Advertisement
ಕಾಂಗರೂ ನಾಡಿನಲ್ಲಿ ಸರಣಿ ಗೆದ್ದು ಬಂದವರಿಗೆ ತವರಿನ ಮುಖಾಮುಖೀಯಲ್ಲಿ ಮೇಲುಗೈ ಸಾಧಿಸುವುದು ಕಷ್ಟವಲ್ಲ ಎಂಬ ನಂಬಿಕೆಯೊಂದಿತ್ತು. ಆದರೆ ಜೋ ರೂಟ್ ಪಡೆ ಭಾರತಕ್ಕೆ ಮರ್ಮಾಘಾತವಿಕ್ಕಿದೆ. ಇದೊಂದು ವಿಭಿನ್ನ ಸವಾಲು, ಭಾರತದ “ರೂಟ್’ ಸುಗಮವಲ್ಲ ಎಂಬುದು ಅರಿವಿಗೆ ಬಂದಿದೆ.
Related Articles
ಮೊದಲ ಟೆಸ್ಟ್‌ನಲ್ಲಿ ಅಪರೂಪದ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರನ್ನು ಕೈಬಿಡುವ ಮೂಲಕ ಭಾರತ ಬಹಳ ದೊಡ್ಡ ತಪ್ಪು ಮಾಡಿರುವುದು ಸಾಬೀತಾಗಿದೆ. ಆದರೂ ಇವರಿಗೆ ದ್ವಿತೀಯ ಟೆಸ್ಟ್‌ನಲ್ಲಿ ಜಾಗ ಸಿಗುವುದು ಅನುಮಾನ. ಕಾರಣ, ಅಕ್ಷರ್ ಪಟೇಲ್ ಗುಣಮುಖರಾಗಿ ಬುಧವಾರ ಅಭ್ಯಾಸಕ್ಕೆ ಮರಳಿದ್ದಾರೆ. ಹೀಗಾಗಿ ನದೀಂ ಸ್ಥಾನ ಪಟೇಲ್ ಪಾಲಾಗುವುದು ಬಹುತೇಕ ಖಚಿತ.
Advertisement
ತವರಲ್ಲಿ ಸ್ಪಿನ್ ಆಕ್ರಮಣವೇ ಭಾರತದ ಪ್ರಮುಖ ಅಸ್ತ್ರ. ಆದರೆ ಚೆನ್ನೈ ಸ್ಪಿನ್ನಿನಲ್ಲಿ ವೆರೈಟಿಯೇ ಇರಲಿಲ್ಲ. ಅಶ್ವಿನ್, ವಾಷಿಂಗ್ಟನ್ ಇಬ್ಬರೂ ಬಲಗೈ ಆಫ್ ಸ್ಪಿನ್ನರ್, ನದೀಂ ಎಡಗೈ ಆಫ್ ಸ್ಪಿನ್ನರ್, ಅಷ್ಟೇ. ಇವರಲ್ಲಿ ಅಶ್ವಿನ್ ಹೊರತುಪಡಿಸಿದರೆ ಉಳಿದಿಬ್ಬರಿಗೆ ಅನುಭವವಿಲ್ಲ. ವಾಷಿಂಗ್ಟನ್ ಬ್ಯಾಟಿಂಗ್‌ನಲ್ಲಿ ಓಕೆ ಆದರೂ ಘಾತಕ ಸ್ಪಿನ್ನರ್ ಅಲ್ಲ. ನದೀಂ ಮೂಲ ತಂಡದಲ್ಲೇ ಇರಲಿಲ್ಲ. ಈಗ 4 ವಿಕೆಟಿಗೆ 233 ರನ್ ನೀಡಿ ದುಬಾರಿಯಾಗಿದ್ದಾರೆ. ಅಕ್ಷರ್ ಪಟೇಲ್ ಕೂಡ ಎಡಗೈ ಆಫ್ಸ್ಪಿನ್ನರ್. ಆದರೆ ಇನ್ನೂ ಟೆಸ್ಟ್ ಆಡಿಲ್ಲ.
ರೋಹಿತ್ ಓಪನಿಂಗ್ ವೈಫಲ್ಯಆರಂಭಿಕನಾಗಿ ರೋಹಿತ್ ಶರ್ಮ ಸತತ ವೈಫಲ್ಯ ಕಾಣುತ್ತಿರುವುದು ಭಾರತಕ್ಕೆ ಎದುರಾದ ದೊಡ್ಡ ಹೊಡೆತ. ಹೀಗಾಗಿ ಮತ್ತೆ ಅಗರ್ವಾಲ್ ಕಣಕ್ಕಿಳಿಯಬಹುದೇ, ರಾಹುಲ್ ಅವಕಾಶ ಪಡೆಯಬಹುದೇ ಎಂಬ ಕುತೂಹಲ ಸಹಜ. ರಹಾನೆ ವೈಫಲ್ಯದಿಂದ ತಂಡದ ಮಿಡ್ಲ್ ಆರ್ಡರ್ ಮೇಲೂ ಹೊಡೆತ ಬಿದ್ದಿದೆ. ಉಪಕಪ್ತಾನನ ಬ್ಯಾಟ್ ಮಾತಾಡಬೇಕಿದೆ. ಮೊದಲ ದಿನದಿಂದಲೇ ಟರ್ನ್
ದ್ವಿತೀಯ ಟೆಸ್ಟ್ ಪಂದ್ಯಕ್ಕೆಂದು ನಿರ್ಮಿಸಲಾದ ಚೆನ್ನೈ ಪಿಚ್ ಮೊದಲ ದಿನದಿಂದಲೇ ತಿರುವು ಪಡೆಯಲಿದೆ ಎಂಬುದಾಗಿ ಕ್ಯುರೇಟರ್ ವಿ. ರಮೇಶ್ ಕುಮಾರ್ ಹೇಳಿದ್ದಾರೆ. ಹೀಗಾಗಿ ಭಾರತವಿಲ್ಲಿ ಮೂವರು ಸಮರ್ಥ ಸ್ಪಿನ್ನರ್‌ಗಳನ್ನು ದಾಳಿಗಿಳಿಸಬೇಕಿದೆ. ಆಗ, ರವೀಂದ್ರ ಜಡೇಜ ಗೈರಿನಿಂದ ತಪ್ಪಿದ ಸ್ಪಿನ್ ಸಮತೋಲನಕ್ಕೆ ಸ್ವಲ್ಪವಾದರೂ ಪರಿಹಾರ ಸಿಗಲಿದೆ. ವೇಗಿಗಳಾದ ಇಶಾಂತ್, ಬುಮ್ರಾ ಯಾವುದೇ ಪರಿಣಾಮ ಬೀರಿಲ್ಲ. ಹೀಗಾಗಿ ಠಾಕೂರ್, ಸಿರಾಜ್, ಆಲ್‌ರೌಂಡರ್ ಪಾಂಡ್ಯ ಹೆಸರು ಮುನ್ನೆಲೆಗೆ ಬಂದಿದೆ.