Advertisement
ಜಗತ್ತಿನ ಒಟ್ಟು 145 ರಾಷ್ಟ್ರಗಳು ಹೊಂದಿರುವ ವಿವಿಧ ತಾಂತ್ರಿಕ ಮತ್ತು ಶಸ್ತ್ರಾಸ್ತ್ರ ಸೇರಿದಂತೆ 60 ಅಂಶಗಳನ್ನು ಪರಿಗಣಿಸಿ ರ್‍ಯಾಂಕ್‌ಗಳನ್ನು ಬಿಡುಗಡೆ ಮಾಡಿದೆ. ಆಯಾ ಸರ್ಕಾರಗಳು ನೀಡುತ್ತಿರುವ ಮೊತ್ತ, ಭೌಗೋಳಿಕ ಪರಿಸರವೂ ಅದರಲ್ಲಿ ಒಳಗೊಂಡಿದೆ. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ದೇಶದಲ್ಲಿಯೇ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಉತ್ಪಾದನೆ ಮಾಡುವುದರ ಬಗ್ಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಇದರಿಂದಾಗಿ ಜಗತ್ತಿನ ಪ್ರಮುಖ ಕಂಪನಿಗಳು ಇಲ್ಲಿಯೇ ಉತ್ಪಾದನೆ ಮಾಡುವಂತಾಗಿದೆ.ಈ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ಇದೆ. ರಷ್ಯಾ, ಚೀನಾ 2 ಮತ್ತು 3ನೇ ಸ್ಥಾನದಲ್ಲಿವೆ. ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನ 9ನೇ ಸ್ಥಾನದಲ್ಲಿ ಇದೆ. ಇನ್ನು ಭಾರತ ಮತ್ತೂಂದು ಪುಟ್ಟ ನೆರೆಯ ರಾಷ್ಟ್ರ ಕೊನೆಯ ಹತ್ತು ರಾಷ್ಟ್ರಗಳ ಸಾಲಿನಲ್ಲಿದೆ.
ರಾಷ್ಟ್ರ ರ್‍ಯಾಂಕ್
ಅಮೆರಿಕ 1
ರಷ್ಯಾ 2
ಚೀನಾ 3
ದ.ಕೊರಿಯಾ 5
ಯು.ಕೆ. 6
ಜಪಾನ್ 7
ಟರ್ಕಿ 8
ಪಾಕಿಸ್ತಾನ 9
ಇಟೆಲಿ 10