Advertisement
ಈಗಾಗಲೇ ಇಬ್ಬರ ನಡುವಿನ ಮಾತಿನ ಯುದ್ಧ ಆರಂಭವಾಗಿದ್ದು, ಪಂದ್ಯದ ರೋಚಕತೆಯನ್ನು ಹೆಚ್ಚಿಸಿದೆ. “ಈ ಸ್ಪರ್ಧೆಗಾಗಿ ನಾನು ದಿನಂಪ್ರತಿ 8ರಿಂದ 10 ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿದ್ದೇನೆ. ವಿಜೇಂದರ್ ಈವರೆಗೆ ಸೋತಿಲ್ಲ. ಈ ಬಾರಿ ಅವರು ತವರಿನಲ್ಲೇ ಸೋಲುವುದನ್ನು ಎಲ್ಲರೂ ಕಾಣಲಿದ್ದಾರೆ’ ಎಂದು ಅಮುಜು ಸವಾಲೆಸೆದಿದ್ದಾರೆ. ಜತೆಗೆ ಯಾವ ರೀತಿಯಲ್ಲಿ ವಿಜೇಂದರ್ ಅವರನ್ನು ಮಣಿಸಲಿದ್ದೇನೆ ಎಂಬುದನ್ನೂ ಬಣ್ಣಿಸಿದ್ದಾರೆ!
“ನಾನು ಈವರೆಗೆ ವಿಜೇಂದರ್ ಹೆಸರನ್ನು ಕೇಳಿದ್ದೇನೆಯೇ ಹೊರತು ಅವರ ಸ್ಪರ್ಧೆಗಳನ್ನು ಕಂಡಿಲ್ಲ. ವೃತ್ತಿಪರ ಬಾಕ್ಸಿಂಗ್‌ನಲ್ಲಿ ನಾನು ವಿಜೇಂದರ್‌ಗಿಂತ ಹೆಚ್ಚು ಅನುಭವಿ. ಅವರು ಒಲಿಂಪಿಕ್ಸ್ ಪದಕವೊಂದನ್ನು ಹೊಂದಿದ್ದಾರೆಂಬುದು ಗೊತ್ತು. ಅವರಿಗೆ ತವರಿನಲ್ಲೇ ಮೊದಲ ಸೋಲಿನ ರುಚಿ ತೋರಿಸಲಿದ್ದೇನೆ. ವಿಜೇಂದರ್ ಸಿನಿಮಾದಲ್ಲಿ ನಟಿಸುವುದೂ ತಿಳಿದಿದೆ. ಬಾಕ್ಸಿಂಗಿನಲ್ಲೂ ಅವರೋರ್ವ ನಟ, ಅಷ್ಟೇ…’ ಎಂದು ಕಾಲೆಳೆದಿದ್ದಾರೆ ಅಮುಜು. ವಿಜೇಂದರ್ ಎಲ್ಲ 9 ಪಂದ್ಯಗಳಲ್ಲಿ ಗೆದ್ದು ಡಬ್ಲ್ಯುಬಿಒ ಏಶ್ಯ ಫೆಸಿಪಿಕ್ ಮತ್ತು ಓರಿಯಂಟನ್ ಸೂಪರ್ ಮಿಡಲ್‌ವೇಟ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದೇ ರೀತಿ ಅರ್ನೆಸ್ಟ್ ಅಮುಜು ಆಡಿರುವ 25 ಪಂದ್ಯಗಳಲ್ಲಿ 23ನ್ನು ಗೆದ್ದು (21 ನಾಕೌಟ್ ಸ್ಪರ್ಧೆಗಳು) ಇತಿಹಾಸ ನಿರ್ಮಿಸಿದ್ದಾರೆ. ಹೀಗಾಗಿ ಇಬ್ಬರ ನಡುವಿನ ಕಾದಾಟ ತೀವ್ರ ಕುತೂಹಲ ಹುಟ್ಟಿಸಿದೆ.
Related Articles
Advertisement