ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಸಿಂಧೂ ನದಿಗೆ ಅಡ್ಡವಾಗಿ ಭಾರತೀಯ ಸೇನೆ ಸೇತುವೆಯನ್ನು ನಿರ್ಮಿಸಿದೆ.
ಭಾರತೀಯ ಸೇನೆಯ ಎಂಜಿನಿಯರಿಂಗ್ ಕೌಶಲ್ಯಕ್ಕೆ ಇದು ಮತ್ತೊಂದು ಉದಾಹರಣೆಯಾಗಿ ನಿಂತಿದೆ.
“ಸೇತುವೆ ನಿರ್ಮಾಣದ ಸವಾಲು-ಯಾವುದೇ ಭೂಪ್ರದೇಶ ಅಥವಾ ಎತ್ತರದ ಪ್ರದೇಶ ಅಡಚಣೆಯಲ್ಲ’ ಎಂಬ ಟೈಟಲ್‌ನೊಂದಿಗೆ ಭಾರತೀಯ ಸೇನೆಯ ಸೌತ್ ವೆಸ್ಟರ್ನ್ ಕಮಾಂಡ್ ಸೇತುವೆ ನಿರ್ಮಾಣದ ವಿಡಿಯೋ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
ಪೂರ್ವ ಲಡಾಖ್‌ನಲ್ಲಿ ಸಪ್ತ ಶಕ್ತಿ ಎಂಜಿನಿಯರ್ ವತಿಯಿಂದ ಈ ಸೇತುವೆ ನಿರ್ಮಿಸಲಾಗಿದೆ. ಸೇತುವೆ ನಿರ್ಮಾಣ ಕಾರ್ಯವು ಚಲನಶೀಲ ಚಟುವಟಿಕೆ ಮತ್ತು ತರಬೇತಿ ಒಳಗೊಂಡಿತ್ತು. ಇದರಿಂದ ಯುದ್ಧ ಸಾಮಾಗ್ರಿ ಮತ್ತು ಇತರೆ ಲಾಜಿಸ್ಟಿಕ್ ಸಾಗಾಟಕ್ಕೆ ಸಹಕಾರಿಯಾಗಿದೆ.
Related Articles
ಭಾರಿ ಲೋಹದ ವಸ್ತುಗಳನ್ನು ನದಿಗೆ ಹಾಕುತ್ತಿರುವುದು, ಸೇತುವೆ ನಿರ್ಮಾಣ ಕಾರ್ಯ, ಸೇನಾ ಸಿಬ್ಬಂದಿಯಿಂದ ಸಂಘಟಿತ ಚಟುವಟಿಕೆಗಳು ಮತ್ತು ಅಂತಿಮವಾಗಿ ಸೇತುವೆ ನಿರ್ಮಾಣಗೊಂಡ ನಂತರ ಅದರ ಮೇಲೆ ಭಾರಿ ಗಾತ್ರದ ಟ್ರಕ್‌ಗಳ ಸಾಗಾಟವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಇನ್ನೊಂದೆಡೆ, ಲಡಾಖ್ ಸೆಕ್ಟರ್‌ಗೆ ಎರಡು ದಿನಗಳ ಭೇಟಿಯಲ್ಲಿರುವ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಭಾನುವಾರ ಭಾರತೀಯ ವಾಯುಪಡೆಗೆ ಸೇರಿದ ಅಪಾಚೆ ಯುದ್ಧ ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸಿದರು.
ಪೂರ್ವ ಲಡಾಖ್‌ನಲ್ಲಿನ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನದೊಂದಿಗೆ ಮಿಲಿಟರಿ ಬಿಕ್ಕಟ್ಟಿನ ಆರಂಭದಿಂದಲೂ ಅಪಾಚೆ ಹೆಲಿಕಾಪ್ಟರ್‌ಗಳನ್ನು ಲಡಾಖ್ ಸೆಕ್ಟರ್‌ನಲ್ಲಿ ನಿಯೋಜಿಸಲಾಗಿದೆ.