Advertisement

Chinese Vessel; ಚೀನ ನೌಕೆ ಪತ್ತೆಗೆ ಭಾರತದ ನೌಕಾಪಡೆ ನೆರವು

10:35 AM May 19, 2023 | sudhir |

ಬೀಜಿಂಗ್‌/ಹೊಸದಿಲ್ಲಿ: ಹಿಂದೂ ಮಹಾಸಾಗರದಲ್ಲಿ ಮುಳುಗಿ ಹೋಗಿರುವ ಚೀನದ ಮೀನುಗಾರಿಕ ಹಡಗಿನಲ್ಲಿದ್ದವರನ್ನು ರಕ್ಷಿಸಲು ಸಹಾಯ ಕೋರಿದ್ದ ಚೀನ ನೌಕಾಪಡೆಯ ಮನವಿಗೆ ಭಾರತ ಸ್ಪಂದಿಸಿದೆ. ಈ ಹಿನ್ನೆಲೆಯಲ್ಲಿ ರಕ್ಷಣ ಕಾರ್ಯಾಚರಣೆಗಾಗಿ ನೌಕಾ ಪಡೆಯ ವಿಮಾನವನ್ನು ನಿಯೋಜಿಸಿದೆ. ಸದ್ಯದ ಮಾಹಿತಿ ಪ್ರಕಾರ ಇಬ್ಬರು ಅಸುನೀಗಿದ್ದು, ಅವರ ಮೃತದೇಹಗಳು ಸಿಕ್ಕಿವೆ.

Advertisement

39 ಮಂದಿಯಿದ್ದ ಚೀನದ ಹಡಗು ಮಂಗಳವಾರ ಮುಳುಗಿತ್ತು. ಮಂಗಳವಾರದಿಂದಲೂ ಹಡಗಿನಲ್ಲಿದ್ದವರ ಶೋಧಕ್ಕೆ ಚೀನ ಕಾರ್ಯಾಚರಣೆ ನಡೆಸುತ್ತಲೇ ಇದೆ. ಇದೀಗ ಭಾರತದ ನೆರವನ್ನೂ ಕೋರಿರುವ ಹಿನ್ನೆಲೆ ಭಾರತದ ನೌಕಾಪಡೆಯ ಪಿ8ಐ ವಿಮಾನವನ್ನು ಕಾರ್ಯಾಚರಣೆಯಲ್ಲಿ ತೊಡಗಿಸಿದೆ. ಹವಾಮಾನ ವೈಪರೀತ್ಯದ ನಡುವೆಯೂ ವಿಮಾನ ಶೋಧ ಕಾರ್ಯಾಚರಣೆ ನಡೆಸಿ, ಮುಳುಗಿರುವ ಹಡಗಿನ ಕೆಲವು ವಸ್ತುಗಳಿರುವ ಸ್ಥಳಗಳನ್ನು ಪತ್ತೆ ಹಚ್ಚಿದೆ ಎಂದು ಭಾರತೀಯ ನೌಕಾಪಡೆ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next