Advertisement

ನ್ಯೂಜಿಲ್ಯಾಂಡ್‌ ಶೂಟಿಂಗ್‌: ಸಂತ್ರಸ್ತ ಭಾರತೀಯರ ನೆರವಿಗೆ help-line

11:26 AM Mar 15, 2019 | udayavani editorial |

ವೆಲಿಂಗ್ಟನ್‌ : ಕ್ರೈಸ್ಟ್‌ ಚರ್ಚ್‌ ನ ಎರಡು ಮಸೀದಿಗಳಲ್ಲಿ ಇಂದು ಶುಕ್ರವಾರ ನಡೆದಿರುವ ಉಗ್ರ ದಾಳಿಯಲ್ಲಿ ಸಂತ್ರಸ್ತರಾಗಿರಬಹುದಾದ ಭಾರತೀಯರು ನೆರವಿಗಾಗಿ ಭಾರತೀಯ ದೂತಾವಾಸವನ್ನು ಸಂಪರ್ಕಿಸಬಹುದು ಎಂದು ನ್ಯೂಜಿಲ್ಯಾಂಡ್‌ನ‌ಲ್ಲಿರುವ ಭಾರತೀಯ ಹೈಕಮಿಶನ್‌ ಹೇಳಿದೆ.

Advertisement

ಸೆಂಟ್ರಲ್‌ ಕ್ರೈಸ್ಟ್‌ ಚರ್ಚ್‌ ನಲ್ಲಿರುವ ಅಲ್‌ ನೂರ್‌ ಮಸೀದಿ ಮತ್ತು ನಗರ ಹೊರವಲಯದಲ್ಲಿರುವ ಲಿನ್‌ವುಡ್‌ ಮಸೀದಿಯ ಮೇಲೆ ಆಸ್ಟ್ರೇಲಿಯದ ಬಲಪಂಥೀಯ ಉಗ್ರ ನಡೆಸಿರುವ ದಾಳಿಗೆ ಕನಿಷ್ಠ 49 ಮಂದಿ ಬಲಿಯಾಗಿದ್ದಾರೆ. 

ಘಟನೆಯ ಬಗ್ಗೆ ತೀವ್ರ ಶೋಕ ಮತ್ತು ಆಘಾತ ವ್ಯಕ್ತಪಡಿಸಿರುವ ಭಾರತೀಯ ದೂತಾವಾಸ, ದಾಳಿಯ ಸಂತ್ರಸ್ತ ಭಾರತೀಯರು ತುರ್ತು ನೆರವಿಗಾಗಿ 021803899 ಮತ್ತು 021850033 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next