Advertisement

ದುಬೈ : ಸಮುದ್ರದಲ್ಲಿ ಮೀನು ಹಿಡಿಯಲು ಹೋದ ಭಾರತೀಯ ಮುಳುಗಿ ಸಾವು

10:09 AM May 03, 2019 | Team Udayavani |

ದುಬೈ : ಇಲ್ಲಿನ ಕಡಲ ತೀರದ ಕೊರಕಲಲ್ಲಿ ತನ್ನ ಗೆಳೆಯರೊಂದಿಗೆ ಮೀನು ಹಿಡಿಯುತ್ತಿದ್ದ ಭಾರತೀಯ ವ್ಯಕ್ತಿಯೋರ್ವ ಜಾರಿ ಸಮುದ್ರಕ್ಕೆ ಬಿದ್ದು ಮುಳುಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

Advertisement

ಮೃತ ವ್ಯಕ್ತಿಯನ್ನು ಕೇರಳದ ಕೊಲ್ಲಂ ನ ಸಹಾದ್‌ ಅಬ್ದುಲ್‌ ಸಲಾಮ್‌ ಎಂದು ಗುರುತಿಸಲಾಗಿದೆ. ಆತ ತನ್ನ ಗೆಳೆಯರ ಜತೆಗೆ ಜದ್ದಾಫ್ ಜಿಲ್ಲೆಯ ಸಮುದ್ರ ತೀರಕ್ಕೆ ಹೋಗಿದ್ದ. ಆಗ ಈ ದುರ್ಘ‌ಟನೆ ನಡೆದಿದೆ ಎಂದು ಸ್ಥಳೀಯ ಖಲೀಜ್‌ ಟೈಮ್ಸ್‌ ವರದಿ ಮಾಡಿದೆ.

ಮೃತ ಸಹಾದ್‌ ಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಸುದ್ದಿ ತಿಳಿದೊಡನೆಯೇ ಪೋರ್ಟ್‌ ಪೊಲೀಸ್‌ ಠಾಣೆಯ ಸಿಬಂದಿಗಳು ಸ್ಥಳಕ್ಕೆ ಧಾವಿಸಿ ಬಂದರು. ಕೋಸ್ಟ್‌ ಗಾರ್ಡ್‌ನ ಮುಳುಗು ತಜ್ಞರು ಶವವನ್ನು ಮೇಲಕ್ಕೆತ್ತಿದರು.

Advertisement

Udayavani is now on Telegram. Click here to join our channel and stay updated with the latest news.

Next