Advertisement

Sandalwood: ಕನ್ನಡಕ್ಕೂ ಕಾಲಿಟ್ಟ ಐಎಫ್ಎಂಎ ಸಂಸ್ಥೆ  

04:44 PM Jan 21, 2024 | Team Udayavani |

ಭಾರತೀಯ ಚಿತ್ರೋದ್ಯಮದಲ್ಲಿ ಸಿನಿಮಾ ಮೇಕರ್‌ಗಳ ಒಳಿತಿಗಾಗಿ ಶ್ರಮಿಸುತ್ತಿರುವ ಇಂಡಿಯನ್‌ ಫಿಲಂ ಮೇಕರ್ ಅಸೋಸಿಯೇಷನ್‌’ (ಐಎಫ್ ಎಂಎ) ಈಗ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದೆ.

Advertisement

ಕನ್ನಡಿಗ ಹೆಚ್‌. ಆರ್‌. ದಿಲೀಪ್‌ ಕುಮಾರ್‌ ಸಾರಥ್ಯದಲ್ಲಿ “ಐಎಫ್ಎಂಎ’ಯ ಕನ್ನಡ ಶಾಖೆ ಆರಂಭವಾಗಿದೆ. “ಐಎಫ್ಎಂಎ’ ಸಂಸ್ಥೆಯ ಕೇಂದ್ರ ಕಚೇರಿ ತೆಲಂಗಾಣದಲ್ಲಿದ್ದು, 12 ರಾಜ್ಯಗಳಲ್ಲಿ 9 ಕೇಂದ್ರಗಳು ಪ್ರಾರಂಭಗೊಂಡಿದೆ. ಇದರಲ್ಲಿ ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ತಂತ್ರಜ್ಞರು ನೋಂದಣಿ ಮಾಡಿಸಬಹುದಾಗಿದೆ.

ನಿಯಮಾನುಸಾರ ನಿರ್ಮಾಪಕರುಗಳಿಗೆ ಬ್ಯಾಂಕಿನಿಂದ ಸಾಲ ಮಂಜೂರು ಮಾಡಿಸಿ ಕೊಡಲಾಗುವುದು. ವಾರದಲ್ಲಿ ಬಿಡುಗಡೆಯಾದ ಒಂದು ಕನ್ನಡ ಚಿತ್ರವನ್ನು ಆಯ್ಕೆ ಮಾಡಿ ಕೊಂಡು ಐದು ಸಾವಿರ ಟಿಕೆಟ್‌ ಖರೀದಿ ಮಾಡಲಾಗುತ್ತದೆ. ಓಟಿಟಿ, ಡಬ್ಬಿಂಗ್‌, ಆಡಿಯೋ, ವಿತರಣೆ ಇನ್ನು ಮುಂತಾದ ಸೇವೆಗಳನ್ನು ನೀಡಲಾಗಿ ನಿರ್ಮಾಪಕರಿಗೆ ಆಸರೆಯಾಗಿ ನಿಲ್ಲುತ್ತದೆ. ಜೊತೆಗೆ ಓಟಿಟಿ ಅಧಿಕಾರಿಗಳೊಂದಿಗೆ ನಿರ್ಮಾಪಕರನ್ನು ಭೇಟಿ ಮಾಡಿಸಿ ವ್ಯವಹಾರ ಮಾಡಿಕೊಡಲಾಗುತ್ತದೆ. ಇದಕ್ಕೆ ಸಂಸ್ಥೆಯು ಯಾವುದೇ ರೀತಿಯ ದಲ್ಲಾಳಿ ಶುಲ್ಕ ಪಡೆಯುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next