Advertisement

ಚೀನ ಕಡಲಿಗೆ ಇಳಿದಿತ್ತು ಭಾರತದ ಸಮರ ನೌಕೆ!

06:41 AM Aug 31, 2020 | Hari Prasad |

ಹೊಸದಿಲ್ಲಿ: ಗಾಲ್ವಾನ್‌ ಘರ್ಷಣೆಯ ಬೆನ್ನಿಗೇ ಭಾರತೀಯ ನೌಕಾಪಡೆಯು ತನ್ನ ಮುಂಚೂಣಿಯ ಸಮರ ನೌಕೆಯೊಂದನ್ನು ದಕ್ಷಿಣ ಚೀನ ಸಮುದ್ರಕ್ಕೆ ಕಳುಹಿಸುವ ಮೂಲಕ ಚೀನವನ್ನು ವ್ಯೂಹಾತ್ಮಕವಾಗಿ ಕಟ್ಟಿ ಹಾಕಿತ್ತು ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

Advertisement

ಗಾಲ್ವಾನ್‌ನಿಂದ ಚೀನದ ಪಡೆಗಳನ್ನು ಹಿಂದೆ ಸರಿಸಲು ಒತ್ತಡ ಹೇರುವ ಕಾರ್ಯತಂತ್ರದ ಭಾಗವಾಗಿ ಭಾರತ ಈ ಕ್ರಮ ಕೈಗೊಂಡಿತ್ತು. ಚೀನಕ್ಕೆ ಭಾರತದ ಯುದ್ಧನೌಕೆ ನಿಯೋಜನೆ ತಲೆನೋವಾಗಿ ಕಾಡಿತ್ತು.

ಊಹಿಸಿದಂತೆಯೇ ಭಾರತದ ಈ ದಿಟ್ಟ ಕ್ರಮವನ್ನು ಚೀನವು ರಾಜತಾಂತ್ರಿಕ ಮಾತುಕತೆಗಳಲ್ಲಿ ನಿರಂತರವಾಗಿ ಆಕ್ಷೇಪಿಸಿತ್ತು.

ಈ ನಿಯೋಜನೆಯನ್ನು ರಹಸ್ಯವಾಗಿ, ಅಷ್ಟೇ ತರಾತುರಿಯಲ್ಲಿ ನಡೆಸಲಾಗಿತ್ತು ಎಂದು ಸರಕಾರದ ಮೂಲಗಳು ‘ಎಎನ್‌ಐ’ಗೆ ತಿಳಿಸಿವೆ.

ಜಲಾಂತರ್ಗಾಮಿ ಖರೀದಿ
ದಕ್ಷಿಣ ಚೀನ ಸಮುದ್ರ ಸಹಿತ ಸಮಗ್ರವಾಗಿ ತನ್ನ ಬಲವರ್ಧನೆಗೆ ಮುಂದಾಗಿರುವ ಭಾರತೀಯ ನೌಕಾ ಪಡೆಯು 55 ಸಾವಿರ ಕೋ.ರೂ. ವೆಚ್ಚದಲ್ಲಿ 6 ಜಲಾಂತರ್ಗಾಮಿ ನೌಕೆಗಳ ಖರೀದಿಗೆ ಮುಂದಾಗಿದೆ. ಈ ಸಂಬಂಧ ಬಿಡ್ಡಿಂಗ್‌ ಪ್ರಕ್ರಿಯೆ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next