ಪಣಜಿ: 1990ರಲ್ಲಿ ಕಾಶ್ಮೀರ ಕಣಿವೆಯಿಂದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ನಿರ್ಗಮನದ ಸುತ್ತ ಸುತ್ತುವ ಚಲನಚಿತ್ರ “ದಿ ಕಾಶ್ಮೀರ್ ಫೈಲ್ಸ್” ಅನ್ನು ಗೋವಾದಲ್ಲಿ ನಡೆದ 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರ ನಡಾವ್ ಲ್ಯಾಪಿಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ಇದನ್ನು “ಪ್ರಚಾರ” ಮತ್ತು “ಅಸಭ್ಯ ಚಲನಚಿತ್ರ” ಎಂದು ಕರೆದಿದ್ದಾರೆ, ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ, ಸ್ಪರ್ಧಾತ್ಮಕ ವಿಭಾಗಕ್ಕೆ ಇದು ಸೂಕ್ತವಲ್ಲ ಇದೊಂದು ಪ್ರಚಾರಕ ಚಲನಚಿತ್ರದಂತೆ ನಮಗೆ ತೋರುತ್ತಿದೆ. ಈ ಭಾವನೆಗಳನ್ನು ವೇದಿಕೆಯಲ್ಲಿ ನಿಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ನನಗೆ ಯಾವುದೇ ಮುಜುಗರವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕೊನೆಯ ದಿನ ಪ್ರದರ್ಶನಗೊಂಡ ಚಿತ್ರವನ್ನು ಕಂಡು ನಾವು ವಿಚಲಿತರಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಚಿತ್ರದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಪ್ರಮುಖ ಪಾತ್ರಗಳಲ್ಲಿದ್ದಾರೆ.ಈ ಚಲನಚಿತ್ರವನ್ನು ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಪ್ರಶಂಸಿಸಿದೆ ಮತ್ತು ಹೆಚ್ಚಿನ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೆರಿಗೆ ಮುಕ್ತಗೊಳಿಸಿತ್ತು.
ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಚಿತ್ರವನ್ನು ಹೊಗಳಿದ್ದಾರೆ. ಆದರೆ, ಅನೇಕರು ಘಟನೆಗಳನ್ನು ಏಕಪಕ್ಷೀಯವಾಗಿ ತೋರಿಸಿದ್ದಾರೆ ಎಂದುದೂರಿದ್ದರು.