Advertisement
10 ವರ್ಷಗಳಿಂದ ಭಾರತ ಉಭಯ ನೆರೆ ರಾಷ್ಟ್ರಗಳ ಆಕ್ರಮಣಕ್ಕೆ ಉತ್ತರ ಕೊಡಲು ಸೇನೆಯನ್ನು ಬಲಪಡಿಸಿಕೊಂಡು ಬಂದಿದೆ.
Related Articles
Advertisement
ಹುತಾತ್ಮರಿಗೆ ವೈಟ್‌ಹೌಸ್ ಸಂತಾಪ: ಗಾಲ್ವಾನ್‌ನಲ್ಲಿ ಹುತಾತ್ಮರಾದ 20 ಭಾರತೀಯ ವೀರ ಯೋಧರಿಗೆ ವೈಟ್‌ಹೌಸ್ ಸಂತಾಪ ಸೂಚಿಸಿದೆ.
ಮುಂದೂಡಿಕೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಶುಕ್ರವಾರದ ಲಡಾಖ್ ಭೇಟಿ ಮುಂದೂಡಲ್ಪಟ್ಟಿದೆ. ಶೀಘ್ರವೇ ಹೊಸ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ.
ಚೀನ ಮೇಲೆ ಡಿಜಿಟಲ್ ಸ್ಟ್ರೈಕ್: ರವಿಶಂಕರ್ದೇಶದ ಜನರ ಸುರಕ್ಷತೆಗಾಗಿ 59 ಚೀನೀ ಆ್ಯಪ್ ಗಳಳನ್ನು ನಿಷೇಧಿಸಿದ್ದೇವೆ. ಇದು ಚೀನದ ಮೇಲೆ ಭಾರತ ಕೈಗೊಂಡಿರುವ ಡಿಜಿಟಲ್ ಸ್ಟ್ರೈಕ್ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವ್ಯಾಖ್ಯಾನಿಸಿದ್ದಾರೆ. ‘ಈಗ ನೀವು ಎರಡು “ಸಿ’ಗಳನ್ನು ಕೇಳುತ್ತಿದ್ದೀರಿ. ಒಂದು ಕೋವಿಡ್ 19 ವೈರಸ್ ಮತ್ತೂಂದು ಚೀನ. ನಾವು ಶಾಂತಿಯ ಮೇಲೆ ನಂಬಿಕೆ ಇಟ್ಟಿದ್ದೇವೆ. ಚರ್ಚೆಯ ಮೂಲಕ ಗಡಿಬಿಕ್ಕಟ್ಟಿಗೆ ಪರಿಹಾರ ಬಯಸುತ್ತಿದ್ದೇವೆ. ಆದರೆ ಯಾರಾದರೂ ದುಷ್ಟರು ವಿನಾಕಾರಣ ನಮ್ಮ ಮೇಲೆ ಕಣ್ಣುಹಾಕಿದರೆ ಅತ್ಯಂತ ಸಮರ್ಥವಾಗಿ ಪ್ರತ್ಯುತ್ತರ ನೀಡುತ್ತೇವೆ’ ಎಂದು ಚೀನಕ್ಕೆ ಎಚ್ಚರಿಸಿದರು. ‘ಗೂಗಲ್ ಸೂಚನೆ: ಚೀನೀ ಆ್ಯಪ್ ಗಳ ನಿಷೇಧದ ಕುರಿತು ಗೂಗಲ್ ಸಂಬಂಧಪಟ್ಟ ಆ್ಯಪ್ ಡೆವಲಪರ್‌ಗಳಿಗೆ ಅಧಿಕೃತವಾಗಿ ಸೂಚನೆ ರವಾನಿಸಿದೆ. ಮ್ಯಾನ್ಮಾರ್ ಉಗ್ರರ ಜತೆ ಚೀನ ಗೆಳೆತನ
