ನವದೆಹಲಿ: ಭಾರತೀಯ ಸೇನೆಯ ಯೋಧರೊಬ್ಬರಿಗೂ ಕೊರೊನಾ ವೈರಸ್ ಇರುವುದು ಧೃಢಪಟ್ಟಿದೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.
ಮಂಗಳವಾರ ಲಡಾಕ್ ನ ಯೋಧರೊಬ್ಬರಿಗೆ ಕೋವಿಡ್19 ಇರುವುದು ಪತ್ತೆಯಾಗಿತ್ತು. ಇತ್ತೀಚಿಗಷ್ಟೇ ಇವರ ತಂದೆ, ಕೊರೊನಾಗೆ ಅತೀ ಹೆಚ್ಚು ಭಾಧೀತವಾದ ದೇಶವಾಗಿರುವ ಇರಾನ್ ನಿಂದ ಹಿಂದಿರುಗಿದ್ದರು.ಇವರಿಗೂ ಕೂಡ ವೈರಸ್ ಇರುವುದು ಖಚಿತವಾಗಿತ್ತು.
ಇದೀಗ ಯೋಧ ಸೇರಿದಂತೆ, ಕುಟುಂಬಸ್ಥರನ್ನೂ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿದೆ.
ಸದ್ಯ ಭಾರತದಲ್ಲಿ ಕೊರೊನಾ ವೈರಸ್ ವ್ಯಾಪಿಸುವಿಕೆ ಪ್ರಮಾಣ 2ನೇ ಹಂತದಲ್ಲಿದೆ.ಈ ಸೋಂಕು ಸ್ಥಳೀಯವಾಗಿಯೇ ಹಬ್ಬಿದಿಯೇ ವಿನಃ ಇನ್ನ ಸಾಮೂದಾಯಿಕ ಹಂತಕ್ಕೆ ತಲುಪಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಢಳಿಯ ಮಹಾನಿರ್ದೇಶಕ ಬಲರಾಮ್ ಭಾರ್ಗವ ತಿಳಿಸಿದ್ದಾರೆ.
ಜಾಗತಿಕವಾಗಿ ಸೋಂಕು ತಗುಲಿದವರ ಪ್ರಮಾಣ 1,87,689 ಕ್ಕೆ ಏರಿಕೆಯಾಗಿದೆ. ಮಾತ್ರವಲ್ಲದೆ ಮೃತಪಟ್ಟವರ ಸಂಖ್ಯೆ 7,866ಕ್ಕೆ ಜಿಗಿದಿದೆ.