Advertisement

Indian Hockey: ಭಾರತ ಹಾಕಿ ತಂಡದ ಆಸ್ಟ್ರೇಲಿಯ ಪ್ರವಾಸ

09:15 PM Apr 02, 2024 | Team Udayavani |

ಹೊಸದಿಲ್ಲಿ: ಶನಿವಾರ ಆರಂಭಗೊಳ್ಳಲಿರುವ ಐದು ಪಂದ್ಯಗಳ ಅಭ್ಯಾಸ ಸರಣಿಗಾಗಿ ಭಾರತದ ಪುರುಷರ ಹಾಕಿ ತಂಡ ಆಸ್ಟ್ರೇಲಿಯಕ್ಕೆ ತೆರಳಿದೆ. ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ತಯಾರಿ ನಿಟ್ಟಿನಲ್ಲಿ ಈ ಸರಣಿ ಬಹಳ ಮಹತ್ವದ್ದಾಗಿದೆ.

Advertisement

ಅಭ್ಯಾಸ ಸರಣಿಯ ಐದು ಪಂದ್ಯಗಳು ಎ. 6, 7, 10, 12 ಮತ್ತು 13ರಂದು ನಡೆಯಲಿವೆ. ಹರ್ಮನ್‌ಪ್ರೀತ್‌ ಸಿಂಗ್‌ ಭಾರತೀಯ ತಂಡವನ್ನು ಮುನ್ನಡೆಸುತ್ತಿದ್ದಾರೆ.

ನಾವು ಬಲಿಷ್ಠ ಆಸ್ಟ್ರೇಲಿಯ ತಂಡವನ್ನು ಎದುರಿಸಲಿರುವುದರಿಂದ ಈ ಅಭ್ಯಾಸ ಸರಣಿ ನಮಗೆ ಮಹತ್ವದ್ದೆನಿಸಿದೆ ಎಂದು ಉಪನಾಯಕ ಹಾರ್ದಿಕ್‌ ಸಿಂಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next