Advertisement

ಕೆಂಪು ಪಟ್ಟಿಗೆ ಸೇರಿದ ಭಾರತ ; ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಧಕ್ಕೆ ಇಲ್ಲ: ಐಸಿಸಿ

11:27 PM Apr 20, 2021 | Team Udayavani |

ದುಬಾೖ: ಬ್ರಿಟನ್‌ಗೆ ಪ್ರಯಾಣ ನಿರ್ಬಂಧವಿದ್ದರೂ ಭಾರತ ಮತ್ತು ನ್ಯೂಜಿಲ್ಯಾಂಡ್‌ ನಡುವಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ಪೂರ್ವನಿಗದಿಯಂತೆ ಸೌತಾಂಪ್ಟನ್‌ನಲ್ಲಿ ಜೂನ್‌ 18ರಿಂದ ನಡೆಯಲಿದೆ ಎಂದು ಐಸಿಸಿ ಭರವಸೆ ನೀಡಿದೆ.

Advertisement

ಭಾರತದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಕಾರಣ ಇಂಗ್ಲೆಂಡ್‌ ಪ್ರಯಾಣ ನಿರ್ಬಂಧ ಹೇರಿದ್ದು, ಅದರಂತೆ ಭಾರತವನ್ನು ಕೆಂಪುಪಟ್ಟಿಗೆ ಸೇರಿಸಿದೆ. ಈ ಕಾರಣ ಭಾರತೀಯರು ಲಂಡನ್‌ಗೆ ಪ್ರಯಾಣಿಸುವಂತಿಲ್ಲ. ಜತೆಗೆ ಇತರ ದೇಶದಿಂದ ಬ್ರಿಟನ್‌ಗೆ
ಮರಳುವ ಬ್ರಿಟಿಷ್‌ ಪ್ರಜೆಗಳೂ ಕಡ್ಡಾಯ 10 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕೆಂದು ಇಲ್ಲಿನ ಸರಕಾರ ಸೂಚಿಸಿದೆ. ಹೀಗಾಗಿ ಟೆಸ್ಟ್‌ ಚಾಂಪಿ ಯನ್‌ಶಿಪ್‌ ನಡೆಯುವ ಬಗ್ಗೆ ಆತಂಕ ಸೃಷ್ಟಿಯಾಗಿತ್ತು.

ಫೈನಲ್‌ ಯಥಾಪ್ರಕಾರ…
ಆದರೆ ಈ ಬಗ್ಗೆ ಮಾಹಿತಿ ನೀಡಿರುವ ಐಸಿಸಿ, ಸಾಂಕ್ರಾಮಿಕ ಪಿಡುಗು ಇರುವಾಗಲೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಬಯೋಬಬಲ್‌ ಸುರಕ್ಷಾ ವ್ಯವಸ್ಥೆಯಲ್ಲಿ ಹೇಗೆ ನಡೆಸಬಹುದು ಎಂಬುದನ್ನು ಇಸಿಬಿ ಮತ್ತು ಇತರ ಸದಸ್ಯ ರಾಷ್ಟ್ರಗಳು ಈಗಾಗಲೇ ತೋರಿಸಿಕೊಟ್ಟಿವೆ. ಇದನ್ನು ನಾವು ಮುಂದುವರಿಸುತ್ತೇವೆ. ಅದರಂತೆ ಜೂನ್‌ನಲ್ಲಿ ಸೌತಾಂಪ್ಟನ್‌ ಫೈನಲ್‌ ಕೂಡ ನಡೆಯಲಿದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ :ಮೋದಿ ಭಾಷಣ ‘ನಿಮ್ಮ ತಲೆ ಮೇಲೆ ನಿಮ್ಮ‌ ಕೈ’ ಎಂಬ ಸಂದೇಶ ನೀಡಿದೆ: ಸಿದ್ದರಾಮಯ್ಯ ಟೀಕೆ

ಬಿಸಿಸಿಐ ಹೇಳಿಕೆ
“ಈ ಹಂತದಲ್ಲಿ ಏನೂ ಹೇಳಲು ಸಾಧ್ಯವಾಗದು. ಜೂನ್‌ ವೇಳೆಗೆ ಪರಿಸ್ಥಿತಿ ಹೇಗಿರುತ್ತದೆ ಎನ್ನುವುದು ಊಹಿಸಲು ಅಸಾಧ್ಯ. ಒಂದು ವೇಳೆ ಕೊರೊನಾ ಹಾವಳಿ ಕಡಿಮೆಯಾಗಿ ಪ್ರಯಾಣ ಸಾಧ್ಯ ಆಗಬಹುದು. ಸಮಸ್ಯೆ ಉಲ್ಬಣಿಸಿದರೆ ಪ್ರಯಾಣ ಅಸಾಧ್ಯ ಆಗಲೂಬಹುದು. ಕೊರೊನಾ ಎಂಬ ವೈರಸ್‌ ತೊಲಗಬೇಕಾದರೆ ಎಲ್ಲ ಕಠಿನ ಕ್ರಮಗಳಿಗೂ ಸಿದ್ಧರಿರಬೇಕಾದ ಅನಿವಾರ್ಯತೆ ಎಲ್ಲರ ಮುಂದಿದೆ’ ಎಂದು ಬಿಸಿಸಿಐ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next