Advertisement

ಸ್ಮಾರ್ಟ್‌ ಸಿಟಿ : ಕುಸಿತ ಕಂಡ ಬೆಂಗಳೂರು

11:11 PM Sep 17, 2020 | mahesh |

ನವದೆಹಲಿ: ಜಾಗತಿಕ ಮಟ್ಟದ ಶ್ರೇಷ್ಠ ಸ್ಮಾರ್ಟ್‌ಸಿಟಿಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ 4 ನಗರಗಳಾದ ಬೆಂಗಳೂರು, ಹೈದರಾಬಾದ್‌, ನವದೆಹಲಿ ಹಾಗೂ ಮುಂಬೈ ಗಣನೀಯ ಕುಸಿತ ಕಂಡಿವೆ.

Advertisement

2019ರಲ್ಲಿ ಸಿದ್ಧಪಡಿಸಲಾಗಿದ್ದ ಪಟ್ಟಿಯಲ್ಲಿ 79ನೇ ಸ್ಥಾನದಲ್ಲಿದ್ದ ಬೆಂಗಳೂರು, ಈ ಬಾರಿ 95ನೇ ಸ್ಥಾನಕ್ಕೆ ಜಾರಿದೆ. ಇನ್ನು, ಕಳೆದ ಪಟ್ಟಿಯಲ್ಲಿ ಕ್ರಮವಾಗಿ 67, 68 ಹಾಗೂ 78ನೇ ಸ್ಥಾನಗಳಲ್ಲಿದ್ದ ಹೈದರಾಬಾದ್‌, ನವದೆಹಲಿ ಹಾಗೂ ಮುಂಬೈ ನಗರಗಳು ಈ ಬಾರಿ 85, 86 ಹಾಗೂ 93ನೇ ಸ್ಥಾನಕ್ಕೆ ಇಳಿದಿವೆ.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ನಗರಗಳಲ್ಲಿನ ಸ್ಮಾರ್ಟ್‌ ತಂತ್ರಜ್ಞಾನಗಳು ಜನರಿಗೆ ನೆರವಾದ ಬಗೆಯನ್ನು ಆಧರಿಸಿ “ಇನ್ಸ್ಟಿಟ್ಯೂಟ್‌ ಫಾರ್‌ ಮ್ಯಾನೇಜ್‌ಮೆಂಟ್‌ ಡೆವಲಪ್‌ಮೆಂಟ್‌’ (ಐಎಂಡಿ) ಹಾಗೂ “ಸಿಂಗಾಪುರ ಯೂನಿವರ್ಸಿಟಿ ಫಾರ್‌ ಟೆಕ್ನಾಲಜಿ ಆ್ಯಂಡ್‌ ಡಿಸೈನ್‌’ (ಎಸ್‌ಯುಟಿಡಿ) ಸಂಸ್ಥೆಗಳು ಜಂಟಿಯಾಗಿ ಈ ಪಟ್ಟಿ ತಯಾರಿಸಿವೆ. ಭಾರತದ ನಗರಗಳು ರ್‍ಯಾಂಕಿಂಗ್‌ನಲ್ಲಿ ಕುಸಿತ ಕಂಡಿರುವುದಕ್ಕೆ ಅಲ್ಲಿನ ಸ್ಮಾರ್ಟ್‌ ತಂತ್ರಜ್ಞಾನಗಳು ಕಾಲಕ್ಕೆ ತಕ್ಕಂತೆ ಆಧುನೀಕರಣಗೊಳ್ಳದಿರುವುದೇ ಕಾರಣ ಎಂದು ವರದಿ ಹೇಳಿದೆ.

ಅಗ್ರಸ್ಥಾನದಲ್ಲಿ ಸಿಂಗಾಪುರ: ಅಂದಹಾಗೆ, ಈ ಪಟ್ಟಿಯ ಅಗ್ರಸ್ಥಾನದಲ್ಲಿ ಸಿಂಗಾಪುರವಿದೆ. ಆನಂತರದ ಸ್ಥಾನಗಳಲ್ಲಿ ಹೆಲ್ಸಿಂಕಿ, ಜ್ಯೂರಿಚ್‌, ಆಕ್ಲೆಂಡ್‌, ಓಸ್ಲೋ, ಕೋಪನ್‌ಹೇಗ್‌, ಜಿನಿವಾ, ತೈಪೇ ಸಿಟಿ, ಆ್ಯಮ್‌ಸ್ಟರ್‌ ಡ್ಯಾಂ ಹಾಗೂ ನ್ಯೂಯಾರ್ಕ್‌ ಇವೆ.

Advertisement

Udayavani is now on Telegram. Click here to join our channel and stay updated with the latest news.

Next