Advertisement

ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್: ಜಾವೆಲಿನ್ ಥ್ರೋ ಫೈನಲಿಗೆ ಲಗ್ಗೆ ಇಟ್ಟ ಅನ್ನು ರಾಣಿ

09:12 AM Oct 01, 2019 | Hari Prasad |

ದೋಹಾ: ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಅಗ್ರಮಾನ್ಯ ಜಾವೆಲಿನ್ ಎಸೆತಗಾರ್ತಿ ಅನ್ನು ರಾಣಿ ಅವರು ಮಹಿಳಾ ವಿಭಾಗದಲ್ಲಿ ಫೈನಲ್ ಸುತ್ತಿಗೆ ಲಗ್ಗೆಯಿರಿಸಿದ ಸಾಧನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಮುರಿದ ರಾಣಿ ಫೈನಲ್ ಹಂತಕ್ಕೇರಿದರು. ಮಾತ್ರವಲ್ಲದೇ ವಿಶ್ವ ಚಾಂಪಿಯನ್ ಕೂಟದ ಮಹಿಳೆಯರ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಫೈನಲ್ ತಲುಪಿದ ಪ್ರಪ್ರಥಮ ಭಾರತೀಯಳೆಂಬ ಹೆಗ್ಗಳಿಕೆಗೂ ಅನ್ನು ರಾಣಿ ಅವರು ಪಾತ್ರರಾದರು.

Advertisement

ತನ್ನ ಎರಡನೇ ಸುತ್ತಿನ ಎಸೆತದಲ್ಲಿ ಅನ್ನು ರಾಣಿ ಅವರು 62.43 ಮೀಟರ್ ದೂರಕ್ಕೆ ಜಾವೆಲಿನ್ ಎಸೆದರು. ಈ ಹಿಂದೆ ಮಾರ್ಚ್ ತಿಂಗಳಿನಲ್ಲಿ ಅವರು 62.34 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ರಾಷ್ಟ್ರೀಯ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದರು.

ಗ್ರೂಪ್ ಎ ವಿಭಾಗದಲ್ಲಿ ಅನ್ನು ರಾಣಿ ಅವರು ತೃತೀಯ ಸ್ಥಾನಿಯಾಗಿ ತನ್ನ ಸ್ಪರ್ಧೆಯನ್ನು ಮುಗಿಸಿದರು ಹಾಗೂ ಅರ್ಹತಾ ಸುತ್ತಿನಲ್ಲಿ ಉತ್ತಮ ನಿರ್ವಹಣಗಾರ್ತಿಯಾಗಿ ಫೈನಲ್ ಸುತ್ತಿಗೆ ತೇರ್ಗಡೆ ಹೊಂದಿದರು. ಈ ವಿಭಾಗದ ಫೈನಲ್ ಮಂಗಳವಾರದಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next