Advertisement
ಸಭೆಯಲ್ಲಿ ಭಾಗವಹಿಸಿದ್ದ ಭಾರತೀಯ ಅಧಿಕಾರಿಗಳ ನಿಯೋಗಕ್ಕೆ ಭಾರತದ ವಿದೇ ಶಾಂಗ ಇಲಾಖೆಯ ಪಾಕಿಸ್ಥಾನ- ಅಫ್ಘಾನಿಸ್ಥಾನ ವಿಭಾಗದ ಜಂಟಿ ಕಾರ್ಯದರ್ಶಿಯಾಗಿರುವ ಜೆ.ಪಿ. ಸಿಂಗ್ ನೇತೃತ್ವ ವಹಿಸಿದ್ದರೆ, ತಾಲಿಬಾನಿ ಗಳ ನಿಯೋಗಕ್ಕೆ ಅಫ್ಘಾನಿಸ್ಥಾನದ ಉಪ ಪ್ರಧಾನಿ ಅಬ್ದುಲ್ ಸಲಾಂ ಅನಾಫಿ ಮುಂದಾಳತ್ವ ವಹಿಸಿ ದ್ದರು. ಸಭೆಯಲ್ಲಿ ಚರ್ಚಿಸಲಾದ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ. ಆದರೆ, ಅಫ್ಘಾನಿಸ್ಥಾನದ “ಟೋಲೋ ನ್ಯೂಸ್’ಗೆ ನೀಡಿರುವ ಸಂದರ್ಶ ನದಲ್ಲಿ ತಾಲಿಬಾನ್ ವಕ್ತಾರ ಝಬೀ ವುಲ್ಲಾ ಮುಜಾ ಹಿದೀನ್ ವಿವರಣೆ ನೀಡಿದ್ದಾನೆ. ಸಭೆಯಲ್ಲಿ, ಅಫ್ಘಾನಿಸ್ಥಾನಕ್ಕೆ ಹಲವಾರು ದಶಕಗಳಿಂದ ನೀಡುತ್ತಾ ಬಂದಿರುವ ಮಾನ ವೀಯ ಹಾಗೂ ಮೂಲಸೌಕರ್ಯಗಳ ಸೇವೆ ಮುಂದುವರಿಸಲು ಭಾರತ ಆಸಕ್ತಿ ಹೊಂದಿರುವುದಾಗಿ ತಾಲಿಬಾನಿಗಳಿಗೆ ಮನ ದಟ್ಟು ಮಾಡಲಾಯಿತು. ಇದಕ್ಕೆ ತಾಲಿಬಾನಿಗಳ ಸಹಕಾರ ಬೇಕೆಂದು ಭಾರತ ಮನವಿ ಮಾಡಿದೆ. ಎರಡೂ ದೇಶಗಳ ಬಾಂಧವ್ಯಾಭಿವೃದ್ಧಿಗೆ ಪರಸ್ಪರ ಅಗತ್ಯ ಸಹಕಾರ ನೀಡುವುದು ಹಾಗೂ ಇತರ ನೆರೆ ರಾಷ್ಟ್ರಗಳ ರಾಜತಾಂತ್ರಿಕ ಹಾಗೂ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿಗೆ ಶ್ರಮಿಸುವ ಬಗ್ಗೆ ಎರಡೂ ಕಡೆಯ ಪ್ರತಿನಿಧಿಗಳು ಸಹಮತ ವ್ಯಕ್ತಪಡಿಸಿವೆ ಎಂದು ಆತ ಹೇಳಿದ್ದಾನೆ.
Advertisement
ಭಾರತ, ತಾಲಿಬಾನ್ ಪ್ರತಿನಿಧಿಗಳ ಚರ್ಚೆ
12:09 AM Oct 22, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.