Advertisement

ಮಾಡೆಲ್‌ ಈಗ ಸೋನಲ್‌

06:00 AM Jun 08, 2018 | Team Udayavani |

ಇಮ್ರಾನ್‌ ಹಶ್ಮಿ ನಾಯಕಿಯಾಗಿ ಜನ್ನತ್‌ ಚಿತ್ರದಲ್ಲಿ ಮಿಂಚಿದ್ದ ಸೋನಲ್‌ ಚೌಹಾನ್‌ ಉಳಿದ ಹೊಸ ನಾಯಕಿಯರಂತೆ ತಮಿಳು, ತೆಲುಗು ಪಾಲಾದಳು ಎಂದೇ ಭಾವಿಸಲಾಗಿತ್ತು. ಆದರೆ, ಇದೀಗ ಸೋನಲ್‌ಗೆ ಮತ್ತೆ ಬಾಲಿವುಡ್‌ನ‌ಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ಮಹೇಶ್‌ ಮಾಂಜ್ರೆàಕರ್‌ ನಿರ್ದೇಶಿಸುತ್ತಿರುವ ಭೂಗತ ಜಗತ್ತಿಗೆ ಸಂಬಂಧಿಸಿದ ಚಿತ್ರಕ್ಕೆ ಸೋನಲ್‌ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ವಿದ್ಯುತ್‌ ಜಾಮ್‌ವಾಲಾ ಅವಳ ನಾಯಕ. ಜತೆಗೆ ಶ್ರುತಿ ಹಾಸನ್‌ ಕೂಡಾ ಇದ್ದಾಳೆ. ಇದರೊಂದಿಗೆ ಜೆ. ಪಿ. ದತ್ತಾ ನಿರ್ದೇಶಿಸುತ್ತಿರುವ ಪಾಲ್ತನ್‌ ಚಿತ್ರದಲ್ಲೂ ಸೋನಲ್‌ಗೆ ಮುಖ್ಯವಾದ ಪಾತ್ರವಿದೆ. 

Advertisement

ಜೆ. ಪಿ. ದತ್ತಾವಾರ್‌ ಫಿಲ್ಮ್ ಸ್ಪೆಷಲಿಸ್ಟ್‌. ಪಾಲ್ತನ್‌ ಕೂಡ 1967ರಲ್ಲಿ ನಾಥುಲಾ ಮತ್ತು ಚೋಲಾ ಪಾಸ್‌ಗಳಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಸಂಘರ್ಷದ ಹಿನ್ನೆಲೆಯನ್ನೊಳಗೊಂಡಿದೆ. ಈ ಎರಡು ಚಿತ್ರಗಳು ಬಿಡುಗಡೆಯಾದ ಬಳಿಕ ಬಾಲಿವುಡ್‌ನ‌ಲ್ಲಿ ಮತ್ತೂಮ್ಮೆ ಬ್ಯುಸಿಯಾಗುವ ನಿರೀಕ್ಷೆಯಲ್ಲಿದ್ದಾಳೆ ಸೋನಲ್‌. ಮಾಡೆಲ್‌ ಆಗಿದ್ದ ಸೋನಲ್‌ಳನ್ನು ಬಾಲಿವುಡ್‌ಗೆ ಪರಿಚಯಿಸಿದ್ದು ಕುಣಾಲ್‌ ದೇಶ್‌ಮುಖ್‌. ಇದಕ್ಕೂ ಮೊದಲು ಹಿಮೇಶ್‌ ರೇಷಮಿಯಾನ ಆಪ್‌ ಕಾ ಸುರೂರ್‌ ಆಲ್ಬಂನಲ್ಲಿ ಸೋನಲ್‌ ಕುಣಿದಿದ್ದಳು. ಸೋನಲ್‌ ಬರೀ ನಟಿ ಮಾತ್ರವಲ್ಲ, ಗಾಯಕಿಯೂ ಹೌದು. ಆದರೆ, ಅವಳ ಗಾಯನ ಪ್ರತಿಭೆಯನ್ನು ತೋರಿಸುವ ಅವಕಾಶ ಮಾತ್ರ ಇನ್ನೂ ಸಿಕ್ಕಿಲ್ಲ. ಜನ್ನತ್‌ ಬಳಿಕ ಅವಕಾಶಗಳು ಕಡಿಮೆಯಾದಾಗ ಸಹಜವಾಗಿಯೇ ಸೋನಲ್‌ ದಕ್ಷಿಣದತ್ತ ಹೋದಳು. ತಮಿಳು ಮತ್ತು ತೆಲುಗು ಚಿತ್ರರಂಗ ಅವಳನ್ನು ರತ್ನಗಂಬಳಿ ಹಾಸಿ ಸ್ವಾಗತಿಸಿತು. ಎಲ್ಲ ಅಗ್ರಗಣ್ಯ ನಾಯಕರ ಜತೆಗೆ ನಟಿಸಿದ ಸೋನಲ್‌ ಒಂದು ಕನ್ನಡ ಚಿತ್ರಕ್ಕೂ ನಾಯಕಿಯಾಗಿದ್ದಾಳೆ. ಬಾಲಿವುಡ್‌ನ‌ಲ್ಲೀಗ ಅವಳ ಸೆಕೆಂಡ್‌ ಇನ್ನಿಂಗ್ಸ್‌. 

Advertisement

Udayavani is now on Telegram. Click here to join our channel and stay updated with the latest news.

Next