Advertisement
ಕೇವಲ 31 ಪದಕ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಈವರೆಗೆ ಗೆದ್ದಿರುವುದು 31 ಪದಕ ಮಾತ್ರ. ಇದರಲ್ಲಿ 9 ಚಿನ್ನ, 12 ಬೆಳ್ಳಿ ಹಾಗೂ 10 ಕಂಚು ಸೇರಿವೆ. ಆದರೆ ಈ ಬಾರಿ 20ರಿಂದ 25 ಪದಕಗಳ ಗುರಿ ಹಾಕಿಕೊಳ್ಳ ಲಾಗಿದೆ. ಸ್ಪರ್ಧಿಸುತ್ತಿರುವ ಕ್ರೀಡಾಳುಗಳ ಸಂಖ್ಯೆಯೂ ಹೆಚ್ಚಿರುವುದರಿಂದ ನಿರೀಕ್ಷೆಯೂ ಹೆಚ್ಚಿದೆ.ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್ ಭಾರತದ ಪಾಲಿಗೆ ಬಂಪರ್ ಆಗಿ ಪರಿಣಮಿಸಿತ್ತು. ಒಟ್ಟು 31 ಪದಕಗಳಲ್ಲಿ 19 ಪದಕಗಳು ಟೋಕಿಯೊ ಕೂಟವೊಂದರಲ್ಲೇ ಒಲಿದಿದ್ದವು. ಈ ಬಾರಿ ಇದನ್ನು ಮೀರಿ ನಿಲ್ಲುವುದು ಭಾರತದ ಗುರಿಯಾಗಿದೆ.
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಬುಧ ವಾರ ರಾತ್ರಿ ಅದ್ದೂರಿ ಚಾಲನೆ ಲಭಿಸಿತು. ಪ್ಯಾರಿಸ್‌ನ ಜನಪ್ರಿಯ ತಾಣ ಪ್ಲೇಸ್ ಡೆ ಲಾ ಕಾಂಕಾರ್ಡ್‌ನಲ್ಲಿ ಈ ಸಮಾರಂಭ ವಿಜೃಂಭಣೆಯಿಂದ ಜರಗಿತು. ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟ ದಲ್ಲಿ ಭಾಗಿಯಾಗಿರುವ ಎಲ್ಲ ದೇಶ ಗಳ ಕ್ರೀಡಾಪಟುಗಳು ತಮ್ಮ ದೇಶದ ಧ್ವಜದೊಂದಿಗೆ ಉದ್ಘಾಟನಾ ಸಮಾ ರಂಭದಲ್ಲಿ ಪಾಲ್ಗೊಂಡರು.
Related Articles
Advertisement
ಉದ್ಘಾಟನಾ ಸಮಾರಂಭದಲ್ಲಿ ಜಾವೆ ಲಿನ್ ಎಸೆತ ಗಾರ ಸುಮಿತ್ ಅಂಟಿಲ್ ಹಾಗೂ ಶಾಟ್ ಪುಟರ್ ಭಾಗ್ಯಶ್ರೀ ಜಾಧವ್ ಭಾರತದ ಧ್ವಜಧಾರಿಗಳಾಗಿದ್ದರು.
ಮೊದಲ ದಿನವೇ 22 ಪದಕ ಸ್ಪರ್ಧೆಪ್ಯಾರಾಲಿಂಪಿಕ್ಸ್ ಸ್ಪರ್ಧೆಗಳು ಗುರು ವಾರ ದಿಂದ ಶುರುವಾಗಲಿವೆ. ಮೊದಲ ದಿನವೇ 22 ಪದಕ ಸ್ಪರ್ಧೆಗಳು ನಡೆ ಯ ಲಿವೆ. ಎರಡರಲ್ಲಿ ಭಾರತದ ಸ್ಪರ್ಧಿ ಗಳಿದ್ದಾರೆ. 16 ಕೋಟಿ ಟಿಕೆಟ್‌ಗಳ ಮಾರಾಟ?!
ಈ ಬಾರಿಯ ಪ್ಯಾರಾಲಿಂಪಿಕ್ಸ್ ಕೂಟ ವನ್ನು ಅತ್ಯಧಿಕ ಸಂಖ್ಯೆಯಲ್ಲಿ ವೀಕ್ಷಕರು ವೀಕ್ಷಿಸಲಿದ್ದಾರೆ ಎಂದು ಆರ್ಟಿಸ್ಟಿಕ್ ನಿರ್ದೇಶಕ ಥಾಮಸ್ ಜಾಲಿ ಹೇಳಿ ದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಆಯೋ ಜಕರು, ಸುಮಾರು 16 ಕೋಟಿಯಷ್ಟು ಪ್ಯಾರಾ ಲಿಂಪಿಕ್ಸ್ ಟಿಕೆಟ್‌ಗಳು ಮಾರಾಟವಾಗಿದೆ ಎಂದು ತಿಳಿಸಿದ್ದಾರೆ.