Advertisement

ಐಎಎಫ್ ಪೈಲಟ್‌ ಸುರಕ್ಷಿತ ಮರಳಿಕೆ: ಪಾಕಿಗೆ ಭಾರತದ ಡಿಮಾರ್ಶೆ

06:27 AM Feb 28, 2019 | udayavani editorial |

ಹೊಸದಿಲ್ಲಿ : ಪಾಕಿಸ್ಥಾನ ತನ್ನ ವಶದಲ್ಲಿರುವ ಭಾರತೀಯ ವಾಯು ಪಡೆಯ ಮಿಗ್‌ 21 ಪೈಲಟ್‌ ನನ್ನು (ಅಭಿನಂದನ್‌ ವರ್ಧಮಾನ್‌) ತತ್‌ಕ್ಷಣವೇ ಸುರಕ್ಷಿತವಾಗಿ ಭಾರತಕ್ಕೆ ಮರಳಿಸಬೇಕು ಎಂದು ಪಾಕಿಸ್ಥಾನದಲ್ಲಿನ ಭಾರತೀಯ ಹೈಕಮಿಶನ್‌ ಪಾಕ್‌ ವಿದೇಶ ಸಚಿವಾಲಯಕ್ಕೆ  ಡಿಮಾರ್ಶೆ ಹೊರಡಿಸಿದೆ. 

Advertisement

ಇದೇ ರೀತಿಯ ಡಿಮಾರ್ಶೆಯನ್ನು ಭಾರತದಲ್ಲಿರುವ ಪಾಕಿಸ್ಥಾನದ ಪ್ರಭಾರ ಹೈಕಮಿಶನರ್‌ಗೆ ಕೂಡ ನೀಡಲಾಗಿದೆ ಎಂದು ಕೇಂದ್ರ  ವಿದೇಶ ಸಚಿವಾಲಯ ತಿಳಿಸಿದೆ. 

ಪಾಕ್‌ ಸರಕಾರ ಜಿನೇವಾ ಒಪ್ಪಂದದ ಪ್ರಕಾರ ತನ್ನ ವಶದಲ್ಲಿರುವ ಭಾರತೀಯ ಪೈಲಟ್‌ ಗೆ ಯಾವುದೇ ರೀತಿಯ ಹಿಂಸೆ, ಕಿರುಕುಳ ನೀಡದೆ, ಆತನನ್ನು ಗೌರವದೊಂದಿಗೆ ನಡೆಸಿಕೊಂಡು ಭಾರತಕ್ಕೆ ಮರಳಿಸಬೇಕು ಮತ್ತು ಪಾಕಿಸ್ಥಾನ ತನ್ನ ಈ ಅಂತಾರಾಷ್ಟ್ರೀಯ ಬದ್ಧತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಡಿಮಾರ್ಶೆ ಮೂಲಕ ತಿಳಿಸಲಾಗಿದೆ. 

ನಿನ್ನೆ ಗುರುವಾರ ಪಾಕಿಸ್ಥಾನದ ಎಫ್16 ಯುದ್ಧ ವಿಮಾನ ಭಾರತೀಯ ವಾಯು ಗಡಿಯ ಉಲ್ಲಂಘನೆ ಗೈದು ಒಳನುಗ್ಗಿದಾಗ ಅದನ್ನು  ಐಎಎಫ್ ಹೊಡೆದುರುಳಿಸಿತ್ತು. ಆಗ ಮಿಗ್‌ 21 ಪತನಗೊಂಡ ಸಂದರ್ಭದಲ್ಲಿ ಅದರ ಪೈಲಟ್‌ ಅಭಿನಂದನ್‌ ವರ್ಧಮಾನ್‌ ನಾಪತ್ತೆಯಾಗಿದ್ದರು. ಆದರೆ ಪಿಓಕೆ ಯಲ್ಲಿ ಬಿದ್ದಿದ್ದ ಆತನನ್ನು ಪಾಕ್‌ ಸೇನೆ ವಶಕ್ಕೆ ತೆಗೆದುಕೊಂಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next