Advertisement

ಮಾ.11ಕ್ಕೆ ಭಾರತೀಯ ಜೀವ ವಿಮಾ ನಿಗಮ ಐಪಿಒ ಮಾರುಕಟ್ಟೆಗೆ ಪ್ರವೇಶ?

08:42 PM Feb 18, 2022 | Team Udayavani |

ಮುಂಬೈ: ಭಾರತೀಯ ಜೀವ ವಿಮಾ ನಿಗಮದ ಬಹುನಿರೀಕ್ಷಿತ ಐಪಿಒ ಮಾ.11ರಂದು ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಹೇಳಲಾಗಿದೆ.

Advertisement

ಅದು ಸುಮಾರು 60 ಸಾವಿರ ಕೋಟಿ ರೂ. ಮೊತ್ತದ್ದಾಗಿರಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ. ಆರಂಭದಲ್ಲಿ ಸಾಂಸ್ಥಿಕ ಹೂಡಿಕೆದಾರರಿಗೆ ಐಪಿಒದಲ್ಲಿ ಹಣ ತೊಡಗಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಬಳಿಕ ಸಾರ್ವಜನಿಕರಿಗೆ ಅದನ್ನು ತೆರೆಯಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್‌ ವರದಿ ಮಾಡಿದೆ.

ಅದಕ್ಕಿಂತ ಮೊದಲು ಮುಂದಿನ ತಿಂಗಳ ಮೊದಲ ವಾರದಲ್ಲಿ ಐಪಿಒ ಹೊರಡಿಸಲು ಬೇಕಾಗುವ ಒಪ್ಪಿಗೆಯನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಇದಾದ ಬಳಿಕವೇ ಪ್ರತಿ ಷೇರಿಗೆ ಎಷ್ಟು ಮೊತ್ತ ನಿಗದಿ ಮಾಡಲಾಗಿದೆ ಎಂಬ ಅಂಶ ಪ್ರಕಟವಾಗಲಿದೆ.

ಜತೆಗೆ ಐಪಿಒ ದಿನಾಂಕದಲ್ಲಿಯೂ ಬದಲಾವಣೆಯಾಗುವ ಸಾಧ್ಯತೆಯ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next