ಪಾಕ್, ನೇಪಾಲವನ್ನು ಚೀನವು ಭಾರತದ ಮೇಲೆ ಛೂಬಿಟ್ಟಿದ್ದಾಯ್ತು. ಈಗ ಆಗ್ನೇಯ ಏಷ್ಯಾದ ಆಪ್ತಮಿತ್ರ ಮ್ಯಾನ್ಮಾರ್ ಅನ್ನು ಭಾರತದ ಮೇಲೆ ಎತ್ತಿಕಟ್ಟುವ ಸಾಧ್ಯತೆ ದಟ್ಟವಾಗಿದೆ. ಮ್ಯಾನ್ಮಾರ್‌ನ ಉಗ್ರ ಸಂಘಟನೆಗಳನ್ನು ಇದಕ್ಕಾಗಿಯೇ ಚೀನ ಹಲವು ವರ್ಷಗಳಿಂದ ಸಾಕಿದೆ. ರಷ್ಯಾದ ಸರ್ಕಾರಿ ಟಿವಿ ಚಾನಲ್‌ಗೆ ಸಂದರ್ಶನ ನೀಡಿದ ಮ್ಯಾನ್ಮಾರ್‌ನ ಜನರಲ್ ಮಿನ್ ಆಂಗ್ ಹ್ಲೇಂಗ್ ಈ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಅರಾಕನ್ ಉಗ್ರ ಪಡೆಗಳಿಂದ ಚೀನ ಜಾಗತಿಕ ಸಹಕಾರ ಬಯಸುತ್ತಿದೆ. ಇದಕ್ಕಾಗಿ ಈ ಉಗ್ರರಿಗೆ ಶಸ್ತ್ರಾಸ್ತ್ರ ಗಳನ್ನು ಖರೀದಿಸಲು ಅಪಾರ ಪ್ರಮಾಣದಲ್ಲಿ ದುಡ್ಡು ಸುರಿಯುತ್ತಿದೆ’ ಎಂದು ಹೇಳಿದ್ದಾರೆ. ಚೀನದ ಈ ಪಿತೂರಿ ಬಗ್ಗೆ ಮ್ಯಾನ್ಮಾರ್ ಆಕ್ಷೇಪ ತೆಗೆದಿದೆ. ಚೀನ ನಿಲುವಿಗೆ ತಡೆ
ಕರಾಚಿಯಲ್ಲಿರುವ ಪಾಕಿಸ್ಥಾನ ಸ್ಟಾಕ್‌ಎಕ್ಸ್‌ಚೇಂಜ್ ಕಟ್ಟಡ ಮೇಲಿನ ದಾಳಿಗೆ ಭಾರತವೇ ಕಾರಣ ಎಂಬ ನಿರ್ಣಯ ಅಂಗೀಕರಿಸುವ ಬಗ್ಗೆ ಚೀನ ಕಿತಾಪತಿ ನಡೆಸಿತ್ತು. ಈ ಬಗ್ಗೆ ಸಿದ್ಧಪಡಿಸಲಾಗಿರುವ ನಿರ್ಣಯಕ್ಕೆ ಅಮೆರಿಕ ಮತ್ತು ಜರ್ಮನಿ ತಡೆಯೊಡ್ಡಿವೆ. ಮಂಗಳವಾರ ಈ ಘಟನೆ ನಡೆದಿದೆ. ಪಾಕಿಸ್ಥಾನ ಸರಕಾರ ಘಟನೆಗೆ ಭಾರತವೇ ಕಾರಣ ಎಂದು ದೂರಿತ್ತು. ಅದನ್ನು ಆಧರಿಸಿ ಚೀನ ವಿಶ್ವಸಂಸ್ಥೆಯಲ್ಲಿ ಭಾರತದ ವರ್ಚಸ್ಸಿಗೆ ಚ್ಯುತಿ ತರುವ ಯತ್ನಕ್ಕೆ ಭಾರಿ ಹಿನ್ನಡೆಯಾಗಿದೆ. ಅಧಿಕಾರಿಗಳ ಹೆಚ್ಚಳ: ಕಠ್ಮಂಡುವಿನಲ್ಲಿರುವ ಚೀನ ರಾಯಭಾರ ಕಚೇರಿಯಲ್ಲಿ ಬೇಹುಗಾರರ ಸಂಖ್ಯೆ ಹೆಚ್ಚಿಸಿದೆ. ಈ ಮೂಲಕ ನೇಪಾಲದಲ್ಲಿ ಪ್ರಭಾವ ಹೆಚ್ಚಿಸುವ ಪ್ರಯತ್ನ ಮಾಡಿದೆ. ವೈದ್ಯರ ರೂಪದಲ್ಲಿ ಅವರು ನೇಪಾಲದಲ್ಲಿ ಭಾರತ ವಿರೋಧಿ ಧೋರಣೆ ಬೆಳೆಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಭಾರತ ವಿರೋಧಿ ಹೇಳಿಕೆಯಿಂದ ಅಧಿಕಾರ ಕಳೆದುಕೊಳ್ಳುವ ಹಂತದಲ್ಲಿ ರುವ ಪ್ರಧಾನಿ ಕೆ.ಪಿ.ಓಲಿ ಸಂಸತ್ ಅಧಿವೇಶನ ಮುಂದೂಡುವ ಬಗ್ಗೆ ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿಯ ಒಪ್ಪಿಗೆ ಪಡೆದಿದ್ದಾರೆ. ಭಾರತದಲ್ಲಿ ಚೀನೀ ಮಾಧ್ಯಮ ನಿರ್ಬಂಧಿಸಿ: ಐಎನ್‌ಎಸ್ ಒತ್ತಾಯ
ಚೀನದಲ್ಲಿ ಭಾರತದ ಸುದ್ದಿಪತ್ರಿಕೆಗಳ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಭಾರತದಲ್ಲೂ ಚೀನೀ ಸುದ್ದಿವಾಹಿನಿ, ಪತ್ರಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂದು ದಿ ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿ (ಐಎನ್‌ಎಸ್) ಕೇಂದ್ರ ಸರಕಾರಕ್ಕೆ ಒತ್ತಾಯಿಸಿದೆ. ಭಾರತೀಯ ಮಾಧ್ಯಮ ಸಂಸ್ಥೆಗಳಲ್ಲಿ ಚೀನ ಹೂಡಿಕೆ ಮಾಡಿದ್ದರೆ, ಕೂಡಲೇ ಅಂಥ ಚೀನೀ ಕಂಪೆನಿಗಳ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದೆ. ಮಾಧ್ಯಮಗಳು ಬೇಜವಾಬ್ದಾರಿಯಿಂದ ಈ ವರದಿ ಮಾಡಿವೆ. ಸ್ಕಾರ್ಡು ವಾಯುನೆಲೆಯನ್ನು ಚೀನ ಬಳಸುತ್ತಿದೆ ಎನ್ನುವ ಸುದ್ದಿ ಕೂಡ ಸುಳ್ಳು. ಪಾಕಿಸ್ಥಾನ ಭಾರತದ ಗಡಿಯಲ್ಲಿ ಸೇನೆ ನಿಯೋಜಿಸಿ ಯುದ್ಧಕ್ಕೆ ಪ್ರಚೋದನೆ ನೀಡುತ್ತಿಲ್ಲ. ಪಾಕಿಸ್ಥಾನದಲ್ಲಿ ಚೀನ ಸೈನ್ಯದ ಉಪಸ್ಥಿತಿಯನ್ನು ಕೂಡ ನಾವು ನಿರಾಕರಿಸುತ್ತೇವೆ
– ಮೇ.ಜ. ಬಾಬರ್ ಇಫ್ತಿಖಾರ್, ಪಾಕ್ ಸೇನೆಯ ಅಧಿಕಾರಿ