Advertisement
ಪರ್ವತ ಪ್ರದೇಶಗಳಲ್ಲಿ ಯುದ್ಧ ನಡೆಸುವ ನಿಟ್ಟಿನಲ್ಲಿ ಅನುಕೂಲವಾಗುವಂತೆ ಭೂಸೇನೆ “ಜೋರಾವರ್’ ಎಂಬ ಹಗುರ ಯುದ್ಧ ಟ್ಯಾಂಕ್‌ಗಳನ್ನು ಸೇರ್ಪಡೆಗೊಳಿಸಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಹಲವು ವರ್ಷಗಳು ಬೇಕಾಗುವ ಸಾಧ್ಯತೆ ಇದೆ.
Related Articles
25 ಟನ್ ಸಾಮರ್ಥ್ಯ ಇರುವ ಯುದ್ಧ ಟ್ಯಾಂಕ್. ಸಾಮಾನ್ಯವಾಗಿ ಬಳಕೆಯಾಗುವಂಥ ಟ್ಯಾಂಕ್‌ನಂತೆಯೇ ಕೆಲಸ ಮಾಡಲಿದೆ. ಒಂದು ಕಾಲದಲ್ಲಿ ಜಮ್ಮುವನ್ನು ಆಳುತ್ತಿದ್ದ ರಾಜಾ ಗುಲಾಬ್ ಸಿಂಗ್‌ನ ಸೇನಾಪತಿ ಜೋರಾವರ್ ಸಿಂಗ್ ಖಲೂರಿಯಾ ಅವರ ಹೆಸರನ್ನು ಯೋಜನೆಗೆ ಇರಿಸಲಾಗಿದೆ. ಖಲೂರಿಯಾ ಅವರು ಲಡಾಖ್ ಅನ್ನು ಗೆದ್ದು ಸಾಮರ್ಥ್ಯ ಮೆರೆದಿದ್ದರು. ಸುಮಾರು 350 ಟ್ಯಾಂಕ್‌ಗಳನ್ನು ಉತ್ಪಾದಿಸುವ ಬಗ್ಗೆ ಕೇಂದ್ರ ಸರಕಾರ ಗುರಿ ಹಾಕಿಕೊಂಡಿದೆ. ಅದು ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಿಯೂ ಕೆಲಸ ಮಾಡಲಿದೆ.
Advertisement