Advertisement

Indian Cricket Team; ಅಭಿಷೇಕ್‌ ನಾಯರ್‌ ಸಹಾಯಕ ಕೋಚ್‌?

02:03 AM Jul 11, 2024 | Team Udayavani |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡಕ್ಕೆ ಮಾಜಿ ಆಲ್‌ರೌಂಡರ್‌ ಅಭಿಷೇಕ್‌ ನಾಯರ್‌ ಸಹಾಯಕ ಕೋಚ್‌ ಆಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಕೆಕೆಆರ್‌ ತಂಡದ ಸಹಾಯಕ ಕೋಚ್‌ ಆಗಿರುವ ನಾಯರ್‌, ಟೀಮ್‌ ಇಂಡಿಯಾದ ಕೋಚಿಂಗ್‌ ಬಳಗವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Advertisement

40 ವರ್ಷದ ನಾಯರ್‌, ಭಾರತ ಪರ 3 ಏಕದಿನ ಪಂದ್ಯಗಳನ್ನಾಡಿದ್ದಾರೆ. 50 ಐಪಿಎಲ್‌ ಇನ್ನಿಂಗ್ಸ್‌ ಆಡಿರುವ ನಾಯರ್‌, ಕೆಕೆಆರ್‌ ತಂಡಕ್ಕೆ ಸಹಾಯಕ ಕೋಚ್‌ ಆಗಿ ಸೈ ಎನಿಸಿಕೊಂಡಿದ್ದಾರೆ. ಗಂಭೀರ್‌ ಮೆಂಟರ್‌, ನಾಯರ್‌ ಸಹಾಯಕ ಕೋಚ್‌ ಆಗಿದ್ದ ಕೋಲ್ಕತಾ, ಈ ಬಾರಿಯ ಐಪಿಎಲ್‌ನಲ್ಲಿ ಚಾಂಪಿಯನ್‌ ಪಟ್ಟಕ್ಕೇರಿತ್ತು.

ರಾಹುಲ್‌ ದ್ರಾವಿಡ್‌ ಮುಖ್ಯ ಕೋಚ್‌ ಆಗಿದ್ದಾಗ ಫೀಲ್ಡಿಂಗ್‌ ಕೋಚ್‌ ಆಗಿದ್ದ ಟಿ. ದಿಲೀಪ್‌ ತಮ್ಮ ಸ್ಥಾನ ಉಳಿಸಿ ಕೊಳ್ಳುವ ಸಾಧ್ಯತೆಯಿದೆ. ಬ್ಯಾಟಿಂಗ್‌ ಕೋಚ್‌ ಪಾತ್ರವನ್ನು ಸ್ವತಃ ಗಂಭೀರ್‌ ಅವರೇ ನಿಭಾಯಿಸುವ ನಿರೀಕ್ಷೆ ಇದೆ.

ಬೌಲಿಂಗ್‌ ಕೋಚ್‌ ರೇಸ್‌…
ಟೀಮ್‌ ಇಂಡಿಯಾದ ಬೌಲಿಂಗ್‌ ಕೋಚ್‌ ರೇಸ್‌ನಲ್ಲಿ ಮಾಜಿ ವೇಗಿ ಗಳಾದ ಕನ್ನಡಿಗ ವಿನಯ್‌ ಕುಮಾರ್‌, ಜಹೀರ್‌ ಖಾನ್‌ ಮತ್ತು ಲಕ್ಷ್ಮೀಪತಿ ಬಾಲಾಜಿ ಹೆಸರು ಕೇಳಿ ಬರುತ್ತಿದೆ. ಬಿಸಿಸಿಐ ಶೀಘ್ರವೇ ಅಂತಿಮ ಘೋಷಣೆ ಮಾಡುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next