಸಂಗೀತಪ್ರೇಮಿಗಳು ಬುದ್ಧಿವಂತರು. ಹೀಗಂದಿದ್ದು ಭಾರತದ ಪ್ರಖ್ಯಾತ ಇಂಡೀ ಸಂಗೀತ ತಂಡ “ಇಂಡಿಯನ್ ಓಷನ್’. ತಂಡ, ಇತ್ತೀಚೆಗೆ ಫೀನಿಕ್ಸ್ ಮಾಲ್‌ನಲ್ಲಿ ಸಂಗೀತಪ್ರದರ್ಶನ ನೀಡಿತ್ತು. ಈ ಸಂದರ್ಭದಲ್ಲಿ ಉದಯವಾಣಿ ಜೊತೆಗೆ ಮಾತನಾಡಿದ ತಂಡದ ಪ್ರಮುಖ ಹಾಡುಗಾರ ಹಿಮಾಂಶು ನಗರದ ಸಂಗೀತಪ್ರೇಮಿಗಳ ಅಭಿರುಚಿಯನ್ನು ಶ್ಲಾ ಸಿದರು. ಇಲ್ಲಿನವರು ಹೆಚ್ಚು ಚೂಸಿ ಎನ್ನುವುದು ಅವರ ಅಭಿಪ್ರಾಯ. ಭಾರತದ ಹಳೆಯ ಸಂಗೀತ ತಂಡಗಳಲ್ಲೊಂದಾದ ಇಂಡಿಯನ್ ಓಷನ್ ಮಿಕ್ಕ ಸಂಗೀತ ತಂಡಗಳಂತೆ ಪಾಶ್ಚಾತ್ಯ ಸಂಗೀತದ ಪ್ರಭಾವದಲ್ಲಿ ಕಳೆದುಹೋಗಲಿಲ್ಲ. ಹಿಂದಿನಿಂದಲೂ ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆಯನ್ನೇ ಮೈಗೂಡಿಸಿಕೊಂಡ ತಂಡ ಇಂದಿಗೂ ತಮ್ಮತನವನ್ನು ಕಾಪಾಡಿಕೊಂಡು ಬಂದಿದೆ. ಅದುವೇ ತಂಡದ ಹೆಗ್ಗಳಿಕೆ.
“ಗುಲಾಲ್’, “ಬ್ಲ್ಯಾಕ್ ಫ್ರೈಡೇ’, “ಮಸಾನ್’ ಮುಂತಾದ ಸಿನಿಮಾಗಳಿಗೆ ಹಿನ್ನೆಲೆ ಸಂಗೀತವನ್ನೂ ನೀಡಿದೆ.”ಸಿನಿಮಾಗಳ ಆಯ್ಕೆಯ ವಿಚಾರದಲ್ಲಿ ತುಂಬಾ ಸ್ಟ್ರಿಕ್ಟ್. ನಮಗೆ ಇಷ್ಟವಿಲ್ಲದ ಪ್ರಾಜೆಕ್ಟ್ಅನ್ನು ನಾವೆಂದಿಗೂ ಕೈಗೆತ್ತಿಕೊಳ್ಳುವುದಿಲ್ಲ. ಎಂದು ಕಡ್ಡಿಮುರಿದಂತೆ ಹೇಳಿಬಿಡುತ್ತಾರೆ ತಬಲಾ ವಾದಕ ಚಕ್ರವರ್ತಿ. ಅವರು ಸಂಗೀತ ನೀಡಿರುವ ಸಿನಿಮಾಗಳ ಪಟ್ಟಿಯನ್ನು ನೋಡಿದರೆ ಅದು ನಿಜವೆಂದು ತಿಳಿಯುತ್ತದೆ. ಈ ಪಟ್ಟಿ ಉದ್ದವಿಲ್ಲದಿದ್ದರೂ ಈ ಸಿನಿಮಾಗಳು ಒಂದಲ್ಲ ಒಂದು ಕಾರಣಕ್ಕೆ ಜನರ ಮನಸ್ಸಲ್ಲಿ ಉಳಿದಿರುವಂಥವು. “ಮಸಾನ್’ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ದೊರಕಿತ್ತು.
ಹಳೆಯ ಬಾಲಿವುಡ್ ಗೀತೆಗಳನ್ನು ತುಂಬಾ ಕೇಳುತ್ತೇನೆ. ನಮ್ಮ ತಂಡದಲ್ಲಿ ಬಹುತೇಕ ಎಲ್ಲರೂ ಕೇಳುತ್ತಾರೆ.
-ನಿಖೀಲ್, ಗಿಟಾರಿಸ್ಟ್