ಅಡಿಲೇಡ್ : ಆಸ್ಟ್ರೇಲಿಯದಲ್ಲಿ ನಡೆದ ಪ್ರತೀಕಾರದ ಭಯಾನಕ ಕೃತ್ಯದಲ್ಲಿ 21 ವರ್ಷದ ಭಾರತೀಯ ನರ್ಸಿಂಗ್ ವಿದ್ಯಾರ್ಥಿನಿಯನ್ನು ಆಕೆಯ ಮಾಜಿ ಪ್ರಿಯಕರ ಅಪಹರಿಸಿ ಸುಮಾರು 650 ಕಿಮೀ ದೊರಕ್ಕೆ ಕರೆದೊಯ್ದು ದಕ್ಷಿಣ ಆಸ್ಟ್ರೇಲಿಯಾದ ರಿಮೋಟ್ ಫ್ಲಿಂಡರ್ಸ್ ರೇಂಜ್ ಪ್ರದೇಶದಲ್ಲಿ ಸಜೀವ ಸಮಾಧಿ ಮಾಡಿದ್ದಾನೆ ಎಂದು ನ್ಯಾಯಾಲಯವು ಹೇಳಿದೆ.
ಅಡಿಲೇಡ್ ಸಿಟಿಯಲ್ಲಿ ಜಸ್ಮೀನ್ ಕೌರ್ ಅವರನ್ನು ಮಾರ್ಚ್ 2021 ರಲ್ಲಿ ತಾರಿಕ್ಜೋತ್ ಸಿಂಗ್ ಎಂಬಾತ ಹಿಂಬಾಲಿಸಿದ್ದಕ್ಕಾಗಿ ಪೊಲೀಸರಿಗೆ ವರದಿ ಮಾಡಿದ ಒಂದು ತಿಂಗಳ ನಂತರ ಹತ್ಯೆಯಾಗಿದೆ.
ಮಾರ್ಚ್ 5, 2021 ರಂದು ಕೌರ್ ಅಪಹರಣಕ್ಕೊಳಗಾಗಿದ್ದು, ತಾರಿಕ್ಜೋತ್ ಸಿಂಗ್ ತನ್ನ ಫ್ಲಾಟ್‌ಮೇಟ್‌ನಿಂದ ಎರವಲು ಪಡೆದ ಕಾರಿನಲ್ಲಿ ಆಕೆಯನ್ನು ಕೇಬಲ್ ವಯರ್ ಗಳಲ್ಲಿ ಕಟ್ಟಿ ಹಾಕಿ 644 ಕಿಮೀ ಗಿಂತ ದೂರ ಕ್ರೂರವಾಗಿ ಕರೆದೊಯ್ದಿದ್ದ. ಕೌರ್‌ಳ ಕತ್ತನ್ನು ಸೀಳಿದ ನಂತರ ಆಕೆಯನ್ನು ಸಮಾಧಿ ಮಾಡಿದ್ದಾನೆ.
ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಸಿಂಗ್ ತಪ್ಪೊಪ್ಪಿಕೊಂಡಿದ್ದು, ಶಿಕ್ಷೆಯ ಸಲ್ಲಿಕೆ ಸಮಯದಲ್ಲಿಅಪರಾಧದ ಭಯಾನಕ ವಿವರಗಳು ಬೆಳಕಿಗೆ ಬಂದವು. ಪ್ರಾಸಿಕ್ಯೂಟರ್ ಕಾರ್ಮೆನ್ ಮ್ಯಾಟಿಯೊ ಅವರು ಕೊಲೆ ಅರ್ಥಹೀನವಾದದ್ದು ಮತ್ತು ಕೌರ್ ಅವರನ್ನು ಭಾರಿ ಸಂಕಷ್ಟಕ್ಕೆ ಒಳಪಡಿಸಲಾಯಿತು. ಸಮಾಧಿ ಮಾಡಿರುವುದು ಸಂಪೂರ್ಣ ಭಯೋತ್ಪಾದಕ ಕೃತ್ಯ ಎಂದು ಹೇಳಿದ್ದಾರೆ.
ಅಧಿಕಾರಿಗಳು ಸಮಾಧಿ ಮಾಡಿದ ಸ್ಥಳಕ್ಕೆ ಭೇಟಿ ನೀಡಿದ್ದು, ಅಲ್ಲಿ ಅವರು ಕೌರ್‌ಳ ಬೂಟುಗಳು, ಕನ್ನಡಕಗಳು ಮತ್ತು ಬಳಸಲಾಗಿದ್ದ ಕೇಬಲ್ ಗಳನ್ನು ಕಂಡುಕೊಂಡಿದ್ದಾರೆ. ಕೊಲೆ ನಡೆಯುವ ಗಂಟೆಗಳ ಮೊದಲು ಆತ ಕೈಗವಸುಗಳು, ಕೇಬಲ್ ಟೈಗಳನ್ನ ಖರೀದಿಸುವಾಗ ಸಿಸಿಟಿವಿಯಲ್ಲಿ ಸಿಕ್ಕಿಬಿದ್ದಿದ್ದಾನೆ.
ಮುಂದಿನ ತಿಂಗಳು ನ್ಯಾಯಾಲಯವು ಆರೋಪಿಗೆ ಪೆರೋಲ್ ರಹಿತ ಕಡ್ಡಾಯ ಜೀವಾವಧಿ ಶಿಕ್ಷೆ ವಿಧಿಸುತ್ತದೆ.ಆತನ ವಕೀಲರು ಕರುಣಾಮಯಿ ಶಿಕ್ಷೆಯನ್ನು ನೀಡಬೇಕೆಂದು ಬಯಸಿದ್ದು ಇದು “ಭಾವೋದ್ರೇಕದ ಅಪರಾಧ” ಎಂದು ಹೇಳಿದ್ದಾರೆ.
ಜಸ್ಮೀನ್ ಕೌರ್ ಸಂಬಂಧದಿಂದ ಹೊರಬರಲು ಮುಂದಾದ ಕಾರಣ ಸಿಂಗ್ ಹತ್ಯೆಯನ್ನು ಮಾಡಿದ್ದಾನೆ ಎಂದು ನ್ಯಾಯಾಲಯವು ಹೇಳಿದೆ. ಹತ್ಯೆ ನಡೆಸಿದ ಬಳಿಕವೂ ಏನೂ ನಡದೇ ಇಲ್ಲ ಎಂಬಂತೆ ಆಕೆಗೆ ಮೊಬೈಲ್ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದ ಎಂದು ತಿಳಿದು ಬಂದಿದೆ.