Advertisement

ಭಾರತ ಮೂಲದ ರಾಧಾ ಅಯ್ಯಂಗಾರ್‌ America ಉಪ ಸಚಿವೆ

10:51 PM Apr 21, 2023 | Team Udayavani |

ವಾಷಿಂಗ್ಟನ್‌: ಭಾರತ ಮೂಲದ ರಾಧಾ ಅಯ್ಯಂಗಾರ್‌ ಪ್ಲಂಬ್‌ ಅಮೆರಿಕದ ರಕ್ಷಣಾ ಖಾತೆಯ ಉಪ ಸಚಿವೆಯಾಗಿ ನೇಮಕಗೊಂಡಿದ್ದಾರೆ. ಈ ಮೂಲಕ ಅಧ್ಯಕ್ಷ ಜೋ ಬೈಡನ್‌ ಅವರ ಆಡಳಿತಾವಧಿಯಲ್ಲಿ ದೇಶದ ಮಹತ್ತರ ಹುದ್ದೆಗಳಿಗೆ ಸೇರ್ಪಡೆಗೊಂಡಿರುವ ಭಾರತೀಯರ ಸಾಲಿಗೆ ರಾಧಾ ಕೂಡ ಸೇರ್ಪಡೆಯಾಗಿದ್ದಾರೆ. ಸದ್ಯ ಅವರು ರಕ್ಷಣಾ ಸಚಿವಾಲಯದ ಸಿಬ್ಬಂದಿ ಮುಖ್ಯಸ್ಥರಾಗಿದ್ದಾರೆ. ಸೆನೆಟ್‌ನಲ್ಲಿ 68-30 ಮತಗಳೊಂದಿಗೆ ನೇಮಕ ದೃಢಪಟ್ಟಿದೆ. ರಕ್ಷಣಾ ಸಚಿವಾಲಯದ ಹುದ್ದೆಗಳಿಗೂ ಮುನ್ನ ರಾಧಾ,ಗೂಗಲ್‌ನಲ್ಲಿ ಭದ್ರತಾ ಸುರಕ್ಷತೆ ವಿಭಾಗ, ಫೇಸ್‌ಬುಕ್‌ನಲ್ಲಿ ನೀತಿ ವಿಶ್ಲೇಷಣೆಯ ಜಾಗತಿಕ ಮುಖ್ಯಸ್ಥರಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next