Advertisement

ಭಾರತದ ನಿರಾಕರಣೆ: ಹಗಲು-ರಾತ್ರಿ ಟೆಸ್ಟ್‌  ರದ್ದು

06:00 AM May 09, 2018 | |

ಸಿಡ್ನಿ: ಭಾರತ ನಿರಾಕರಿಸಿದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯವು ಹಗಲು-ರಾತ್ರಿ ಟೆಸ್ಟ್‌ ಪಂದ್ಯ ಆಯೋಜಿಸುವುದನ್ನು ರದ್ದುಗೊಳಿಸಿದೆ. ಇದರ ಬದಲು ಬೆಳಗ್ಗಿನ ಅವಧಿಯಲ್ಲಿ ಈ ಟೆಸ್ಟ್‌ ನಡೆಸಲಾಗುತ್ತದೆ ಎಂದು ಆಸ್ಟ್ರೇಲಿಯ ಕ್ರಿಕೆಟ್‌ನ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಅಡಿಲೇಟ್‌ನಲ್ಲಿ ಡಿ. 6ರಿಂದ 10ರ ವರೆಗೆ ನಡೆಯುವ ಟೆಸ್ಟ್‌ ಪಂದ್ಯವನ್ನು ಪಿಂಕ್‌ ಚೆಂಡಿನೊಂದಿಗೆ ಆಡಲು ನಿರ್ಧರಿಸಲಾಗಿತ್ತು. ಈ ಸಂಬಂಧ ಭಾರತೀಯ ಕ್ರಿಕೆಟ್‌ ಮಂಡಳಿಗೆ ಪತ್ರ ಬರೆಯಲಾಗಿತ್ತು. ಆದರೆ ಪ್ರಸ್ತಾಪಿತ ಹಗಲು-ರಾತ್ರಿ ಟೆಸ್ಟ್‌ನಲ್ಲಿ ಆಡಲು ನಾನು ಸಿದ್ಧನಾಗಿಲ್ಲವೆಂದು ತಿಳಿಸಿದ ಬಿಸಿಸಿಐ ಪತ್ರ ಸಿಕ್ಕಿದ ಕಾರಣ ಟೆಸ್ಟ್‌ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯದ ಮುಖ್ಯಸ್ಥ ಜೇಮ್ಸ್‌ ಸದರ್‌ಲ್ಯಾಂಡ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ಈ ಟೆಸ್ಟ್‌ ಪಂದ್ಯವನ್ನು ಹಗಲಿನಲ್ಲಿ ನಡೆಸಲಾಗುವುದನ್ನು ದೃಢಪಡಿಸುತ್ತಿದ್ದೇವೆ ಎಂದವರು ಖಚಿತಪಡಿಸಿದರು.

ಹಗಲು-ರಾತ್ರಿ ಟೆಸ್ಟ್‌ಗೆ ಟಿವಿ ವೀಕ್ಷಕರು ಹೆಚ್ಚು ಮತ್ತು ಟ್ವೆಂಟಿ20 ಯಿಂದ 5 ಪಂದ್ಯಗಳ ಟೆಸ್ಟ್‌ ಅನ್ನು ಪಾರು ಮಾಡಲು ಇದು ಸಹಕಾರಿ ಎಂದು ಸದರ್‌ಲ್ಯಾಂಡ್‌ ಹೇಳಿದರು. 

ವಿಶ್ವದ 2 ಅಗ್ರ ತಂಡಗಳ ನಡುವೆ ಈ ಹೋರಾಟ ನಡೆಯುತ್ತಿದೆ. ಹಾಗಾಗಿ ಮೊದಲ ಟೆಸ್ಟ್‌ ಪಂದ್ಯ ವನ್ನು ಹಗಲು-ರಾತ್ರಿಯಲ್ಲಿ ನಡೆ ಸಲು ನಮಗೆ ಇಷ್ಟವಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಹೌದು. ನಾವು ಹಗಲು-ರಾತ್ರಿ ಟೆಸ್ಟ್‌ ಆಡುವುದಿಲ್ಲ ಎಂದು ವಿನೋದ್‌ ರೈ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next